ಮುಂಬೈನಲ್ಲಿ ಹಫ್ತಾ ವಸೂಲಿಗೆ ಬಂದವನು ವಿಷ್ಣುವರ್ಧನ್ ಕಾಲಿಗೆ ಬಿದ್ದಿದ್ದು ಯಾಕೆ? ಏನಾಗಿತ್ತು ಅಲ್ಲಿ?
ನಟ ವಿಷ್ಣುವರ್ಧನ್ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ಜೋಡಿ ಕೋಟಿಗೊಬ್ಬ ಚಿತ್ರದಲ್ಲಿ ನಟಿಸಿರುವುದು ಗೊತ್ತೇ ಇದೆ. ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರವನ್ನು ನಾಗಣ್ಣ ಅವರು ನಿರ್ದೇಶನ ಮಾಡಿದ್ದಾರೆ. 2001ರಲ್ಲಿ ತೆರೆಗೆ ಬಂದಿದ್ದ ಕೋಟಿಗೊಬ್ಬ ಚಿತ್ರವು
ಸಾಹಸಸಿಂಹ ನಟ ವಿಷ್ಣುವರ್ಧನ್ (Vishnuvardhan) ಕನ್ನಡದ ಅಸ್ತಿ. ವಿಷ್ಣು ಅವರನ್ನು ಕನ್ನಡಿಗರು ಪ್ರೀತಿಯಿಂದ ದಾದಾ ಎಂದು ಸಹ ಕರೆಯುತ್ತಾರೆ. ಕೆಲವರು ಅಪ್ಪಾಜಿ ಎನ್ನುವುದೂ ಉಂಟು. ಅಂಥ ನಟ ವಿಷ್ಣುವರ್ಧನ್ ಅವರು ತಮ್ಮ ವೃತ್ತಿಜೀವನದಲ್ಲಿ ಬರೋಬ್ಬರಿ 200 ಸಿನಿಮಾಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಕೆಲವು ಕನ್ನಡ ಹೊರತುಪಡಿಸಿ ಬೇರೆ ಭಾಷೆಯವೂ ಸೇರಿವೆ. ನಟ ವಿಷ್ಣುವರ್ಧನ್ ಅವರನ್ನು ಕೇವಲ ಕನ್ನಡದ ನಟ ಎನ್ನುವುದಕ್ಕಿಂತ ಅಂದಿನ ಕಾಲದ ಪ್ಯಾನ್ ಇಂಡಿಯಾ ನಟ ಎಂದೇ ಹೇಳಬಹುದು.
ನಟ ವಿಷ್ಣುವರ್ಧನ್ ಹಾಗೂ ನಟಿ ಪ್ರಿಯಾಂಕಾ ಉಪೇಂದ್ರ ಜೋಡಿ ಕೋಟಿಗೊಬ್ಬ ಚಿತ್ರದಲ್ಲಿ ನಟಿಸಿರುವುದು ಗೊತ್ತೇ ಇದೆ. ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರವನ್ನು ನಾಗಣ್ಣ ಅವರು ನಿರ್ದೇಶನ ಮಾಡಿದ್ದಾರೆ. 2001ರಲ್ಲಿ ತೆರೆಗೆ ಬಂದಿದ್ದ ಕೋಟಿಗೊಬ್ಬ ಚಿತ್ರವು ಆಗಿನ ಕಾಲದಲ್ಲಿ ಬಿಗ್ ಬಜೆಟ್ ಹಾಗೂ ಗುಡ್ ಮೇಕಿಂಗ್ ಹೊಂದಿತ್ತು. ಚಿತ್ರವು ಸಾಕಷ್ಟು ಗಳಿಕೆ ಕಂಡು ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಒಂದು ಘಟನೆ ನಡೆದಿತ್ತು.
ಸಿನಿಮಾ ಜೀವನ ಎಲ್ಲಾ ನೋಡಿ ಆಗಿದೆ, ನೆಕ್ಸ್ಟ್ ರಾಜಕೀಯಕ್ಕೆ ಬರ್ತಿನ್ ಕಣ್ರೋ: ಹೀಗಂತಿದಾರಾ ದರ್ಶನ್..!?
ಅದೇನೆಂದರೆ, ಕೋಟಿಗೊಬ್ಬ ಶೂಟಿಂಗ್ ಬಹಳಷ್ಟು ದಿನಗಳು ಮುಂಬೈನ ತಾಜ್ ಹೊಟೆಲ್ ಎದುರುಗಡೆ ನಡೆಯುತ್ತಿತ್ತು. ನಟ ಆಶಿಶ್ ವಿದ್ಯಾರ್ಥಿ ಸಹ ಈ ಸಿನಿಮಾದಲ್ಲಿ ಇದ್ದಾರೆ. ರಾತ್ರಿ ಶೂಟಿಂಗ್ ಮಾಡುವಾಗ ಹಫ್ತಾ ವಸೂಲಿಗೆ ಬರಬಹುದೆಂದು ಆಶೀಶ್ ವಿದ್ಯಾರ್ಥಿ ಸಿನಿಮಾ ತಂಡಕ್ಕೆ ಮೊದಲೆ ಎಚ್ಚರಿಕೆ ಕೊಟ್ಟಿರ್ತಾರೆ. ಆದ್ರೆ ಬಹಳಷ್ಟು ದಿನ ಯಾವುದೇ ರೀತಿ ಸಮಸ್ಯೆ ಆಗಿರ್ಲಿಲ್ಲ, ಸುಗಮವಾಗಿ ಶೂಟಿಂಗ್ ನಡೆಯುತ್ತಲೇ ಇತ್ತು.
