Asianet Suvarna News Asianet Suvarna News

ವಿಕ್ರಮ-ಬೇತಾಳ ಖ್ಯಾತಿಯ ಕಾರ್ಟೂನಿಸ್ಟ್‌ ಶಿವಶಂಕರ್‌ ನಿಧನ!

ಮಕ್ಕಳ ಕತೆ ಪುಸ್ತಕಗಳಲ್ಲಿ ಪ್ರಸಿದ್ಧ ಕಥಾ ಪಾತ್ರಗಳಾಗಿದ್ದ ವಿಕ್ರಮ -ಬೇತಾಳ| ವಿಕ್ರಮ-ಬೇತಾಳ ಖ್ಯಾತಿಯ ಕಾರ್ಟೂನಿಸ್ಟ್‌ ಶಿವಶಂಕರ್‌ ನಿಧನ

Vikram Betal Fame Cartoonist Shivashankar Dies at 97 pod
Author
Bangalore, First Published Sep 30, 2020, 8:16 AM IST

ಚೆನ್ನೈ(ಸೆ.30): ಮಕ್ಕಳ ಕತೆ ಪುಸ್ತಕಗಳಲ್ಲಿ ಪ್ರಸಿದ್ಧ ಕಥಾ ಪಾತ್ರಗಳಾಗಿದ್ದ ವಿಕ್ರಮ -ಬೇತಾಳರ ವ್ಯಂಗ್ಯಚಿತ್ರ ಸೃಷ್ಠಿಸಿದ್ದ ಖ್ಯಾತ ಕಲಾವಿದ ಕೆ.ಸಿ ಶಿವಶಂಕರ್‌ ಅವರು ಮಂಗಳವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ 97 ವರ್ಷ ವಯಸ್ಸಾಗಿತ್ತು. ಶಂಕರ್‌ ಎಂದೇ ಖ್ಯಾತಿ ಪಡೆದಿದ್ದ ಅವರು, 12 ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ ಸುಪ್ರಸಿದ್ಧ ಚಂದಮಾಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು.

ಶ್ರೀರಾಮನನ್ನು ಮನೆ ಮನೆಗೆ ತಲುಪಿಸಿದ ನಟರು ಇವರು!

1960ರ ದಶಕದಲ್ಲಿ ಮಕ್ಕಳಲ್ಲಿ ಭಾರೀ ಹಾಸುಹೊಕ್ಕಾಗಿದ್ದ ವಿಕ್ರಮ ಬೇತಾಳರ ಕತೆಗೆ ವ್ಯಂಗ್ಯ ಚಿತ್ರ ರಚಿಸಿ ಖ್ಯಾತಿ ಪಡೆದಿದ್ದರು. ವಿಕ್ರಮ ಕೈಯಲ್ಲಿ ಖಡ್ಗ ಹಿಡಿದುಕೊಂಡು ಬೇತಾಳನ ಶವವನ್ನು ಹೆಗಲಲ್ಲಿ ಹೊತ್ತುಕೊಂಡು ಹೋಗುವ ಚಿತ್ರ ಮೆಚ್ಚುಗೆ ಪಡೆದಿತ್ತು. ಚಂದಮಾಮ ಪತ್ರಿಕೆಯಲ್ಲಿ 60 ವರ್ಷಗಳ ಕಾಲ ಕೆಲಸ ಮಾಡಿದ್ದರು.

Follow Us:
Download App:
  • android
  • ios