ಸಿನಿಮಾ ಜೀವನ ಎಲ್ಲಾ ನೋಡಿ ಆಗಿದೆ, ನೆಕ್ಸ್ಟ್ ರಾಜಕೀಯಕ್ಕೆ ಬರ್ತಿನ್ ಕಣ್ರೋ: ಹೀಗಂತಿದಾರಾ ದರ್ಶನ್..!?
ಅಟ್ ಲೀಸ್ಟ್ ಒಳ್ಳೆ ಹಾಸಿಕೆ ಮನೆಯಿಂದ ರುಚಿ ರುಚಿ ಬಿಸಿ ಬಿಸಿ ಊಟ ಆದ್ರು ಸಿಗಲಿ ಅಂತ ದರ್ಶನ್ ಪರಿತಪಿಸುತ್ತಿದ್ದಾರೆ. ಮನೆ ಊಟ ಕೇಳಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆ ಅರ್ಜಿ ವಜಾ ಮಾಡಿ ಶಾಕ್ ಕೊಟ್ಟಿತ್ತು. ಆದ್ರೂ ದರ್ಶನ್‌ಗೆ ಮನೆ ಊಟದ..
ನಟ ದರ್ಶನ್ ಕೇಸ್ ಬಗ್ಗೆ ದಿನಕ್ಕೊಂದು ಅಪ್ಡೇಟ್ ಸಿಗ್ತಾನೆ ಇದೆ. ಮನೆ ಊಟದ ಅರ್ಜಿ ವಾಪಸ್ ಪಡೆದಿದ್ದ ದರ್ಶನ್ ಈಗ ಮತ್ತೆ ನನಗೆ ಮನೆ ಊಟವೇ ಬೇಕು. ಮಲಗೋಕೆ ಹಾಸಿಕೆ, ಓದೋಕೆ ಪುಸ್ತಕ, ಮತ್ತು ಹೊಸ ಬಟ್ಟೆ ಬೇಕು ಅಂತ ದರ್ಶನ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾದ್ರೆ ಕೊಲೆ ಆರೋಪಿ ದರ್ಶನ್ ಬಗ್ಗೆ ಮತ್ತಿನ್ನೇನು ಹೊಸ ವಿಷಯ ಇದೆ ಅಂತ ನೋಡೋಣ ಈ ಸ್ಟೋರಿಯಲ್ಲಿ..
ಕೊಲೆ ಆರೋಪಿ ದರ್ಶನ್‌ಗೆ ಇನ್ನೂ ಕಡಿಮೆ ಆಗಿಲ್ಲ ಮನೆ ಊಟದ ಆಸೆ, ರುಚಿಯಾದ ಮನೆ ಊಟ ಬೇಕು ಅಂತ ಮತ್ತೆ ಅರ್ಜಿ ಸಲ್ಲಿಸದ ದರ್ಶನ್!
ರುಚಿ ರುಚಿಯಾದ ಊಟ, ಎಸಿ ರೂಮ್, ಮೆತ್ತಗಿನ ಬೆಡ್, ಕೈಗೆ ಕಾಲಿಗೆ ಆಳು ಕಾಳು, ಎಣ್ಣೆ ಹೊಡೆಯೋಕೆ ಫ್ರೆಂಡ್ಸ್, ರಾಜನಂತೆ ಓಡಾಡೋಕೆ ಐಶಾರಾಮಿ ಕಾರು. ಇದೆಲ್ಲಾ ಕೊಲೆ ಆರೋಪಿ ಆಗಿ ಜೈಲು ಸೇರೋ ಮೊದಲು ದರ್ಶನ್ ಗೆ ಇದ್ದ ಐಶಾರಾಮಿ ಲೈಫ್. ಆದ್ರೆ ಅದೆಲ್ಲಾ ಈಗ ದರ್ಶನ್ ಗೆ ನೆನಪು ಮಾತ್ರ.
ನಾನಾ ನೀನಾ ನೋಡೋ ಬಿಡೋಣ, ಯಶ್-ಪ್ರಭಾಸ್ ಮಧ್ಯೆ ಭಾರೀ ಸ್ಟಾರ್ ವಾರ್‌ಗೆ ವೇದಿಕೆ ಸಜ್ಜು..!
