ಟಾಕ್ಸಿಕ್ ಸಿನಿಮಾದ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕಿಲ್ಲ. CBFC ಎ ಪ್ರಮಾಣಪತ್ರ ನೀಡಿದ ಬೆನ್ನಲ್ಲೇ ಧುರಂಧರ್ ಸಿನಿಮಾ ಜೊತೆ ಹಲವರು ಹೋಲಿಕೆ ಮಾಡಿದ್ದಾರೆ. ಟಾಕ್ಸಿಕ್ ಸಿನಿಮಾ ರಿಲೀಸ್ ವೇಳೆ ಧರುಂಧರ್ ಸಿನಿಮಾ ಚರ್ಚೆ ಯಾಕೆ?
ಬೆಂಗಳೂರು (ಆ.22) ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮೊದಲೇ ಹಲವು ದಾಖಲೆ ಬರೆಯುತ್ತಿದೆ. ಅಡ್ವಾನ್ಸ್ ಬುಕಿಂಗ್, ಅಭಿಮಾನಿಗಳ ಕುತೂಹಲ ಎಲ್ಲವೂ ಡಬಲ್ ಆಗುತ್ತಿದೆ. ಇದೇ ವೇಳೆ ಟಾಕ್ಸಿಕ್ ಸಿನಿಮಾ CBFC ಬೋರ್ಡ್‌ನಿಂದ ಎ ಪ್ರಮಾಣ ಪತ್ರ ಪಡೆದಿದೆ. ಟಾಕ್ಸಿಕ್ ಸಿನಿಮಾದ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕಿಲ್ಲ. ಕೆಲ ಸಣ್ಣ ಸೂಚನೆಗಳೊಂದಿಗೆ ಎ ಪ್ರಮಾಣ ಪತ್ರ ನೀಡಲಾಗಿದೆ. ಈ ಪ್ರಮಾಣಪತ್ರದ ಬೆನ್ನಲ್ಲೇ ಇದೀಗ ಕೆಲ ಅಭಿಮಾನಿಗಳು ಟಾಕ್ಸಿಕ್ ಸಿನಿಮಾ ಜೊತೆ ಧುರಂಧರ್ ಸಿನಿಮಾ ಚರ್ಚೆ ಆರಂಭಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣ ಪತ್ರ ಪಡೆದಿದೆ. ಯಾವುದೇ ದೃಶ್ಯಕ್ಕೆ ಕತ್ತರಿ ಹಾಕುವಂತೆ ಸೂಚಿಸಿಲ್ಲ. ಹಿಂಸಾತ್ಮಕ ದೃಶ್ಯಗಳು ಈ ಸಿನಿಮಾದಲ್ಲಿದೆ. ಆದರೆ ವಯಸ್ಕರಾಗಿಗಾಗಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಸೆನ್ಸಾರ್ ಬೋರ್ಡ್ ಎ ಪ್ರಮಾಣ ಪತ್ರ ನೀಡಿ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕಲು ಸೂಚಿಸಿಲ್ಲ. ಈ ನಿರ್ಧಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
3 ಗಂಟೆ 14 ನಿಮಿಷದ ಟಾಕ್ಸಿಕ್ ಸಿನಿಮಾ
ಟಾಕ್ಸಿಕ್ 3 ಗಂಟೆ 14 ನಿಮಿಷದ ಸಿನಿಮಾ. ಕನ್ನಡದಲ್ಲಿ ಕೆಲ ಪದ, ವಾಕ್ಯಗಳಿಗೆ ಮ್ಯೂಟ್ ಮಾಡಲು ಸೆನ್ಸಾರ್ ಬೋರ್ಡ್ ಸೂಚಿಸಿದೆ. ಇಂಗ್ಲೀಷ್ ಆವೃತ್ತಿಯಲ್ಲೂ ಕೆಲ ಸಣ್ಣ ಬದಲಾವಣೆ ಸೂಚಿಸಿದೆ. ಇದೀಗ ಧುರಂಧರ್ ಸಿನಿಮಾ ಕುರಿತು ಚರ್ಚೆಗಳು ತೀವ್ರಗೊಳ್ಳುತ್ತಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಹಿಂಸಾತ್ಮಕ ವಿಷಗಳಿಗೆ ಯಾವುದೇ ಕಟ್ ಸೂಚಿಸಿಲ್ಲ. ಆದರೆ ಧುರಂಧರ್ ಸಿನಿಮಾದಲ್ಲಿ ಹಿಂಸೆ ಹೆಚ್ಚಿದೆ ಎಂದು ಹಲವು ಕಟ್ ಸೂಚಿಸಿತ್ತು. ಇದು ಹೇಗೆ ಸಾಧ್ಯ ಎಂದು ಕೆಲವರು ಪ್ರಶ್ನಿಸಿದ್ದಾರೆ. ಹಿಂಸೆ ಹಾಗೂ ನೋಡಲು ಕಷ್ಟವಾಗುವ ಹಿಂಸೆಗಳ ಸಿನಿಮಾಗಳಿಗೆ ಯಾವ ಮಾನದಂಡ ಅನುಸರಿಸಲಾಗುತ್ತದೆ ಎಂಬ ಪ್ರಶ್ನೆಗಳು ಮೂಡಿದೆ. ಟಾಕ್ಸಿಕ್ ಸಿನಿಮಾ ಹಾಗೂ ದುರಂಧರ್ ಸಿನಿಮಾದಲ್ಲಿ ಎರಡಲ್ಲೂ ಹಿಂಸಾತ್ಮಕ ಸೀನ್‌ಗಳಿತ್ತು. ಆದರೆ ಕಟ್ ಧುರಂಧರ್ ಸಿನಿಮಾಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ್ದಾರೆ. ಹಿಂಸೆ ಹಾಗೂ ಮುತ್ತು ಎರಡು ವಿಷಗಳಲ್ಲಿ ಸೆನ್ಸಾರ್ ಮಂಡಳಿ ಮಾನದಂಡ ಸರಿಯಿಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಮಕ್ಕಳಿಗಲ್ಲ, ಯಶ್ ಸ್ಪಷ್ಟನೆ
ಟಾಕ್ಸಿಕ್ ಸಿನಿಮಾದ ಹೆಸರಿನಲ್ಲೇ ಇದು ವಯಸ್ಕರಿಗಾಗಿ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಇನ್ನು ಸ್ವತಃ ರಾಕಿಂಗ್ ಸ್ಟಾರ್ ಯಶ್ ಹಲವು ವೇದಿಕೆಗಳಲ್ಲಿ ಇದು ಮಕ್ಕಳಿಗೆ ಅಲ್ಲ, ಈ ಸಿನಿಮಾ ವಯಸ್ಕರಿಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಮಕ್ಕಳು ಈ ಸಿನಿಮಾ ನೋಡಬೇಡಿ. ಈ ಸಿನಿಮಾನವನ್ನು ವಯಸ್ಕರಿಗಾಗಿ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.


