ಹಣ, ಡಿವೋರ್ಸ್,ಕೊಲೆ ಇದೆಲ್ಲಾ ಬೇಡವೇ ಬೇಡ; 'ರಾಮೇಶ್ವರಂ ಕೆಫೆ' ಓನರ್ ತರ ಹುಡ್ಗಿ ಬೇಕು ಅಂತಾರೆ ನೆಟ್ಟಿಗರು
ರಾಜ್ಯದಲ್ಲಿ ಚಿತ್ರರಂಗದವರ ಡಿವೋರ್ಸ್ ಸುದ್ದಿ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ರಾಮೇಶ್ವರಂ ಕೆಫೆ ಸಂಸ್ಥಾಪಕ ದಂಪತಿ ದಿವ್ಯಾ ಹಾಗೂ ರಾಘವ್ ಚರ್ಚಿತರಾಗುತ್ತಿದ್ದಾರೇಕೆ?
ಕರ್ನಾಟಕದಲ್ಲಿ ಕೇಳಿ ಬರುತ್ತಿರುವ ಡಿವೋರ್ಸ್ ಸುದ್ದಿಗಳು ಎಲ್ಲರನ್ನೂ ಚಿಂತೆಗೀಡು ಮಾಡುವಂತೆ ಮಾಡಿದೆ. ಪತಿ-ಪತ್ನಿ ಎಂದರೆ ಹೊಂದಾಣಿಕೆ ಕಷ್ಟವೇ. ಆ ಹೊಂದಾಣಿಕೆ ಇಲ್ಲವೆಂದು ಚಂದನ್-ನಿವೇದಿತಾ ಡಿವೋರ್ಸ್ ಕೊಟ್ಟರೆ, ಮತ್ಯಾವುದೋ ಕಾರಣಕ್ಕೆ ಡಾ.ರಾಜ್‌ಕುಮಾರ್ ಮೊಮ್ಮಗ ಯುವ ಡಿವೋರ್ಸ್ ಕೊಡಲು ಮುಂದಾಗಿದ್ದಾರೆ. ಒಂದು ಕೇಸಿನಲ್ಲಿ ಎಲ್ಲವೂ ಸುಲಲಿತವಾಗಿ ಆಗಿದ್ದರೆ, ಮತ್ತೊಂದು ಕೇಸಲ್ಲಿ ತಮ್ಮ ಕುಟುಂಬದ ಗೌರವ ಕಾಪಾಡುವುದ ಬಿಟ್ಟು, ಒಬ್ಬರ ಮೇಲೆ ಒಬ್ಬರು ಕೆಟ್ಟದಾಗಿ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಿರುವುದು ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತಾಗಿದೆ.
ನಿವೇದಿತಾ-ಚಂದನ್, ಯುವ ರಾಜ್‌ಕುಮಾರ್-ಶ್ರೀದೇವಿ ಭೈರಪ್ಪ ಅವರ ಡಿವೋರ್ಸ್ ಸುದ್ದಿಯ ಬೆನ್ನಲ್ಲೇ, ಸ್ಯಾಂಡಲ್‌ವುಡ್ ನಟ ದರ್ಶನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ಅವರ ಗೆಳತಿ, ಎರಡನೇ ಹೆಂಡತಿ ಎಂದೇ ಹೇಳುತ್ತಿರುವ ಪವಿತ್ರಾ ಗೌಡ ಸಹ ಅರೆಸ್ಟ್ ಆಗಿದ್ದು, ದರ್ಶನ್ ಸಂಸಾರದ ಬಗ್ಗೆಯೂ ಹತ್ತು ಹಲವು ಸುದ್ದಿಗಳು ಹೊರ ಬರುತ್ತಿವೆ. ಜೊತೆಗೆ 12 ವರ್ಷಗಳ ಹಿಂದೆ ಧರ್ಮಪತ್ನಿ ವಿಜಯಲಕ್ಷ್ಮಿಗೆ ಹೊಡೆದ ದರ್ಶನ್, ಜೈಲಿಗೆ ಹೋಗಿದ್ದು, ನಂತರ ವಿಜಯಲಕ್ಷ್ಮಿ ದೂರು ಹಿಂಪಡೆದಿದ್ದರಿಂದ ಜೈಲಿಂದ ಹೊರ ಬಂದ ಕಾರಣ ಪ್ರಕರಣ ಅಲ್ಲಿಯೇ ಕೊನೆಯಾಗಿದ್ದು ಎಲ್ಲವೂ ಚರ್ಚೆಯಾಗುತ್ತಿದೆ. ಅವತ್ತೇ ವಿಜಯಲಕ್ಷ್ಮಿ ದೂರು ಹಿಂಪಡೆಯದೇ, ತಾನು ಅನುಭವಿಸಿದ ಹಿಂಸೆಯನ್ನು ಯಾವ ಹೆಣ್ಣೂ ಅನುಭವಿಸಬಾರದು. ದರ್ಶನ್‌ಗೆ ಕಠಿಣ ಶಿಕ್ಷೆಯಾಗಬೇಕೆಂದು ಪಟ್ಟು ಹಿಡಿದಿದ್ದರೆ ಇವತ್ತು ದರ್ಶನ್ ಈ ಮಟ್ಟಕ್ಕೆ ಬರುತ್ತಿರಲಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ.
ಮಧ್ಯರಾತ್ರಿ 3 ಗಂಟೆಗೆ ಊಟ ಮಾಡುತ್ತಿದ್ದರು; ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್ ಬಗ್ಗೆ ರಾಮೇಶ್ವರಂ ಕೆಫೆ ಮಾಲೀಕರ ಮಾತು
ಈ ಎಲ್ಲದರ ನಡುವೆ ರಾಮೇಶ್ವರ್ ಕೆಫೆ ಸಂಸ್ಥಾಪಕ ಜೋಡಿ ಬಗ್ಗೆಯೂ ವಿದ್ಯಾ-ರಾಘವ್ ಸಹ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದು, ಜೀವನದಲ್ಲಿ ಏನಾದರೂ ಸಾಧಿಸಲು ದಂಪತಿ ಒಂದಾಗಬೇಕೇ ಹೊರತು, ಈ ರೀತಿ ಮದ್ವೆಯಾಗಿ, ಡಿವೋರ್ಸ್ ಆಗಲು ಅಲ್ಲ. ಇವರನ್ನು ನೋಡಿ ಕಲಿಯಿರಿ ಎಂಬ ಸಂದೇಶ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಾಮೇಶ್ವರ್ ಕೆಫೆ ದಂಪತಿ ಮಾದರಿಯಾಗುವಂತೆ ಮಾಡಿದ್ದೇನು ಇಲ್ಲಿದೆ ಓದಿ.
ರಾಮೇಶ್ವರ್ ಕೆಫೆ ದಿವ್ಯಾ-ರಾಘವ್ ಜೋಡಿ:
ಇತ್ತೀಚೆಗೆ ಸುದ್ದಿಯಲ್ಲಿ ಇದ್ದಿದ್ದು ರಾಮೇಶ್ವರಂ ಕೆಫೆ. ಒಂದು ದೇಶದ ಸಿರವಂತೆ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮಗನ ಮದ್ವೆಗೆ ಈ ಕೆಫೆಗೆ ಫುಡ್ ಆರ್ಡರ್ ಸಿಕ್ಕಿದ್ದಕ್ಕೆ, ಮತ್ತೊಂದು ಇಂದಿರಾ ನಗರದ ಬ್ರಾಂಚಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದಕ್ಕೆ. ಅದರ ಜೊತೆ ಈ ಕೆಫೆ ಬೆಳೆದು ಬಂದ ಪರಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಜೊತೆಗೆ 21 ವರ್ಷದಲ್ಲಿಯೇ ಸಿಎ ಮುಗಿಸಿದ ಬಡ ಮಧ್ಯಮ ವರ್ಗದ ದಿವ್ಯಾರಿಗೆ ಜೀವನದಲ್ಲಿ ಏನಾದರೂ ಸಾಧಿಸಬೇಕು, ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಇತ್ತು.