ಹೀಗಾಗಿ ಅಟ್ ಲೀಸ್ಟ್ ಒಳ್ಳೆ ಹಾಸಿಕೆ ಮನೆಯಿಂದ ರುಚಿ ರುಚಿ ಬಿಸಿ ಬಿಸಿ ಊಟ ಆದ್ರು ಸಿಗಲಿ ಅಂತ ದರ್ಶನ್ ಪರಿತಪಿಸುತ್ತಿದ್ದಾರೆ. ಮನೆ ಊಟ ಕೇಳಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆ ಅರ್ಜಿ ವಜಾ ಮಾಡಿ ಶಾಕ್ ಕೊಟ್ಟಿತ್ತು. ಆದ್ರೂ ದರ್ಶನ್‌ಗೆ ಮನೆ ಊಟದ ರುಚಿ ನೆನಪು ಕಡಿಮೆ ಆಗಿಲ್ಲ. ಈಗ ಮತ್ತೆ ಕಿಲ್ಲಿಂಗ್ ಸ್ಟಾರ್ ಮನೆ ಊಟ ಕೇಳಿ ಹೈ ಕೋರ್ಟ್ಗೆ ಅರ್ಜಿ ಹಾಕಿದ್ದಾರೆ.
ತಾಂತ್ರಿಕ ಸಮಸ್ಯೆಯ ನೆಪ ಹೇಳಿ ಅರ್ಜಿ ಹಿಂಪಡೆದಿದ್ದ ದರ್ಶನ್: ಮ್ಯಾಜಿಸ್ಟ್ರೇಟ್ ಕೋರ್ಟ್ ದರ್ಶನ್ರ ಮನೆ ಊಟದ ಅರ್ಜಿ ವಜಾ ಮಾಡಿದ್ಮೇಲೆ ಆ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ರು ನಟ ದರ್ಶನ್. ಆದ್ರೆ ಆದ್ರೆ ಆ ಅರ್ಜಿಯಲ್ಲಿ ಕೆಲವು ಟೆಕ್ನಿಕಲ್ ಸಮಸ್ಯೆ ಇದೆ ಎಂದು ನಿನ್ನೆ ಅರ್ಜಿಯನ್ನ ವಾಪಸ್ ಪಡೆದ್ರು. ಇದೀಗ ಕಿಲ್ಲಿಂಗ್ ಸ್ಟಾರ್ ಇಂದು ಮತ್ತೆ ಹೈ ಕೋರ್ಟ್ಗೆ ಮನೆಯೂಟ, ಹಾಸಿಗೆ, ಬಟ್ಟೆ, ಪುಸ್ತಕ ಕೋರಿ ಹೊಸ ಅರ್ಜಿ ಹಾಕಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ವರಸೆ ಬದಲಿಸಿದ್ರಾ ಶೆಡ್ ಸ್ಟಾರ್..!3 ಜೈಲು ಅಧಿಕಾರಿಗಳ ಜೊತೆ ರಾಜಕೀಯ ಮಾತಾಡ್ತಾರಂತೆ ದಾಸ!
ವಿಗ್-ಕೂದಲಿಗೂ ಶನಿಗೂ ಸಂಬಂಧ ಇದೆ, ದರ್ಶನ್‌ಗೆ ಎಚ್ಚರಿಸಿದ್ದೆ:ಕಾಳಿಕಾಮಾತೆ ಉಪಾಸಕಿ ಚಂದಾ ಪಾಂಡೆ!
ಕೊಲೆ ಕೇಸ್ನಲ್ಲಿ ಸೆಂಟ್ರಲ್ ಜೈಲ್ ಸೆಲೆಬ್ರಿಟಿ ಆಗಿರೋ ದರ್ಶನ್ ಬಗ್ಗೆ ಇತ್ತೀಚೆಗೆ ಒಂದು ವಿಷಯ ಚರ್ಚೆ ಆಗುತ್ತಿದೆ. ಅದು ಜೈಲಿನಿಂದ ಹೊರ ಬಂದ ಮೇಲೆ ದರ್ಶನ್ ರಾಜಕೀಯಕ್ಕೆ ಬರುತ್ತಾರೆ ಅನ್ನೋದು. ಈಗ ದರ್ಶನ್ ಜೈಲಿನೊಳಗೆ ಹೆಚ್ಚು ರಾಜಕೀಯವನ್ನೇ ಮಾತನಾಡುತ್ತಾರೆ ಅನ್ನೋ ಸುದ್ದಿ ಹೊರ ಬಂದಿದೆ. ಹಾವಾ ಬಾವ ಬದಲಿಸಿಕೊಂಡಿರೋ ದಾಸ ಅಧಿಕಾರಿಗಳ ಬಳಿ ರಾಜಕೀಯದ ಬಗ್ಗೆ ಹೆಚ್ಚು ಹೆಚ್ಚು ಮಾತುಕತೆ ಮಾಡುತ್ತಿದ್ದಾರಂತೆ.
