Actress Pavitra Lokesh and Suchendra Prasad: ನಟಿ ಪವಿತ್ರಾ ಲೋಕೇಶ್, ಸುಚೇಂದ್ರ ಪ್ರಸಾದ್ ಅವರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ಸ್ವತಃ ಪವಿತ್ರಾ ತಾಯಿಯೇ ಹೇಳಿದ್ದಾರೆ.
ಬಹುಭಾಷಾ ನಟಿ ಪವಿತ್ರಾ ಲೋಕೇಶ್ ( Pavitra Lokesh ) ಹಾಗೂ ನಟ ನರೇಶ್ ಅವರು ಸದ್ಯ ಲಿವ್ ಇನ್ ಟುಗೇದರ್‌ನಲ್ಲಿದ್ದಾರೆ. ಈ ವಿಷಯವನ್ನು ಈ ಜೋಡಿಯೇ ಎಲ್ಲರ ಮುಂದೆ ಹೇಳಿಕೊಂಡಿದೆ. ಆದರೆ ಪವಿತ್ರಾ ಹಾಗೂ ಸುಚೇಂದ್ರ ಪ್ರಸಾದ್‌ಗೆ ಇಬ್ಬರು ಮಕ್ಕಳಿವೆ. ಈ ಬಗ್ಗೆ ಪವಿತ್ರಾ ತಾಯಿ ಹೇಳಿದ್ದಾರೆ.
ಪವಿತ್ರಾ ಲೋಕೇಶ್ ಅವರಿಗೆ ಮೊದಲು ಮದುವೆಯಾಗಿತ್ತು. ಆ ಬಳಿಕ ಅವರು ಸುಚೇಂದ್ರ ಪ್ರಸಾದ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಈಗ ನರೇಶ್ ಜೊತೆ ಲಿವ್ ಇನ್ ಅಲ್ಲಿದ್ದಾರೆ.
ಸಾಫ್ಟ್‌ವೇರ್ ಉದ್ಯೋಗಿ ಜೊತೆ ಪವಿತ್ರಾ ಮದುವೆ!
“ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ಪವಿತ್ರಾ ಲೋಕೇಶ್‌ಗೆ ಮದುವೆಯಾಗಿತ್ತು. ಅವರು ಹೈದರಾಬಾದ್‌ನವರು. ನಾವು ವರದಕ್ಷಿಣೆ ಎಲ್ಲವನ್ನು ಕೊಟ್ಟಿದ್ದೆವು. ನಾನು ಶೂಟಿಂಗ್‌ಗೆ ಹೋದ ಕಡೆ ನನ್ನ ಗಂಡ ಬಂದು ಆ ಸೀನ್ ಯಾಕೆ ಮಾಡ್ತೀಯಾ? ಈ ಸೀನ್ ಯಾಕೆ ಮಾಡ್ತೀಯಾ ಅಂತ ಟಾರ್ಚರ್ ಮಾಡ್ತಿದ್ದಾರೆ. ನನ್ನ ಕಾರ್ ಮಾರು ಅಂತ ಹೇಳ್ತಾರೆ. ನನ್ನ ಬಾಂಡಿಂಗ್, ಬಂಗಾರ, ವಸ್ತುಗಳೆಲ್ಲವನ್ನೂ ತಗೊಂಡಿದ್ದಾರೆ ಅಮ್ಮ ಅಂತ ಪವಿತ್ರಾ ನನಗೆ ಹೇಳಿದಳು. ಮನೆಯಲ್ಲಿ ಅವಳಿಗೆ ಊಟ ತಿಂಡಿ ಕೂಡ ಕೊಡುತ್ತಿರಲಿಲ್ಲ. ಶೂಟಿಂಗ್ ಮುಗಿಸಿ ಮನೆಗೆ ಬಂದರೆ, ಯಾಕೆ ಬ್ಯಾಗ್ ಒಪನ್ ಮಾಡ್ತೀಯಾ? ಮತ್ತೆ ಶೂಟಿಂಗ್‌ಗೆ ಹೋಗಬೇಕು ಅಲ್ವಾ? ಅಲ್ಲೇ ಇರು ಅಂತ ಹೇಳುತ್ತಿದ್ದರು” ಎಂದು ಪವಿತ್ರಾ ಲೋಕೇಶ್ ತಾಯಿ ಹೇಳಿದ್ದಾರೆ.
ಸುಚೇಂದ್ರ ಪ್ರಸಾದ್-ಪವಿತ್ರಾ ರಿಲೇಶನ್‌ಶಿಪ್ ಕಥೆ ಏನು?
