ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ತಮ್ಮ ಮೊದಲ ಹುಟ್ಟಹಬ್ಬವನ್ನು ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ.  ಅಂದುಕೊಂಡಂತೆ 33ನೇ ಹುಟ್ಟುಹಬ್ಬ ಆಚರಿಸಿ ಕೊಳ್ಳದ  ನಿಖಿಲ್ ಕುಮಾರಸ್ವಾಮಿಗೆ ಪತ್ನಿ ರೇವತಿ ಏನ್ ಗಿಫ್ಟ್‌ ಕೊಟ್ಟಿದ್ದಾರೆ ಗೊತ್ತಾ?

"

ನಿಖಿಲ್ ಹುಟ್ಟುಹಬ್ಬಕ್ಕೆ 'ರೈಡರ್‌' ಟೀಸರ್ ರಿಲೀಸ್‌; ಸಿಕ್ಕಾಪಟ್ಟೆ ಮಾಸ್ ಗುರು!

ಆರಂಭದಿಂದಲೂ ನಿಖಿಲ್ ತಮ್ಮ ಪತ್ನಿ ತುಂಬಾನೇ ಸೈಲೆಂಟ್ ಎಂದು ಹೇಳುತ್ತಲೇ ಬಂದಿದ್ದಾರೆ. ನಿಶ್ಚಿತಾರ್ಥದ ದಿನ ಕ್ಯಾಮೆರಾ ಎದುರು ಬಂದದ್ದು ಬಿಟ್ಟರೆ, ಮತ್ತೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ನಿಖಿಲ್ ಶೇರ್ ಮಾಡುವ ಫೋಟೋ ಹಾಗೂ ನೀಡುವ ಮಾಹಿತಿಯಿಂದಲೇ ರೇವತಿ ಬಗ್ಗೆ ಅಭಿಮಾನಿಗಳಿಗೆ ವಿಷಯ ತಿಳಿಯುವುದು.  ನಿಖಿಲ್ ಹುಟ್ಟುಹಬ್ಬಕ್ಕೆ ರೇವತಿ ಏನು ಗಿಫ್ಟ್‌ ಕೊಟ್ಟಿದ್ದಾರೆ ಎಂದು ರಿಪೋರ್ಟರ್‌ ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರವಿದು.

ನಿಖಿಲ್ ಗಿಫ್ಟ್‌:
'ನನಗೆ ರೇವತಿ ಅವರೆ ದೊಡ್ಡ ಗಿಫ್ಟ್‌ ಅದಕ್ಕಿಂತ ಮತ್ತೊಂದು ಗಿಫ್ಟ್‌ ಏನೂ ಬೇಡ,' ಎಂದು ನಿಖಿಲ್ ಉತ್ತರ ನೀಡಿದ್ದಾರೆ. ಇತ್ತೀಚಿಗೆ ಖಾಸಗಿ ಮಾಧ್ಯಮದಲ್ಲಿ ಮಾತನಾಡಿರುವ ನಿಖಿಲ್ ರೇವತಿಗೆ ಸಿನಿಮಾ ಇಷ್ಟನಾ? ರಾಜಕೀಯ ಇಷ್ಟ ನಾ? ಎಂದು ಕೇಳಲಾಗಿದ್ದ ಪ್ರಶ್ನೆಗೂ ಉತ್ತರ ನೀಡಿದ್ದಾರೆ. 

ಅಭಿಮಾನಿಗಳಿಗೆ ಊಟದ ವ್ಯವಸ್ಥೆ; ಕಾರ್ಯಕರ್ತರ ಭೇಟಿ ನಂತರ ಅನಾಥಾಶ್ರಮಕ್ಕೆ ನಿಖಿಲ್ ಭೇಟಿ! 

ಹೌದು! ನಿಖಿಲ್‌ ಅವರನ್ನು ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ನೋಡಲು ರೇವತಿ ಇಷ್ಟ ಪಡುತ್ತಾರಂತೆ. ಮುಚ್ಚು ಮರೆ ಮಾಡದೇ ನಿಖಿಲ್ ನೀಡುವ ಉತ್ತರ ನೋಡಿ, ನೆಟ್ಟಿಗರು 'ಸರ್ ನೀವು ಏನೂ ಮುಚ್ಚಿಡುವುದಿಲ್ಲ. ಎಲ್ಲವೂ ಮನಬಿಚ್ಚಿ ಮಾತಾಡುತ್ತೀರಾ. ನೋ ಸರ್ಪ್ರೈಸ್' ಎಂದ ಕಾಮೆಂಟ್ ಮಾಡಿದ್ದಾರೆ.

ಚಿತ್ರದಲ್ಲಿ ಅಭಿನಯಿಸುವುದು, ಸಿನಿಮಾ ನಿರ್ಮಾಣ ನಿಖಿಲ್‌ಗಿರುವ ಪ್ಯಾಷನ್‌. ಹುಟ್ಟಿದಬ್ಬದ ದಿನವೇ ನಿಖಿಲ್ ಮುಂದಿನ ಸಿನಿಮಾ ರೈಡರ್‌ ಟೀಸರ್‌ ಕೂಡ ಬಿಡುಗಡೆ ಮಾಡಲಾಗಿದೆ. ನಿಖಿಲ್ ಮಾಸ್‌ ಲುಕ್ ಅನ್ನು ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ.