ಚಿತ್ರದಲ್ಲಿನ ಎಲ್ಲಾ ಪಾತ್ರಗಳು ಇಲ್ಲಿ ಎನ್ನನ್ನೋ ಹುಡುಕುವ ಪಜೀತಿ ಮಾತ್ರ ಸಖತ್‌ ಕಾಮಿಡಿ ಕಿಕ್‌ ನೀಡುತ್ತದೆ. ಇಂತಹದೊಂದು ಚಿತ್ರದ ಮೂಲಕ ಈಗ ಸುದ್ದಿಯಲ್ಲಿರುವ ನಿರ್ದೇಶಕ ರಾಘವ್‌ ದ್ವಾರ್ಕಿ.

ರಾಘವ್‌ ದ್ವಾರ್ಕಿ ಚಿತ್ರರಂಗಕ್ಕೆ ಹೊಸಬರೇನಲ್ಲ. ಗುಣ, ‘ಮತ್ತೆ ಮುಂಗಾರು’ ಚಿತ್ರಗಳ ನಿರ್ದೇಶಕ. ಅವು ಬಂದು ಹೋದ ನಂತರದ ಎಂಟು ವರ್ಷಗಳ ಗ್ಯಾಪ್‌ ನಂತರವೀಗ ಒಂದು ಗಂಟೆಯ ಕತೆ ಹಿಡಿದುಕೊಂಡು ಚಿತ್ರರಂಗಕ್ಕೆ ಮರಳಿದ್ದಾರೆ. ಹಿಂದೆಲ್ಲ ಮೇಸೆಜ್‌ ಆಧರಿತ ಸಿನಿಮಾ ಮಾಡಿ ಗಮನ ಸೆಳೆದವರು ಈಗ್ಯಾಕೆ ಇಂತಹ ಸಿನಿಮಾ ಮಾಡಿದ್ದಾರೆ ಅಂತ ‘ಒಂದು ಗಂಟೆಯ ಕತೆ ’ಸಿನಿಮಾದ ಪೋಸ್ಟರ್‌ ಹಾಗೂ ಟ್ರೇಲರ್‌ ನೋಡಿದವರಿಗೆ ಎದುರಾದ ಪ್ರಶ್ನೆ. ಸದ್ಯಕ್ಕೀಗ ಈ ಚಿತ್ರದ ರಿಲೀಸ್‌ಗೆ ರೆಡಿ ಆಗಿದೆ. ಅದರ ಸಿದ್ಧತೆಯಲ್ಲಿರುವ ಚಿತ್ರ ತಂಡ ಈಗ ಚಿತ್ರದ ಒಂದು ಹಾಡು ಬಿಡುಗಡೆ ಮಾಡಿ ಸುದ್ದಿಯಲ್ಲಿದೆ.

'No problem'! ಹೈಟ್‌ ಸ್ಪಲ್ಪ ಜಾಸ್ತಿಯಾಗಿದ್ದಕ್ಕೆ ವೇಟಿಂಗ್‌ ಲಿಸ್ಟ್‌ನಲ್ಲಿದ್ದ ಹಾಟ್‌ ನಟಿ ಫೋಟೋ!

ಅದು ಕೂಡ ಮಜಾವಾಗಿದೆ. ‘ನಾನು ಕ್ಷಮಿಸೋದಿಲ್ಲ, ನಂದೇನು ತಪ್ಪಿಲ್ಲ....’ ಎನ್ನುವುದು ಆ ಹಾಡಿನ ಸಾಲುಗಳು. ಇದು ರಾಘವ್‌ ದ್ವಾರ್ಕಿ ಅವರದ್ದೇ ಸಾಹಿತ್ಯ. ಚೆನ್ನೈ ಮೂಲದ ಸಂಗೀತ ನಿರ್ದೇಶಕ ಡೇನಿಸ್‌ ವಲ್ಲಭನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರುತಿ ಚಿದಂಬರನ್‌ ಇದಕ್ಕೆ ಧ್ವನಿ ನೀಡಿದ್ದಾರೆ. ಇತ್ತೀಚೆಗೆ ಮಾಧ್ಯಮದವರಿಗೆ ಈ ಹಾಡು ತೋರಿಸಿ, ಮಾತಿಗಿಳಿದ ಚಿತ್ರತಂಡ ಚಿತ್ರದ ವಿಶೇಷತೆ ಕುರಿತು ಮಾತನಾಡಿತು. ನಿರ್ದೇಶಕ ರಾಘವ್‌ ದ್ವಾರ್ಕಿ ಮಾತಿನ ಆರಂಭದಲ್ಲೇ ಚಿತ್ರದ ಪೋಸ್ಟರ್‌ ಹಾಗೂ ಟ್ರೇಲರ್‌ ಕುರಿತು ಸ್ಪಷನೆ ನೀಡಿದರು.

