ಚುನಾವಣೆಯಲ್ಲಿ ಸೋತ ನಿಖಿಲ್ ಕುಮಾರಸ್ವಾಮಿಯಿಂದ ತ್ರಯಂಬಕೇಶ್ವರನಿಗೆ ವಿಶೇಷ ಪೂಜೆ

ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಇದೀಗ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಪತ್ನಿ ರೇವತಿ ಜೊತೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 
 

Nikhil Kumaraswamy visted Triambakeshwar Temple with wife pav

ಸ್ಯಾಂಡಲ್‌ವುಡ್ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಚುನಾವಣೆಯಲ್ಲಿ ಸೋತ ಬಳಿಕ ಇದೀಗ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಪತ್ನಿ ರೇವತಿ ಜೊತೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊ ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, ಭಾರತದ ಹನ್ನೆರಡು ಪೂಜ್ಯ ಜ್ಯೋತಿರ್ಲಿಂಗಗಳಲ್ಲಿ ಒಂದಾದ ನಾಸಿಕ್ ನ ಪವಿತ್ರ ತ್ರಯಂಬಕೇಶ್ವರ ದೇವಸ್ಥಾನಕ್ಕೆ (Triambakeshwar Temple)ಭೇಟಿ ನೀಡುವ ಸುಯೋಗ ನನಗೆ ಸಿಕ್ಕಿತು. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಈ ದೇವಸ್ಥಾನವು ಪವಿತ್ರ ಗೋದಾವರಿ ನದಿಯ ಉಗಮಸ್ಥಾನವಾದ ಭವ್ಯವಾದ ಬ್ರಹ್ಮಗಿರಿ ಬೆಟ್ಟಗಳ ತಪ್ಪಲಿನಲ್ಲಿದೆ. ಇತಿಹಾಸ ಮತ್ತು ಆಧ್ಯಾತ್ಮಿಕತೆ ಹಿನ್ನೆಲೆ ಹೊಂದಿರುವ ಈ ದೇವಾಲಯವು ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಭಕ್ತರಿಗೆ ಮುಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ ಎಂದು ಬರೆದಿದ್ದಾರೆ. 

ನಿಖಿಲ್ ಸೋಲಿನ ಬಗ್ಗೆ ಮೊದಲ ಬಾರಿಗೆ ತಾಯಿ ಅನಿತಾ ಮಾತು

ಅಂತಹ ದೈವಿಕ ಶಕ್ತಿಯ ಸಮ್ಮುಖದಲ್ಲಿ, ಪ್ರೀತಿಪಾತ್ರರಿಂದ ಸುತ್ತುವರೆದು ನಿಲ್ಲುವುದು ಒಂದು ಅದ್ಭುತ ಅನುಭವವಾಗಿತ್ತು. ನಾವು ನಮ್ಮ ಪ್ರಾರ್ಥನೆಗಳನ್ನು ಸಲ್ಲಿಸುವ ಮೂಲಕ ಶತಮಾನಗಳಿಂದ ನಂಬಿಕೆ ಮತ್ತು ಭಕ್ತಿಯ ದಾರಿದೀಪವಾಗಿರುವ ಈ ದೇವಾಲಯದ ಅನಾದಿ ಕಾಲದ ಪರಂಪರೆಯನ್ನು ನಾವು ಪ್ರತಿಬಿಂಬಿಸಿದ್ದೇವೆ. ಈ ದೇಗುಲದ ಸಂಕೀರ್ಣವಾದ ವಾಸ್ತುಶಿಲ್ಪ ಮತ್ತು ಪಾವಿತ್ರ್ಯತೆ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮತ್ತು ನಮ್ಮ ಪ್ರಯಾಣದ ಪ್ರತಿಯೊಂದು ಹಂತದಲ್ಲೂ ದೈವಿಕ ಮಾರ್ಗದರ್ಶನವನ್ನು ಪಡೆಯುವ ಮಹತ್ವವನ್ನು ನೆನಪಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ನಿಖಿಲ್‌ ಪಾಲಿಗೆ ಇನ್ನೂ ಮುಗಿದಿಲ್ಲ ಕುರುಕ್ಷೇತ್ರದ ಶಾಪ, ಅಭಿಮನ್ಯುಗೆ ಇನ್ನೆಷ್ಟು ದಿನ ವನವಾಸ!

ಕೊನೆಯದಾಗಿ ಶಿವನ ಅನುಗ್ರಹವು ನಮ್ಮೆಲ್ಲರಿಗೂ ಶಾಂತಿ, ಶಕ್ತಿ ಮತ್ತು ಸಮೃದ್ಧಿಯತ್ತ ಮಾರ್ಗದರ್ಶನ ನೀಡಲಿ.  ಓಂ ನಮಃ ಶಿವಾಯ (Om Namah Shivaya)ಎಂದು ಬರೆದಿದ್ದಾರೆ.  ನಿಖಿಲ್ ಕುಮಾರಸ್ವಾಮಿಯವರಿಗೆ ದೇವರ ಮೇಲಿರುವ ನಂಬಿಕೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಇದು ನಿಜವಾದ ಸಂಸ್ಕಾರ ಎಂದು ಹೊಗಳಿದ್ದಾರೆ. 


 

Latest Videos
Follow Us:
Download App:
  • android
  • ios