Asianet Suvarna News Asianet Suvarna News

ಡಾಲಿ ಧನಂಜಯ್‌ ಅವರ ಕೆರಿಯರ್‌ನಲ್ಲಿ ಮೈಲುಗಲ್ಲಾಗುವ ಸಿನಿಮಾ 'ಕೋಟಿ': ಪರಮೇಶ್ವರ್ ಗುಂಡ್ಕಲ್

ಇದು ಮಹಾನಗರವೊಂದರ ಸಾಮಾನ್ಯನ ಬದುಕಿನ ಕಥೆ. ಸದ್ಯ ಚಿತ್ರದ ಶೂಟಿಂಗ್‌ ಮುಗಿದು ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಆ ಕಷ್ಟದ ಹಾದಿಯನ್ನು ಮುಗಿಸಿಯೇ ಸಿನಿಮಾ ಅನೌನ್ಸ್‌ ಮಾಡಿದ್ದೇನೆ.

Parameshwar Gundkal Talks Over Kotee Starrer Dolly Dhananjay gvd
Author
First Published Apr 12, 2024, 9:05 PM IST

ಡಾಲಿ ಧನಂಜಯ್ ನಟನೆಯ ಕೋಟಿ ಸಿನಿಮಾ ಮೂಲಕ ಚಾನೆಲ್ ಮುಖ್ಯಸ್ಥರಾಗಿದ್ದ ಪರಮೇಶ್ವರ್ ಗುಂಡ್ಕಲ್ ನಿರ್ದೇಶಕರಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹೊಸ ಸಿನಿಮಾದ ಬಗ್ಗೆ ಪರಮ್ ಮಾತು.

- ‘ಕೋಟಿ’ ಶೀರ್ಷಿಕೆ ಮೂರ್ನಾಲ್ಕು ಲೇಯರ್‌ಗಳಲ್ಲಿ ಸಿನಿಮಾದ ಕಥೆಗೆ ಕನೆಕ್ಟ್‌ ಆಗುತ್ತದೆ. ಕೋಟಿ ಎಂದರೆ ಒಂದರ ಮುಂದೆ ಏಳು ಸೊನ್ನೆ. ಈ ಅಂಕಿಯ ಜೊತೆ ಚಿತ್ರಕ್ಕೆ ಕನೆಕ್ಷನ್‌ ಇದೆ. ಕೋಟಿ ಅನ್ನುವುದು ಹೀರೋನ ಹೆಸರು. ಕೋಟಿ ಅಂದರೆ ದುಡ್ಡಿನ ಇಮೇಜ್‌ ಕಣ್ಮುಂದೆ ಬರುತ್ತೆ. ಗಳಿಕೆಯ ವಿಚಾರ. ಇದೂ ಕಥೆಗೆ ಸಂಬಂಧಿಸಿದ್ದೇ.

ನನ್ನ ಚಿತ್ರದಲ್ಲಿಯೇ ಮಗಳು ಸಿನಿರಂಗಕ್ಕೆ ಬರುತ್ತಿದ್ದಾಳೆ: ಇದು ನನಗೆ ವಿಶೇಷ ಎಂದ ದುನಿಯಾ ವಿಜಯ್‌

- ಈ ಸಿನಿಮಾ ನಾಯಕ ಕೋಟಿ ಮನೆ ಶಿಫ್ಟಿಂಗ್‌ ಮಾಡುವ ಸಾಮಾನ್ಯ ವ್ಯಕ್ತಿ. ಮನೆ, ಆಫೀಸ್‌ ಶಿಫ್ಟಿಂಗ್‌ಗಾಗಿ ಆತನ ಬಳಿ ಟ್ರಕ್‌ ಇದೆ. ಕೋಟಿ ರುಪಾಯಿ ಗಳಿಸುವ ಕನಸು ಅವನದು. ಹೀಗೆ ಅವನ ಕನಸು, ಗುರಿ, ದುಡ್ಡು, ಹೆಸರು ಎಲ್ಲವೂ ಇದೇ ಆಗಿರುವುದರಿಂದ ಆತನ ಜೀವನವೇ ‘ಕೋಟಿ’ ಆಗಿರುತ್ತದೆ.

