Asianet Suvarna News Asianet Suvarna News

KGF Yash Birthday: ಜನ್ಮದಿನ ಪ್ರಯುಕ್ತ ಜನವರಿ 7ರಂದು ಯಶ್‌ ಕಾಮನ್‌ ಡಿಪಿ ಬಿಡುಗಡೆ

ಜನವರಿ 8 ಯಶ್‌ ಜನ್ಮದಿನ. ಅದರ ಹಿನ್ನೆಲೆಯಲ್ಲಿ ಜನವರಿ 7 ರಂದು ಯಶ್‌ ಅವರ ಕಾಮನ್‌ ಡಿಪಿಯನ್ನು ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲಂಸ್‌ ಹೇಳಿದೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಯಶ್‌ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಹೊಂಬಾಳೆ ನಿರ್ಧರಿಸಿದೆ.

on the occation of yash birthday celebration dp will be releasing on jan 7th gvd
Author
Bangalore, First Published Dec 29, 2021, 4:15 PM IST
  • Facebook
  • Twitter
  • Whatsapp

ಜನವರಿ 8 ಯಶ್‌ (Yash) ಜನ್ಮದಿನ. ಅದರ ಹಿನ್ನೆಲೆಯಲ್ಲಿ ಜನವರಿ 7 ರಂದು ಯಶ್‌ ಅವರ ಕಾಮನ್‌ ಡಿಪಿಯನ್ನು (Common DP) ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲಂಸ್‌ (Hombale Films) ಹೇಳಿದೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ (Social Media) ಯಶ್‌ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಹೊಂಬಾಳೆ ನಿರ್ಧರಿಸಿದೆ. ಯಶ್‌ ಜನ್ಮದಿನದಂದು 'ಕೆಜಿಎಫ್‌ 2' (KGF 2) ಟ್ರೇಲರ್‌ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸಿನಿಮಾ ಬಿಡುಗಡೆ ದಿನಾಂಕ ದೂರವಿರುವ ಕಾರಣ ಈಗಲೇ ಟ್ರೇಲರ್‌ (Trailer) ಬಿಡುಗಡೆ ಮಾಡುವುದಿಲ್ಲ ಎಂದು ಯಶ್‌ ಹೇಳಿದ್ದಾರೆ. ಜೊತೆಗೆ ಕೋವಿಡ್‌ ಕಾರಣಕ್ಕೆ ಈ ಬಾರಿಯೂ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿರುವ ಯಶ್‌, ಅಭಿಮಾನಿಗಳು ತಾವು ಇರುವಲ್ಲಿಂದಲೇ ಶುಭ ಹಾರೈಸಬೇಕು ಎಂದು ಕೋರಿದ್ದಾರೆ.

'ಕೆಜಿಎಫ್' ಮೊದಲ ಭಾಗ ಬಿಡುಗಡೆಯಾಗಿ 3 ವರ್ಷಗಳೇ ಕಳೆದರೂ ಈ ಚಿತ್ರದ ಕ್ರೇಜ್​ ಮಾತ್ರ ಇನೂ ಕಡಿಮೆಯಾಗಿಲ್ಲ. ಈ ವಿಶೇಷ ದಿನವನ್ನು ಇತ್ತೀಚೆಗೆ 'ಕೆಜಿಎಫ್​' ತಂಡ ನೆನಪು ಮಾಡಿಕೊಂಡಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​ (Honbale Films) ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ 'ಕೆಜಿಎಫ್'​ ಚಿತ್ರದ ಸವಿ ನೆನಪಿನ ಕೆಲವು ದೃಶ್ಯಕಾವ್ಯದ​ ತುಣುಕುಗಳನ್ನು ರಿಲೀಸ್ ಮಾಡಿದೆ. 2 ನಿಮಿಷ 51 ಸೆಕೆಂಡ್​ನ ಈ ವಿಡಿಯೋದಲ್ಲಿ 'ಕೆಜಿಎಫ್'ನ ಅದ್ದೂರಿ ಮೇಕಿಂಗ್, ಯಶ್ ಎಂಟ್ರಿ, ಗರುಡ ರಾಮ್ ಸನ್ನಿವೇಶಗಳು, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸ್ಟೈಲ್, ಭುವನ್ ಗೌಡ ಕ್ಯಾಮೆರಾ ವರ್ಕ್, ಸಾವಿರಾರು ಜನ ಜೂನಿಯರ್ ಕಲಾವಿದರು, ಹಿರಿಯ ನಟ ಅನಂತ್ ನಾಗ್ ಹಿನ್ನೆಲೆ ಧ್ವನಿ ಸೇರಿದಂತೆ ಯಶ್ ಕ್ಷಣ ಮಾತ್ರದಲ್ಲಿ ಫೈಯರ್ ಮಾಡುವ ಟ್ರೇಲರ್‌ನ ಕೊನೆ ಸೀನ್‌ಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

KGF Yash Birthday:ದುಡ್ಡಿಗಾಗಿ ಸಿನಿಮಾ ಮಾಡಲ್ಲ, ಜವಾಬ್ದಾರಿಯಿಂದ ಆಯ್ಕೆ ಮಾಡಿಕೊಳ್ಳುವೆ ಎಂದ ಯಶ್!