“ಮದುವೆಯಾಗಿ ಎರಡು ತಿಂಗಳಿಗೆ ಪವಿತ್ರಾ, ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಳು. ಅವಳು ಮೈಸೂರಿಗೆ ಬಂದು ಮತ್ತೆ ನಟಿಸ್ತೀನಿ ಅಂತ ಹೇಳಿದಳು. ನಾಗತೀಹಳ್ಳಿ ಚಂದ್ರಶೇಖರ್ ಅವರ ಧಾರಾವಾಹಿಯಲ್ಲಿ ಪವಿತ್ರಾ ನಟಿಸುತ್ತಿದ್ದಳು, ಆಗ ಸುಚೇಂದ್ರ ಪ್ರಸಾದ್ ಹೀರೋ ಆಗಿದ್ದರು. ಸುಚೇಂದ್ರ ಕೂಡ ಮೊದಲ ಮದುವೆಯಿಂದ ಹೊರಗಡೆ ಬಂದಿದ್ದರು. ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ಲಿವ್ ಇನ್ ಟುಗೇದರ್ ಅಲ್ಲಿದ್ದರು. ಈ ವಿಷಯ ನನಗೆ ಗೊತ್ತಾದಾಗ ನಾನು ಸುಚೇಂದ್ರ ಪ್ರಸಾದ್ ಬಳಿ, “ನೀವು ಪವಿತ್ರಾ ಅವರನ್ನು ಮದುವೆ ಆಗೋದಿಲ್ಲ ಅಂತ ಹೇಳಿದ್ದೀರಿ. ಹೀಗಿದ್ದಾಗ ಯಾಕೆ ಪವಿತ್ರಾ ಮನೆಗೆ ಬರುತ್ತೀರಿ?” ಅಂತ ಕೇಳಿದ್ದೆ. ಆದರೂ ಇವರಿಬ್ಬರು ಒಟ್ಟಿಗಿದ್ದರು. ಇವರಿಬ್ಬರು ಒಟ್ಟಿಗೆ ಇದ್ದು ಮೂರು ನಾಲ್ಕು ವರ್ಷಗಳ ಬಳಿಕ ಮಕ್ಕಳಾಯ್ತು” ಎಂದು ಪವಿತ್ರಾ ತಾಯಿ ಪಾರ್ವತಿ ಅವರು ಚಿತ್ರಲೋಕ, ಕಾಂ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸುಚೇಂದ್ರ ಪ್ರಸಾದ್, ಪವಿತ್ರಾ ದೂರ ಆಗಿದ್ದು ಯಾಕೆ?
“ಮೊದಲ ಮಗು ಹುಟ್ಟಿದಾಗ ನಾನು ಪವಿತ್ರಾಳ ಬಾಣಂತನ ಮಾಡಿದ್ದೆ. ನಾನು ತುಂಬ ಸಲ ಪವಿತ್ರಾಳನ್ನು ಮದುವೆ ಆಗಿ ಅಂತ ಹೇಳಿದಾಗಲೂ ಕೂಡ ಸುಚೇಂದ್ರ ಪ್ರಸಾದ್ ಕೇಳಲಿಲ್ಲ. ಪವಿತ್ರಾ ಕೂಡ ನನ್ನ ಮಾತು ಕೇಳಲಿಲ್ಲ. ಸುಚೇಂದ್ರ ಪ್ರಸಾದ್ ವಿದ್ಯಾವಂತ, ಅವನ ಜೊತೆ ಮಾತಾಡೋಕೆ ಆಗೋದಿಲ್ಲ, ನಮ್ಮ ಮಾತನ್ನು ಅವರು ಕೇಳಿಸಿಕೊಳ್ಳೋದಿಲ್ಲ. ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ನಡುವೆ ಏನು ಮನಸ್ತಾಪ ಬಂತು ಎನ್ನೋದು ಗೊತ್ತಿಲ್ಲ, ಅವರಿಬ್ಬರು ದೂರ ಆದರು” ಎಂದಿದ್ದಾರೆ ಪವಿತ್ರಾ.
ಕನ್ನಡದಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪವಿತ್ರಾ ನಟಿಸಿದ್ದಾರೆ. ನಟ ಮೈಸೂರು ಲೋಕೇಶ್ ಪುತ್ರಿಯಾಗಿರುವ ಇವರು ʼನಾಯಿ ನೆರಳುʼ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.