ನಟ ದರ್ಶನ್‌ಗೆ ಒಂದಷ್ಟು ರಾಜಕಾರಣಿಗಳ ಜೊತೆ ಒಡನಾಟ ಇದೆ. ಅವರ ಪರ ಪ್ರಚಾರ ಮಾಡಿದ್ದ ಅನುಭವವೂ ಇದೆ. ಹೀಗಾಗಿ ಬ್ಯಾರಕ್ ನಲ್ಲಿ ದರ್ಶನ್ ಓಡಾಡುವಾಗ ನಂದು ಸಿನಿಮಾ ಜೀವನ ಜೊತೆಗೆ ಎಲ್ಲಾ ನೋಡಿ ಆಗಿದೆ. ನೆಕ್ಸ್ಟ್ ರಾಜಕೀಯಕ್ಕೆ ಬರ್ತಿನ್ ಕಣ್ರೋ ಎಂದು ಸಿನಿಮಾ ಶೈಲಿಯಲ್ಲೇ ಮಾತಾನಾಡುತ್ತಿದ್ದಾರಂತೆ.
ಡಿ ಗ್ಯಾಂಗ್ ವಿರುದ್ಧ ಚಾರ್ಜ್ ಸಲ್ಲಿಕೆ ಯಾವಾಗ.? ಶ್ರಾವಣ ಮಾಸ ದರ್ಶನ್‌ಗೆ ಶುಭ ತರುತ್ತಾ..?
ನಿರ್ದೇಶಕ-ನಿರ್ಮಾಪಕರ ಕಿತ್ತಾಟ ಕಂಟಕ, ಧ್ರುವ ಸರ್ಜಾ 'ಮಾರ್ಟಿನ್' ರಿಲೀಸ್ ಆಗುತ್ತಾ ಇಲ್ವಾ ..1?
vo : ರೇಣುಕಾಸ್ವಾಮಿ ಕೊಲೆ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆಗೆ ದರ್ಶನ್ ಅಂಡ್ ಟೀಂ ಕಾದು ಕುಳಿದೆ. ಜಾರ್ಜ್ ಶೀಟ್ ಬರುತ್ತಿದ್ದಂತೆ ಅದನ್ನ ಸ್ಟಡಿ ಮಾಡಿ ಬೇಲ್ಗೆ ಅಪ್ಲೈ ಮಾಡೋದು ದರ್ಶನ್ ಪ್ಲಾನ್. ಆದ್ರೆ ದರ್ಶನ್ ಜೈಲು ಸೇರಿ 40 ದಿನ ಆಯ್ತು ಇನ್ನು ಚಾರ್ಜ್ ಶೀಟ್ ಸಲ್ಲಿಸಿಲ್ಲ. ದರ್ಶನ್ ಗ್ಯಾಂಗ್ ಪ್ರಕರಣದಲ್ಲಿ ಚಾರ್ಜ್ ಸಲ್ಲಿಸೋಕೆ 90 ದಿನ ಸಮಯ ಇತ್ತು. ಈಗಾಗ್ಲೆ 40 ದಿನ ಕಳೆದಿದೆ. ಹೀಗಾಗಿ ಇನ್ನು 36 ದಿನದಲ್ಲಿ ಜಾರ್ಜ್ ಶೀಟ್ ಸಲ್ಲಿಕೆ ಆಗಲಿದೆ. ಅಲ್ಲಿಗೆ ಶ್ರಾವಣ ಮಾಸ ಬರಲಿದ್ದು, ದರ್ಶನ್‌ಗೆ ಶ್ರಾವಣ ಶುಭ ಆಗುತ್ತಾ ನೋಡ್ಬೇಕು.
ಕೊಲೆ ಆರೋಪಿ ದರ್ಶನ್ ಬಗ್ಗೆ ಕುಮಾರ್ ಬಂಗಾರಪ್ಪ ಏನಂದ್ರು..?
ಇನ್ನು ದರ್ಶನ್ ಕೊಲೆ ಪ್ರಕರಣದ ಬಗ್ಗೆ ರಾಜಕಾರಣಿ ನಟ ಕುಮಾರ್ ಬಂಗಾರಪ್ಪ ಮಾತನಾಡಿದ್ದಾರೆ. ಈ ಘಟನೆ ನಡಿಬಾರ್ದಿತ್ತು. ಚಿತ್ರರಂಗದಲ್ಲಿ ಯಾರಿಗೇ ನೋವಾದ್ರು ಕುಟುಂಬದ ಎಲ್ಲಾರಿಗೂ ನೋವಾಗುತ್ತೆ. ಈ ಘಟನೆ ದರ್ಶನ್ರಿಂದಲೇ ಆಗಿದ್ರೆ ಅದನ್ನ ನ್ಯಾಯಾಲಯ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ಟ್ರಾಪ್ ಆಗೋದು ಆಮೇಲೆ ಒದ್ದಾಡೋದು ನಂಗೆ ಆಗಿಬರಲ್ಲ: ಶಾಕಿಂಗ್ ಹೇಳಿಕೆ ಕೊಟ್ಟ ಯಶ್..!