ಕೆಜಿಎಫ್' ಸಕ್ಸಸ್​​ ಬಳಿಕ ಇದೀಗ ಇಡೀ ಭಾರತೀಯ ಚಿತ್ರರಂಗವೇ  'ಕೆಜಿಎಫ್  2'  ಚಿತ್ರಕ್ಕಾಗಿ ಕಾತುರದಿಂದ ಕಾದು ಕುಳಿತಿದೆ. ಈಗಾಗಲೆ ಬಿಡುಗಡೆಯಾಗಿರುವ 'ಕೆಜಿಎಫ್  2' ಚಿತ್ರದ ಟೀಸರ್ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಅದರಂತೇ ಪ್ರೇಕ್ಷಕರು ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. 'ಕೆಜಿಎಫ್ 2'​ ಸಿನಿಮಾ ಮುಂದಿನ ವರ್ಷ ಏಪ್ರಿಲ್​ 14ಕ್ಕೆ ವಿಶ್ವದಾದ್ಯಾಂತ‌ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಮತ್ತೊಮ್ಮೆ ಯಾವ ಹೊಸ ದಾಖಲೆಯನ್ನು ಸೃಷ್ಟಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸಿದ್ದಾರೆ. 

on the occation of yash birthday celebration dp will be releasing on jan 7th gvd

ನಟ ಯಶ್ ಕೂಡ ಹಿಂದಿಯಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ ಎನ್ನಲಾಗುತ್ತಿದೆ. ರವಿ ಬಸ್ರೂರ್ (Ravi Basrur) ಸಂಗಿತ ಸಂಯೋಜನೆ ಚಿತ್ರಕ್ಕಿದ್ದು, ಪ್ರಕಾಶ್ ರಾಜ್ (Prakash Raj), ತೆಲುಗು ನಟ ರಾವ್ ರಮೇಶ್ (Rao Ramesh) ಮತ್ತು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಚಿತ್ರದ ಆಕರ್ಷಣೆಯಾಗಿದ್ದಾರೆ. ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ರಮೀಕಾ ಸೇನ್‌ ಪಾತ್ರದಲ್ಲಿ ಬಾಲಿವುಡ್‌ ನಟಿ ರವೀನಾ ಟಂಡನ್​ (Raveena Tandon) ಅಭಿನಯಿಸಿದ್ದಾರೆ. ಯಶ್‌ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ (SriNidhi Shetty) ನಟಿಸಿದ್ದಾರೆ. 

Wedding Anniversary: ಪತಿ ಯಶ್‌ರನ್ನು ವಿಭಿನ್ನವಾಗಿ ಹೊಗಳಿದ ನಟಿ ರಾಧಿಕಾ ಪಂಡಿತ್!

ಇತ್ತೀಚೆಗಷ್ಟೇ ಕೆಜಿಎಫ್​ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್​ ಚಾಪ್ಟರ್-2ನಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್​ ನಟ ಸಂಜಯ್​ದತ್​ ಅವರ ಡಬ್ಬಿಂಗ್ ಮುಕ್ತಾಯಗೊಳ್ಳುವ ಮೂಲಕ ಎಲ್ಲಾ ಭಾಷೆಗಳ ಡಬ್ಬಿಂಗ್ ಕೆಲಸ ಮುಕ್ತಾಯಗೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದರು. ಅಧೀರಾ ಈಸ್ ಬ್ಯಾಕ್ 'ಕೆಜಿಎಫ್ 2' ಚಿತ್ರದ ಅಧೀರನ ಪಾತ್ರಕ್ಕೆ ಡಬ್ಬಿಂಗ್ ಮುಗಿದಿದೆ. ದೊಡ್ಡ ಪರದೆ ಮೇಲೆ ಮುಂದಿನ ವರ್ಷ ಏಪ್ರಿಲ್ 24ಕ್ಕೆ ಸಿಗೋಣ ಎಂದು ಪ್ರಶಾಂತ್ ನೀಲ್ ಟ್ವೀಟ್ (Tweet) ಮಾಡಿದ್ದರು. 

Follow Us:
Download App:
  • android
  • ios