- ಇದು ಮಹಾನಗರವೊಂದರ ಸಾಮಾನ್ಯನ ಬದುಕಿನ ಕಥೆ. ಸದ್ಯ ಚಿತ್ರದ ಶೂಟಿಂಗ್‌ ಮುಗಿದು ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಆ ಕಷ್ಟದ ಹಾದಿಯನ್ನು ಮುಗಿಸಿಯೇ ಸಿನಿಮಾ ಅನೌನ್ಸ್‌ ಮಾಡಿದ್ದೇನೆ.

- ಮೊದಲಿಂದಲೂ ನನಗೆ ಕತೆ ಹೇಳುವ ಹುಚ್ಚು. ಈವರೆಗೆ ಕಿರುತೆರೆಯಲ್ಲಿ ಕಥೆ ಹೇಳಿದ್ದೆ. ಈಗ ಹೊಸ ಮಾಧ್ಯಮ ಸಿಕ್ಕಿದೆ. ಕತ್ತಲಲ್ಲಿ, ಅನ್‌ಡಿವೈಡೆಡ್‌ ಅಟೆನ್ಶನ್‌ನಲ್ಲಿ ದೊಡ್ಡ ಪರದೆಯ ಮೇಲೆ ಕಥೆ ಹೇಳುವುದು ಎಷ್ಟು ಚಂದ! ಈ ಕನಸಿನೊಂದಿಗೆ ಸಿನಿಮಾ ರಂಗಕ್ಕೆ ಬಂದಿದ್ದೇನೆ.

- ಗೊತ್ತಿಲ್ಲದ ಜಗತ್ತಿಗೆ ಬಂದು ಹೊಸ ಸವಾಲನ್ನು ಸ್ವೀಕರಿಸಲು ಹೋದಾಗ ಅನೇಕ ಸವಾಲುಗಳು ಬರುತ್ತದೆ. ಹಿಂದಿದ್ದ ಸ್ಥಾನಮಾನ, ಸುತ್ತ ಜನ, ಹೆಸರು, ಹುದ್ದೆ, ಈ ಎಲ್ಲದರ ಭ್ರಮೆ ಕಳಚಿ ಬದಿಗಿಟ್ಟು ಹೊಸತಾಗಿ ಎಲ್ಲವನ್ನೂ ಆರಂಭಿಸುವುದು ಸಣ್ಣ ಸವಾಲಲ್ಲ. ಮತ್ತೆ ವಿದ್ಯಾರ್ಥಿಯಾಗುವ, ವಿನಯ, ಕಷ್ಟದ ಜೊತೆ ಹೋಗಬೇಕಾದ ಚಾಲೆಂಜ್‌ ಅದು. ಇದೆಲ್ಲವನ್ನೂ ರೂಢಿಸಿಕೊಳ್ಳಲು ಕೆಲವು ತಿಂಗಳು ಬೇಕಾಯಿತು.

ದಿಶಾ ಪಟಾಣಿ ಧರಿಸಿದ ಮಿನಿ ಡ್ರೆಸ್‌ ಬೆಲೆ ಎಷ್ಟು ಗೊತ್ತಾ? ಅಬ್ಬಬ್ಬಾ.. ನಾವಾಗಿದ್ರೆ ಪರ್ಸನಲ್ ಲೋನ್ ಮಾಡ್ಬೇಕಷ್ಟೆ

- ಈ ಸಿನಿಮಾ ಸ್ಕ್ರಿಪ್ಟ್‌ ಬರೆಯುವಾಗ ಧನಂಜಯ ಜೊತೆಗೆ ಗೆಳೆತನ ಇತ್ತು. ಕೋಟಿ ಪಾತ್ರಕ್ಕೆ ಇವರು ಸರಿ ಹೊಂದುತ್ತಾರಲ್ಲಾ ಅನಿಸಿತ್ತು. ಪ್ರತಿಭಾವಂತ ಕಲಾವಿದ ಡಾಲಿ ಪಾತ್ರದಲ್ಲಿ ನಟಿಸಿಲ್ಲ, ಜೀವಿಸಿದ್ದಾರೆ. ಅವರ ಈವರೆಗಿನ ಸಿನಿಮಾಕ್ಕಿಂತ ಬಹಳ ಭಿನ್ನವಾದ, ಅವರ ಕೆರಿಯರ್‌ನಲ್ಲಿ ಮೈಲುಗಲ್ಲಾಗುವ ಸಿನಿಮಾ ‘ಕೋಟಿ’ ಆಗುತ್ತದೆ ಎಂಬ ವಿಶ್ವಾಸ ನನಗಿದೆ.

Follow Us:
Download App:
  • android
  • ios