ರಾಘವ್‌ಗೆ ದಿವ್ಯಾ ಸಿಕ್ಕಿದ್ದೆಲ್ಲಿ?
ಸಿಎ ವೃತ್ತಿ ಪ್ರಾರಂಭಿಸಿ ಸೆಟಲ್ ಆಗುತ್ತಿರುವಾಗಲೇ, ದಿವ್ಯಾ ಅವರಿಗೆ ರಾಘವ್ ಅವರ ಭೇಟಿಯಾಗುತ್ತದೆ. ಆಹಾರ ಉದ್ಯಮದಲ್ಲಿ15ಕ್ಕೂ ಹೆಚ್ಚು ವರ್ಷಗಳ ಅನುಭವವಿದ್ದ ರಾಘವ್, ದಿವ್ಯಾ ಬಳಿ ಉದ್ಯಮ ಮುನ್ನಡೆಸುವ ಸಂಬಂಧ ಸಲಹೆ ಕೇಳಲು ಬಂದಿದ್ದರು. ಹೀಗೆ ಪರಿಚಿತರಾದ ರಾಘವ್ ಮುಂದೆ ಹೊಸ ರೆಸ್ಟೋರೆಂಟ್ ಚೈನ್ ಪ್ರಾರಂಭಿಸಲು ಪಾಲುದಾರರಾಗಿ ಕೈಜೋಡಿಸುವಂತೆ ದಿವ್ಯಾ ಬಳಿ ಚರ್ಚಿಸಿದ್ದರು. ಈ ಸಮಯದಲ್ಲಿ ದಿವ್ಯಾ ಅವರ ವೃತ್ತಿ ಉತ್ತಮ ಸ್ಥಿತಿಯಲ್ಲಿತ್ತು. ಆದರೂ ಅದನ್ನು ಬಿಟ್ಟು ಹೋಟೆಲ್ ಉದ್ಯಮ ಪ್ರಾರಂಭಿಸಲು ರಾಘವ್ ಜೊತೆಗೆ ಕೈಜೋಡಿಸಿದರು.
ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್‌ಗೆ ಅರ್ಜಿ ಹಾಕಿದ ಸೆಲೆಬ್ರೆಟಿ!
ಆಗ ಜನ್ಮ ತಾಳಿದ್ದು ರಾಮೇಶ್ವರಂ ಕೆಫೆ. ದಿವ್ಯಾ ಹಾಗೂ ರಾಘವ್ ತಮ್ಮ ಕನಸಿನ ರೆಸ್ಟೋರೆಂಟ್‌ಗೆ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಗೌರವಾರ್ಥ 'ರಾಮೇಶ್ವರಂ ಕೆಫೆ' ಎಂಬ ಹೆಸರಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಶುರುವಾದ ಈ ರೆಸ್ಟೋರೆಂಟ್ ರುಚಿ ಹಾಗೂ ಶುಚಿಗೆ ಆದ್ಯತೆ ನೀಡಿದ ಕಾರಣ ದೊಡ್ಡ ಯಶಸ್ಸು ಕಂಡಿದೆ. ಇಂದು ಈ ಕೆಫೆ ಬೆಂಗಳೂರಲ್ಲಿ ಹಲವು ಶಾಖೆ ಹೊಂದಿದ್ದು, ದುಬೈ, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಕೂಡ ಶಾಖೆಗಳನ್ನು ತೆರೆಯುತ್ತಿದೆ. ನೂರಾರು ಉದ್ದಯೋಗಿಗಳಿಗೂ ಕೆಲಸ ಕೊಟ್ಟ ಈ ದಂಪತಿ ತಾವೂ ಬೆಳೆದು, ತಮ್ಮವರನ್ನು ಬೆಳೆಸುತ್ತಿರುವುದು ಮಾದರಿ ಎನ್ನುತ್ತಿದೆ ಸೋಷಿಯಲ್ ಮೀಡಿಯಾ.