ಸ್ಯಾಂಡಲ್‌ವುಡ್ ಒಳ್ಳೆ ಹುಡುಗ ಪ್ರಥಮ್‌ ಕೊರೋನಾ ಲಾಕ್‌ಡೌನ್‌ ಕಷ್ಟಗಾಲದಲ್ಲಿ ಸಾರ್ವಜನಿಕರಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹಸಿದವರಿಗೆ ಊಟ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿಯೂ ಯುವಕರ ಗುಂಪು ಸೇರಿಸಿ, ಕೈಲಾದಷ್ಟು ಸಹಾಯ ಮಾಡಿದ್ದಾರೆ. 2000ಕ್ಕೂ ಹೆಚ್ಚು ಕುಟುಂಬಗಳಿಗೆ 'ನಟ ಭಯಂಕರ' ಚಿತ್ರತಂಡದ ವತಿಯಿಂದ ಫುಡ್‌ ಕಿಟ್ ವಿತರಣೆ ಮಾಡಿದ್ದಾರೆ. ಕೊರೋನಾ ವಾರಿಯರ್ಸ್‌ಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಧ್ವನಿಯಾಗಿದ್ದಾರೆ. ಆದರೀಗ ವೈದ್ಯರು ಮಾಡುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. 

ಪ್ರಥಮ್ ಪೋಸ್ಟ್:
'ಕೊರೋನಾ ಸಮಯದಲ್ಲಿ 2000ಕ್ಕೂ ಹೆಚ್ಚು ಕುಟುಂಬ, ವೈದ್ಯರಿಗೆ ಪ್ರಾಮಾಣಿಕವಾಗಿ ಕಿಟ್ ತಲುಪಿಸಿದ ನನ್ನ ಕುಟುಂಬದ ಸ್ವಂತ ಅಜ್ಜಿಗೆ ಇವತ್ತು ಬೆಡ್‌ ಕೊಡದೇ ರಾತ್ರಿ ಇಡೀ ರಸ್ತೆಯಲ್ಲಿ ನರಳಿಸಿ ಸಾಯಿಸಿದ್ರು. ಮೈಸೂರಿನ ರಾಕ್ಷಸ ವೈದ್ಯ ಸಿಬ್ಬಂದಿ. 40 ಸಾವಿರ ಕಿತ್ಕೊಂಡು ಮಧ್ಯಿ ರಾತ್ರಿ ಆಸ್ಪತ್ರೆಯಿಂದ ನಮ್ಮಜ್ಜಿಯನ್ನು ಓಡಿಸಿ, ಸಾಯಿಸಿದ ವೈದ್ಯಕೀಯ ಲೋಕಕ್ಕೆ ನಾಚಿಕೆಯಾಗ್ಬೇಕು,' ಎಂದು ಪ್ರಥಮ್ ಟ್ಟೀಟ್ ಹಾಗೂ ಇತರೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

'ಒಂದು ವಾರದಲ್ಲಿ ನಮ್ಮ ಮನೆಯಲ್ಲಿ ಇನ್ನೊಂದು ಸಾವು. ಮಧ್ಯರಾತ್ರಿ ದುಡ್ಡು ಕಿತ್ಕೊಂಡು ಆಸ್ಪತ್ರೆಗೆ ಸೇರಿಸಿಕೊಳ್ಳದೇ ಪ್ರಾಣ ತೆಗೆದ ನೀವೂ ವೈದ್ಯರಾ? ಯಾವ ಬೇವರ್ಸಿ ನಿಮ್ಮನ್ನ ಜೀವರಕ್ಷಕರು ಅಂದಿದ್ದು? ನಾಚಿಕೆಯಾಗ್ಬೇಕು ನಿಮ್ಗೆ. ಯಾವ ಆಸ್ಪತ್ರೆಯಲ್ಲೂ ಬೆಡೆ, ವೆಂಟಿಲೇಟರ್‌ ಕೊಡದೇ 40 ಸಾವಿರ ದುಡ್ಡನ್ನು ಕಿತ್ಕೊಂಡು ಸಾಯಿಸಿಯೇ ಬಿಟ್ರು. ನನ್ನ ಲೈಫ್‌ಲ್ಲಿ ಇನ್ಯಾರಿಗೂ ಒಂದು ಹನಿ ನೀರು ಕೊಡಲ್ಲ. ಸರ್ಕಾರದವರಿಗೆ ಸ್ವಲ್ಪವಾದ್ರೂ ಮನುಷ್ಯತ್ವ ಇದ್ರೆ ಬಾಡಿಯನ್ನಾದರೂ ಕೊಡ್ಸಿ,' ಎಂದು ಪ್ರಥಮ್ ಆಗ್ರಹಿಸಿದ್ದಾರೆ. 

ಬೆಂಗಳೂರು ತೊರೆದ ಒಳ್ಳೇ ಹುಡುಗ; 'ಬಿಡುವಾಗ ಬೇಸರವಾಯ್ತು'!

ಕೊರೋನಾ ವೈರಸ್ ಇದೆ ಹೌದು. ಆದರೆ, ಅಗತ್ಯವಿರುವವರಿಗೆ ವೈದ್ಯಕೀಯ ಚಿಕಿತ್ಸೆ ಕೊಡದ ವೈದ್ಯರ ವಿರುದ್ಧ ಇಂಥ ಆಕ್ರೋಶಗಳು ಅಲ್ಲಲ್ಲಿ ಕೇಳಿ ಬಂದಿವೆ. ಅದರಲ್ಲಿಯೂ ಖಾಸಗಿ ಆಸ್ಪತ್ರೆಗಳು ದುಡ್ಡು ಹೊಡೆಯುತ್ತಿರುವುದಕ್ಕೆ ಜನರು ರೊಚ್ಚಿಗಿದ್ದಿದ್ದಾರೆ.