ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್‌ ಪಾಂಡವಪುರಗೆ ಅಪಘಾತ, ಐಸಿಯುನಲ್ಲಿ ಚಿಕಿತ್ಸೆ!

ರಸ್ತೆ ಅಪಘಾತದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ಮಾಸ್ಟರ್ ರೋಹಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

Ondalla Eradalla movie fame National Film Award Winner Child Artist  master rohith pandavapura met an accident in mysuru gow

ಮೈಸೂರು (ನ.16): ರಸ್ತೆ ಅಪಘಾತದಲ್ಲಿ ಬಾಲನಟ ಮಾಸ್ಟರ್ ರೋಹಿತ್ ಗೆ ಗಂಭೀರ ಗಾಯವಾಗಿರುವ ದಾರುಣ ಘಟನೆ ನಡೆದಿದೆ. ಮೈಸೂರಿನ‌ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. "ಒಂದಲ್ಲ ಎರಡಲ್ಲ" ಸಿನಿಮಾದ  ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ  ಪಡೆದಿದ್ದರು. ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ಕೂಡ  ಬಾಲನಟ  ಮಾಸ್ಟರ್ ರೋಹಿತ್   ಅಭಿನಯಿಸಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಪಾಲಹಳ್ಳಿ ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ನಡೆದಿದೆ. ದಂತದ ವಸುಡು ಕಟ್ಆಗಿ  ತಲೆ ಬುರುಡೆಗೆ ಗಾಯವಾಗಿದೆ.
ಖಾಸಗಿ ಕಾರ್ಯಕ್ರಮ‌ ಮುಗಿಸಿ ಮನೆಗೆ ತೆರಳುವಾಗ ಈ  ಅವಘಡ ನಡೆದಿದೆ.

ವಿಷ್ಣು, ಅಂಬಿ, ದೇವರಾಜ್ ಜೊತೆ ಬಣ್ಣ ಹಚ್ಚಿದ್ದ ನಟಿ ಕಸ್ತೂರಿ ಹೈದರಾಬ ...

KA11 N 4173 ನಂಬರಿನ ಕಾರಿಗೆ ಟೂರಿಸ್ಟ್‌ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ರೋಹಿತ್ ತಾಯಿ ಛಾಯಾಲಕ್ಷ್ಮಿ‌ ಅವರ ಕಾಲು, ಕೈಗಳಿಗೆ ಗಾಯವಾಗಿದೆ. ಕಾರಿನಲ್ಲಿದ್ದ ರೋಹಿತ್ ಗೆಳೆಯ ಹಾಗು ಉಪನ್ಯಾಸಕ ಸೇರಿ‌ ನಾಲ್ವರಿಗೆ ಗಾಯವಾಗಿದೆ.

ಮೂಲಂಗಿಯೊಂದಿಗೆ ಈ 5 ಆಹಾರಗಳನ್ನು ಸೇವಿಸಲೇಬೇಡಿ

ಒಂದಲ್ಲಾ ಎರಡಲ್ಲಾ 2018ರಲ್ಲಿ ತೆರೆಕಂಡ   ಹಾಸ್ಯ ಚಲನಚಿತ್ರವಾಗಿದ್ದು, ರಾಮಾ ರಾಮಾ ರೇ ಬರೆದು ನಿರ್ದೇಶಿಸಿದ ಡಿ.ಸತ್ಯ ಪ್ರಕಾಶ್ ಅವರು  ಈ ಚಿತ್ರವನ್ನು ನಿರ್ದೇಶಿಸಿದ್ದರು ,ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಮಾಣದ ಸಿನೆಮಾಗೆ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿತ್ತು.  ಬಾಲನಟ ರೋಹಿತ್ ಪಾಂಡವಪುರ ಮುಖ್ಯಪಾತ್ರಧಾರಿಯಾಗಿ ಅತ್ಯುತ್ತಮ ಬಾಲ ಕಲಾವಿದ ಮತ್ತು ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಬಂದಿತ್ತು. 2018 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಒಲಿದುಬಂದಿತ್ತು
 

Latest Videos
Follow Us:
Download App:
  • android
  • ios