Asianet Suvarna News Asianet Suvarna News

ರಘು ದೀಕ್ಷಿತ್ ಸ್ಟುಡಿಯೋದಲ್ಲಿ 'ಮೈನಾ' ಬೆಡಗಿ ನಿತ್ಯಾ ಮೆನನ್; ಏನಿದು ಸರ್ಪ್ರೈಸ್?

ಮೊದಲ ಬಾರಿಗೆ ರಘು ದೀಕ್ಷಿತ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಿದ ನಟಿ ನಿತ್ಯಾ ಮೆನನ್‌. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಶೇರ್ ಮಾಡಿಕೊಂಡು ಶುಭಾಶಯ ತಿಳಿಸಿದ್ದಾರೆ...

Nithya menon Telugu music recording in Raghu dixit Bangalore studio
Author
Bangalore, First Published Sep 17, 2020, 4:47 PM IST
  • Facebook
  • Twitter
  • Whatsapp

ಬಹುಭಾಷಾ ಸುಂದರಿ ನಿತ್ಯಾ ಮೆನನ್‌  ನಿರೂಪಕಿ ಅನುಶ್ರೀ ಯುಟ್ಯೂಬ್‌ ಚಾನೆಲ್‌ನಲ್ಲಿ ಕನ್ನಡ ಹಾಡುಗಳನ್ನು ಹಾಡಿದ್ದರು. ಇಂಪಾದ ಧ್ವನಿಗೆ ಬೋಲ್ಡ್ ಆದದ್ದು ವೀಕ್ಷಕರು ಮಾತ್ರವಲ್ಲ, ಸಿನಿಮಾ ನಿರ್ದೇಶಕರೂ ಹೌದು. 

ನಿತ್ಯ ಮೆನನ್ ಲೆಸ್ಬಿಯನ್ ಲಿಪ್‌ಲಾಕ್: ನಟಿಯ ಬೋಲ್ಡ್ ಲುಕ್ ವೈರಲ್

ಅನಿ ಸಾಸಿ ನಿರ್ದೇಶನದ  'ನಿನ್ನಿಲಾ ನಿನ್ನಿಲಾ...' ಚಿತ್ರಕ್ಕೆ ನಿತ್ಯಾ ಮೆನನ್‌ ಹಾಡಿದ್ದಾರೆ. ಟೋನಿ ಜೋಸೆಫ್‌ ಸಂಯೋಜನೆಯ ಈ ಹಾಡನ್ನು ಹಾಡಲು ಬೆಂಗಳೂರಿನಲ್ಲಿರುವ ರಘು ದೀಕ್ಷಿತ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. 

ಅನಿ ಸಾಸಿ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಅಶೋಕ್‌ ನಟನಾಗಿ ನಿತ್ಯಾ ಮೆನನ್ ಹಾಗೂ ರಿತು ವರ್ಮಾ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. 

ನಂಗೆ ಮದ್ವೆ ಆಗು ಅಂದಿದ್ರು ದುಲ್ಖರ್ ಅಂತಾರಲ್ಲ ಈ ನಿತ್ಯಾ!

'ಲವ್ಲಿ ನಟಿ ನಿತ್ಯಾ ಮೆನನ್‌ ಇಂದು ನನ್ನ ಸ್ಟುಡಿಯೋದಲ್ಲಿ ತೆಲುಗು ಸಿನಿಮಾಗೆ ಹಾಡು ರೆಕಾರ್ಡ್‌ ಮಾಡಿದ್ದಾರೆ. ಸೂಪರ್ ಟ್ಯಾಲೆಂಟೆಡ್‌ ರಾಜೇಶ್‌ ಬರೆದಿರುವ ಹಾಡು ಇದು.  ಕರ್ನಾಟಕದಿಂದ ಹೊರಗಿರುವ ಸಂಯೋಜಕರು ನನ್ನ ಸ್ಟುಡಿಯೋದಲ್ಲಿ ಕೆಲಸ ಮಾಡುವುದು ನನ್ನ ಹೆಮ್ಮೆ,' ಎಂದು ರಘು ದೀಕ್ಷಿತ್ ಸೋಷಿಯಲ್ ಮೀಡಿಯಾ ಪೋಸ್ಟ್ ಶೇರ್ ಮಾಡಿ ಕೊಂಡಿದ್ದಾರೆ.

 

'ನೋಡಿ ಇವತ್ತು ನಾವು ಏನು ಮಾಡುತ್ತಿದ್ದೀವಿ. ನನ್ನ ಫೇವರೆಟ್‌ ಬೆಂಗಳೂರಿನ ರಘು ದೀಕ್ಷಿತ್ ಸ್ಟುಡಿಯೋದಲ್ಲಿ ಇದ್ದೀವಿ,' ಎಂದು ನಿತ್ಯಾ ಸಹ ಬರೆದುಕೊಂಡಿದ್ದಾರೆ. 

ಈ ಹಿಂದೆ ಟೋನಿ ಜೋಸೆಫ್‌ ಸಂಯೋಜನೆಯ ಮಲಯಾಳಂ ಹಾಡಿಗೆ ನಿತ್ಯಾ ಮೆನನ್‌ ಹಾಡಿದ್ದರು.

 

Follow Us:
Download App:
  • android
  • ios