ಆದ್ರೆ ಒಂದು ದಿನ ಸುಮಾರು ಎರಡು ಗಂಟೆ ಹೊತ್ತಿಗೆ ಒಬ್ಬ ವ್ಯಕ್ತಿ ಹಫ್ತಾ ವಸೂಲಿಗೆ ಬಂದಿದಾನೆ ಅಂತ ಸಿನಿಮಾ ತಂಡಕ್ಕೆ ಗೊತ್ತಾಗುತ್ತೆ.. ಸರಿ ಏನು ವಿಷ್ಯ ಅಂತ ಮಾತಾಡೋಣ ಅಂತ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಹಾಗೂ ಅಲ್ಲಿದ್ದ ಒಂದೆರಡು ಜನರು ಅವನ ಜೊತೆ ಮಾತಾಡೋದಕ್ಕೆ ಹೋಗ್ತಾರೆ. ಕೆಲವು ಕಾಲ ಮಾತುಕತೆ ಮುಂದುವರೆಯುತ್ತಿದ್ದಂತೆ ಆತ ಆ ಕಡೆ ಈ ಕಡೆ ನೋಡುತ್ತ ಎಲ್ಲವನ್ನೂ ಗಮನಿಸುತ್ತ ಇರುತ್ತಾನೆ.
ಅವ್ನು ಹೀಗೆ ಮಾತಾಡ್ತಾ ಮಾತಾಡ್ತಾ ಸಿನಿಮಾ ಯಾರದ್ದು ಅಂತ ಕೇಳ್ತಾನೆ. ಅದಕ್ಕೆ ಟೀಂನವ್ರು ಈ ಚಿತ್ರದ ನಾಯಕ ವಿಷ್ಣುವರ್ಧನ್ ಅಂತ ಹೇಳ್ತಾರೆ. ವಿಷ್ಣುವರ್ಧನ್ ಅಂತ ಗೊತ್ತಾಗಿದ್ದೇ ತಡ, ಆ ವ್ಯಕ್ತಿ ಸೀದಾ ಸೆಟ್ ಒಳಗೆ ಬಂದು ವಿಷ್ಣು ಸರ್ ಅವ್ರ ಕಾಲಿಗೆ ನಮಸ್ಕಾರ ಮಾಡ್ತಾನೆ. ನಂತರ, ನಟ ವಿಷ್ಣುವರ್ಧನ್ ಜೊತೆ ಒಂದು ಫೋಟೋ ತೆಗೆಸಿಕೊಂಡು ಹಾಗೇ ಹೊರಟುಬಿಡ್ತಾನೆ. ಅಷ್ಟರಮಟ್ಟಿಗೆ ನಟ ವಿಷ್ಣುವರ್ಧನ್ ಹೆಸರು ಮುಂಬೈನಲ್ಲಿ ಪ್ರಚಲಿತವಾಗಿತ್ತು. ಅಲ್ಲಿ ಹಫ್ತಾ ವಸೂಲಿ ಮಾಡೋ ಗ್ಯಾಂಗ್‌ನ ಒಬ್ಬ ಸದಸ್ಯ ಕೂಡ ವಿಷ್ಣು ಅವರ ಅಭಿಮಾನಿಯಾಗಿದ್ದ.
ನಾನಾ ನೀನಾ ನೋಡೋ ಬಿಡೋಣ, ಯಶ್-ಪ್ರಭಾಸ್ ಮಧ್ಯೆ ಭಾರೀ ಸ್ಟಾರ್ ವಾರ್‌ಗೆ ವೇದಿಕೆ ಸಜ್ಜು..!
ಹೌದು, ನಟ ವಿಷ್ಣುವರ್ಧನ್ ಅವರಿಗೆ ಕನ್ನಡಿಗರು ಸೇರಿದಂತೆ, ಸೌತ್ ಇಂಡಿಯಾ ಹಾಗು ನಾರ್ತ್ ಇಂಡಿಯಾ ತುಂಬೆಲ್ಲ ಅಭಿಮಾನಿಗಳು ಇದ್ದಾರೆ. ಅದರಲ್ಲೂ ನಟ ವಿಷ್ಣುವರ್ಧನ್ ಅಭಿನಯದ ಕೆಲವು ಸಿನಿಮಾಗಳನ್ನು ಮುಂಬೈ ಪ್ರೇಕ್ಷಕರು ನೋಡಿದ್ದಾರೆ. ಹೀಗಾಗಿ ಅಲ್ಲಿ ಕೂಡ ಅನೇಕರು ಕನ್ನಡದ ನಟ ವಿಷ್ಣುವರ್ಧನ್ ಅಭಿನಯಕ್ಕೆ ಮಾರುಹೋಗಿ ಅವರ ಅಭಿಮಾನಿಗಳಾಗಿದ್ದಾರೆ. ಅವರಲ್ಲಿ ಅಂದು ಬಂದ ಹಫ್ತಾ ವಸೂಲಿಯವನು ಕೂಡ ಒಬ್ಬನಾಗಿದ್ದಾನೆ.