ಒಬ್ಬ ಫಿಲ್ಮ್‌ ಎಡಿಟರ್‌ನ ಲೈಫ್‌ಅನ್ನು ಕಾಮಿಡಿಯಾಗಿ ಕಟ್ಟಿಕೊಡುವ ಸಿನಿಮಾವಿದು. ಒಂದು ವಾರದ ಕೆಳಗೆ ರಿಲೀಸ್‌ ಆಗಿರುವ ಚಿತ್ರದ ಟೀಸರ್‌ ಅನ್ನು ಲಕ್ಷಾಂತರ ಜನ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಪಿಆರ್‌ಕೆ ಯೂಟ್ಯೂಬ್‌ ಚಾನೆಲ್‌ನಲ್ಲಿ ‘ಕಟ್ಟಿಂಗ್‌ ಶಾಪ್‌’ನ ಟೈಟಲ್‌ ಸಾಂಗ್‌ ರಿಲೀಸ್‌ ಆಗಿದೆ. ಈ ಹಾಡಿಗೆ ಮೇಕಿಂಗ್‌ ವೀಡಿಯೋ ಬಳಸಲಾಗಿದೆ.

ಫೈಟಿಂಗ್‌ ಸೀನಲ್ಲಿ ನಟ ಶ್ರೀಮುರಳಿ ಕಾಲಿಗೆ ಏಟು; ಮುಂದಕ್ಕೆ ಹೋಯಿತು ಮದಗಜ ಚಿತ್ರೀಕರಣ 

ತಮ್ಮ ಹೊಸ ಪ್ರಯತ್ನದ ಬಗ್ಗೆ ಉತ್ಸಾಹದಿಂದ ಮಾತಾಡುವ ನಿರ್ದೇಶಕ ಪವನ್‌ ಭಟ್‌, ‘ಇದೊಂದು ಡ್ರಾಮಿಡಿ ಸಿನಿಮಾ’ ಎನ್ನುತ್ತಾರೆ. ಡ್ರಾಮಾ ಮತ್ತು ಕಾಮಿಡಿಯನ್ನು ಮಿಕ್ಸ್‌ ಮಾಡಿರುವ ವಿಶಿಷ್ಟಜಾನರ್‌ ಇದು. ‘ಎಡಿಟಿಂಗ್‌ ಟೇಬಲ್‌ ಅನುಭವ, ಸತ್ಯ ಘಟನೆ ಹಾಗೂ ಕಲ್ಪನೆ ಬೆರೆಸಿ ಮಾಡಿರುವ ಸಿನಿಮಾ. ಇದರ ಹೀರೋ ಒಬ್ಬ ಫಿಲಂ ಎಡಿಟರ್‌. ಅವನ ಲೈಫ್‌ ಜರ್ನಿ ಈ ಸಿನಿಮಾದಲ್ಲಿದೆ. ಆತನ ಎಡಿಟಿಂಗ್‌ ಆಸಕ್ತಿ, ಚಿತ್ರರಂಗಕ್ಕೆ ಎಂಟ್ರಿ ಕೊಡೋದು, ನಂತರದ ಗುದ್ದಾಟಗಳು, ಸಣ್ಣ ಮಟ್ಟದಿಂದ ಬಹು ಎತ್ತರಕ್ಕೆ ಬೆಳೆಯುವ ಕಥೆ. ಇಲ್ಲಿ ಕಾಮಿಡಿ ಜೊತೆಗೆ ಭಾವನೆಗಳನ್ನೂ ಬೆರೆಸಲಾಗಿದೆ. ಬಹುಶಃ ಸಿನಿಮಾ ಸಂಕಲನಕಾರನ ಬಗ್ಗೆ ಬರುತ್ತಿರುವ ದೇಶದ ಮೊದಲ ಸಿನಿಮಾ ಇದೇ ಇರಬೇಕು’ ಅಂತಾರೆ ಪವನ್‌.

ರ‍್ಯಾಂಕ್‌ ಸ್ಟೂಡೆಂಟ್‌ ಆದ್ರೂ ಆರ್ಟಿಸ್ಟ್‌ ಅನಿಸಿಕೊಳ್ಳೋದೇ ಇಷ್ಟ: ಶರಣ್ಯ ಶೆಟ್ಟಿ 

ಕೆಬಿ ಪ್ರವೀಣ್‌, ಅರ್ಚನಾ ಕೊಟ್ಟಿಗೆ ನಾಯಕ ನಾಯಕಿಯರು. ದೀಪಕ್‌ ಭಟ್‌, ನವೀನ್‌ ಕೃಷ್ಣ, ಕಾರ್ತಿಕ್‌ ರಾವ್‌ ಕೊರ್ಡೇಲ್‌ ಮುಖ್ಯಪಾತ್ರಗಳಲ್ಲಿದ್ದಾರೆ.