‘ಚಿತ್ರದ ಪೋಸ್ಟರ್‌ ಹಾಗೂ ಟ್ರೇಲರ್‌ ನೋಡಿದವರಿಗೆ ಇದ್ಯಾವ ಸೀಮೆ ಸಿನಿಮಾ ಅಂದೆನಿಸಿದ್ದು ನಿಜ. ಆದರೆ ಇದು ಒಂದು ಸ್ಟ್ರಾಂಗ್‌ ಮೇಸೆಜ್‌ ಆಧರಿತ ಸಿನಿಮಾ. ಬೆಂಗಳೂರಿನಲ್ಲಿಯೇ ನಡೆದ ಒಂದು ನೈಜ ಘಟನೆಯನ್ನಿಟ್ಟುಕೊಂಡು ಮಾಡಿದ ಸಿನಿಮಾ. ಪ್ರಚಾರ ದ ದೃಷ್ಟಿಯಿಂದ ನಾವೇನೆ ಮಾಡಿದ್ದರೂ ಸಿನಿಮಾದೊಳಗೆ ಸ್ಟ್ರಾಂಗ್‌ ಕಂಟೆಂಟ್‌ ಇದೆ . ವೈರಲ್‌ ಆಗುವಂತಹ ವಿಷಯಗಳು ಚಿತ್ರದಲ್ಲಿವೆ. ಸಿನಿಮಾ ನೋಡಿದವರಿಗೆ ಒಂದುಕ್ಷಣ ಭಯ ಹುಟ್ಟುವುದಂತೂ ಗ್ಯಾರಂಟಿ. ಅದು ಯಾಕೆ, ಏನು ಎನ್ನುವುದು ಸಿನಿಮಾದೊಳಗಿನ ವಿಷಯ’ಎಂದರು.

ಕಸರತ್ತಿಗೂ ಸೈ ಈ ಕಿರಿಕ್‌ ಬೆಡಗಿ ಸಂಯುಕ್ತಾ ಹೆಗ್ಡೆ!

ನಜುಂಡ ಅಲಿಯಾಸ್‌ ಅಜಯ್‌ ರಾವ್‌ ಈ ಚಿತ್ರದ ನಾಯಕ ನಟ. ಹುಬ್ಬಳ್ಳಿ ಮೂಲದ ಶಾನಾಯ್‌ ಕಾಟ್ವೆ ಚಿತ್ರದ ನಾಯಕಿ.ಸ್ವಾತಿ ಶರ್ಮಾ ಕೂಡ ಚಿತ್ರದ ಇನ್ನೊಬ್ಬ ನಾಯಕಿ. ಅವರೊಂದಿಗೆ ರೆಮೋ. ಪ್ರಶಾಂತ್‌ ಸಿದ್ದಿ, ಚಿದಾನಂದ್‌, ನಾಗೇಂದ್ರ ಶಾ ಚಿತ್ರದ ಪೋಷಕ ಪಾತ್ರಗಳಲ್ಲಿದ್ದಾರೆ. ರಿಯಲ್‌ ವೆಲ್ತ್‌ ವೆಂಚರ್‌ ಪೊ›ಡಕ್ಷನ್‌ ಮೂಲಕ ಕಶ್ಯಪ್‌ ದಾಕೋಜು ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ಸೂರ್ಯಕಾಂತ್‌ ಛಾಯಾಗ್ರಹಣವಿದೆ. ಗಣೇಶ್‌ ಮಲ್ಲಯ್ಯ ಸಂಕಲನವಿದೆ. ಇಂದಿನ ಯುವಕರ ಜೀವನ ಶೈಲಿ ಮತ್ತು ಅಭಿರುಚಿ, ಜವಾಬ್ದಾರಿಗಳ ಕುರಿತು ಕಥಾ ಹಂದರ ಹೊಂದಿರುವ ಒಂದು ಗಂಟೆಯ ಕಥೆ’ ಚಿತ ಏಪ್ರಿಲ್‌ ಅಂತ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.