ಯೋಗರಾಜ್‌ ಭಟ್ ಆ್ಯಕ್ಷನ್‌ ಕಟ್‌ ಹೇಳಿದ 'ಮುಂಗಾರು ಮಳೆ' ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಇದಾದ ಮೇಲೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಹೆಚ್ಚಾಗಿ ಸೌಂಡ್‌ ಮಾಡಿದ್ದು ಮಾತ್ರ 'ದಂಡುಪಾಳ್ಯ- 2'ಮತ್ತು 'ದಂಡುಪಾಳ್ಯ- 3'.

ಸೈಲೆಂಟಾಗಿ ಫೈಟಿಂಗ್‌ ಮುಗಿಸಿ ಬಂದ ನಟಿ!

 

ಮಳೆ ಹುಡುಗಿ ಎಲ್ಲೋದ್ರೂ ಸೌಂಡಿಲ್ಲ ಎಂದು ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಪೂಜಾ ಗಾಂಧಿ ಸಾಹಸ ಹುಡುಗಿಯಾಗಿ 'ಸಿಂಹಾರಿಣಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರ ಪೋಸ್ಟರ್ ಕೂಡಾ ರಿಲೀಸ್ ಮಾಡಿದ್ದರು ಆದರೆ ಚಿತ್ರ ತೆರೆಕಾಣಲಿಲ್ಲ. ಅದರ ಬಗ್ಗೆ ಯಾವ ಸುದ್ದಿಯೂ ಇಲ್ಲ. ಇದೀಗ ಮತ್ತೆ ಯಾಕೆ ಪೂಜಾ ಗಾಂಧಿ ವಿಚಾರ ಅಂತಾನಾ? ಇಲ್ಲಿದೆ ನೋಡಿ.

 

ಬಾಲಿವುಡ್‌ ಹೆಸರಾಂತ ನಟ ಸನ್ನಿ ಡಿಯೋಲ್‌ ಪತ್ನಿಯಾರೆಂದು ಗೂಗಲ್‌ನಲ್ಲಿ ಹುಡುಕಿದರೆ ಅದು ಪೂಜಾ ಡಿಯೋಲ್‌ ಎಂದು ಪೂಜಾ ಗಾಂಧಿ ಫೋಟೋ ತೋರಿಸುತ್ತಿದೆ. ಹೌದು! ಸನ್ನಿ ಪತ್ನಿ ಹೆಸರು ಲಿಂಡಾ ಡಿಯೋಲ್‌ ಅಲಿಯಾಸ್‌ ಪೂಜಾ ಡಿಯೋಲ್‌ ಆದರೆ ಫೋಟೋ ಮಾತ್ರ ಪೂಜಾ ಗಾಂಧಿಯದ್ದು ತೋರಿಸುತ್ತಿದೆ. ಇದೆಂಥಾ ಎಡವಟ್ಟು ಮರಾಯ್ರೆ!

ಪೂಜಾ ಗಾಂಧಿ ಈ ಹಿಂದೆ ಆನಂದ್‌ ಎಂಬುವರ ಜೊತೆ ನಿಶ್ಛಿತಾರ್ಥ ಮಾಡಿಕೊಂಡು ಕಾರಣ ಬಹಿರಂಗಪಡಿಸದೆ ಮದುವೆಗೆ ಬಿಗ್‌ ಬ್ರೇಕ್‌ ಹಾಕಿದ್ದರು.