‘ಓ ಮೈ ಕಡವುಳೆ’ ಕನ್ನಡ ರಿಮೇಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲು ಪುನೀತ್ ರಾಜ್‌ಕುಮಾರ್ ಒಪ್ಪಿಗೆ ನೀಡಿದ್ದಾರೆ? ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ತಮಿಳಿನ ‘ಓ ಮೈ ಕಡವುಳೆ’ ಚಿತ್ರದ ಕನ್ನಡಕ್ಕೆ ರಿಮೇಕ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯಿಸುತ್ತಿದ್ದಾರೆ. ಅವರಿಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ವಿಜಯ್ ಸೇತುಪತಿ ಪಾತ್ರಕ್ಕೆ ಬಣ್ಣ ಹಚ್ಚುವುದು ಬಹುತೇಕ ಖಚಿತವಾಗಿದೆ. ನಟ ಪ್ರಭುದೇವ ಸೋದರ ನಾಗೇಂದ್ರ ಪ್ರಸಾದ್ ಈ ಚಿತ್ರವನ್ನು ಕನ್ನಡಕ್ಕೆ ತಕ್ಕಂತೆ ರೂಪಿಸಲು ಹೊರಟಿದ್ದಾರೆ.
ಪುನೀತ್ ರಾಜ್‌ಕುಮಾರ್ 'ಫ್ಯಾಮಿಲಿ ಫ್ಯಾಕ್' ಹೇಗಿರಲಿದೆ?
ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬಂದಿದ್ದ ‘ಓ ಮೈ ಕಡವುಳೆ’ ಚಿತ್ರಕ್ಕೆ ಯಶಸ್ಸು ಖಂಡಿತು. ಅತ್ಯುತ್ತಮ ಚಿತ್ರಕಥೆ ಎನ್ನುವ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿತ್ತು. ಐದು ಮಂದಿ ಮುಖ್ಯ ಪಾತ್ರಧಾರಿಗಳ ನಡುವೆ ಸಾಗುವ ಕತೆ ಇದಾಗಿದ್ದು, ಈ ಪೈಕಿ ವಿಜಯ್ ಸೇತುಪತಿ ಅವರು ಕಡವುಳು ಅಂದರೆ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
![]()
ಇದೇ ದೇವರ ಪಾತ್ರದಲ್ಲಿ ಪುನೀತ್ ನಟಿಸುತ್ತಾರೆ ಎನ್ನಲಾಗುತ್ತಿದೆ. ಈ ಪಾತ್ರದ ತೂಕ ಹೆಚ್ಚಿಸಲು ಪವರ್‌ಸ್ಟಾರ್ ಅವರಿಂದ ಮಾತ್ರ ಸಾಧ್ಯ, ಹೀಗಾಗಿ ಅವರನ್ನೇ ಈ ಕಡವುಳು ಪಾತ್ರದಲ್ಲಿ ನೋಡಬೇಕು ಎಂಬ ಆಸೆ ಎನ್ನುತ್ತಾರೆ ನಿರ್ದೇಶಕ ನಾಗೇಂದ್ರ ಪ್ರಸಾದ್.
