ನಾಲ್ಕು ವರ್ಷಗಳ ನಂತರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಧನಂಜಯ್. ಟೈಮ್ಸ್‌ ಸ್ವ್ಕೀರ್‌ನಲ್ಲಿ ಕನ್ನಡದ ನಟನ ಪೋಸ್ಟರ್.... 

ಇಂದು ಡಾಲಿ ಧನಂಜಯ್‌ ಹುಟ್ಟುಹಬ್ಬ. ಆ ಪ್ರಯುಕ್ತ ಅವರು ನಟಿಸುತ್ತಿರುವ ಹೊಸ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದೆ. ‘ಬಡವ ರಾಸ್ಕಲ್‌’ ಸಿನಿಮಾ ಖ್ಯಾತಿಯ ನಿರ್ದೇಶಕ ಶಂಕರ್‌ಗುರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಯಶಸ್ವೀ ಕಾಂಬಿನೇಷನ್‌ ಮತ್ತೆ ಜತೆಯಾಗಿದೆ.

ನಿರ್ದೇಶಕ ಶಂಕರ್‌ ಗುರು ಈ ಸಿನಿಮಾ ಕುರಿತು, ‘ಇದೊಂದು ಪಕ್ಕಾ ಆ್ಯಕ್ಷನ್ ಎಂಟರ್‌ಟೇನರ್‌. ಒಬ್ಬ ಡಾನ್‌ ಕ್ರೌರ್ಯವನ್ನು ತೊರೆದು ತನ್ನ ಮೂಲವನ್ನು ಹುಡುಕಿಕೊಂಡು ಬರುವ ಕತೆ. ಕೊಂಚ ಭಾವನಾತ್ಮಕ, ಜಾಸ್ತಿ ಮನರಂಜನಾತ್ಮಕ. ಉತ್ತರಕಾಂಡ ಸಿನಿಮಾ ಮುಗಿದ ಮೇಲೆ ನಮ್ಮ ಚಿತ್ರದ ಚಿತ್ರೀಕರಣ ಶುರುವಾಗುತ್ತದೆ’ ಎನ್ನುತ್ತಾರೆ. ಈ ಚಿತ್ರವನ್ನು ಸತ್ಯ ರಾಯಲ ನಿರ್ಮಿಸುತ್ತಿದ್ದಾರೆ, ವಾಸುಕಿ ವೈಭವ್ ಸಂಗೀತ ನಿರ್ದೇಶನವಿದೆ.

GSTಯಲ್ಲಿ ನಿವೇದಿತಾ ಗೌಡ; ಸೃಜನ್ ಲೋಕೇಶ್‌ ಪುತ್ರ ಸುಕೃತ್ ಎಂಟ್ರಿ!

'ನಾನು ಹುಟ್ಟುಹಬ್ಬ ಸೆಲೆಬ್ರೇಷನ್ ಮಾಡ್ಕೊಂಡು ತುಂಬಾ ದಿನಗಳು ಆಗಿದೆ. ಕಾರಣಾಂತರಗಳಿಂದ 3-4 ವರ್ಷಗಳಿಂದ ಆಚರಿಸಿಕೊಂಡಿರಲಿಲ್ಲ. ಈ ವರ್ಷ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಡಾಲಿ ಗಬ್ರು ಸತ್ಯ, ಅಣ್ಣಾ ಫ್ರಮ್ ಮೆಕ್ಸಿಕೋ 2, ಪ್ರಾಜೆಕ್ಟ್‌ ಅನೌನ್ಸ್ ಮಾಡಿದ್ದೀವಿ. ನನ್ನನ್ನು ನೋಡಿ ಹಲವರು ವಿಶ್ ಮಾಡಿದ್ದರು ಜನರು ಕೂಡ ನೀನು ಚೆನ್ನಾಗಿ ಬೆಳೆಯಬೇಕು ಅಂತ ಹಾರೈಸುತ್ತಿದ್ದಾರೆ ಅದಕ್ಕಿಂತ ದೊಡ್ಡ ಸಂಪಾದನೆ ಯಾವುದೂ ಇಲ್ಲ . ಅದನ್ನು ಕಾಪಾಡಿಕೊಳ್ಳುವ ಕೆಲಸಗಳನ್ನು ಮಾಡುತ್ತೀನಿ. ಜನರು ಪ್ರೀತಿಗೆ ನಾನ್ಯಾವತ್ತೂ ಬೆಲೆ ಕಟ್ಟೋದಕ್ಕೆ ಆಗಲ್ಲ. ನನ್ನ ಮುಂದಿನ ಸಿನಿಮಾ ಅಣ್ಣಾ ಫ್ರಮ್ ಮೆಕ್ಸಿಕೋ ಸಿನಿಮಾ ಬಹಳ ಡಿಫರೆಂಟ್ ಆಗಿದೆ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುವ ಸಿನಿಮಾ ಮತ್ತು ಪಾತ್ರ ಕೂಡ ಇದೆ. ನನ್ನ ಹುಟ್ಟುಹಬ್ಬದ ದಿನ ಚಂದ್ರಯಾನ ಲಾಂಚ್ ಆಗುತ್ತಿರುವುದು ತುಂಬಾ ಖುಷಿ ತಂದಿದೆ' ಎಂದು ಧನಂಜಯ್ ಮಾತನಾಡಿದ್ದಾರೆ. 

ಆಗಸ್ಟ್‌ 24 'ಟೋಬಿ' ಪೇಯ್ಡ್‌ ಪ್ರೀಮಿಯರ್‌ ಶೋ; ಸೆಲೆಬ್ರಿಟಿಗಳ ಜೊತೆ ಸಿನಿಮಾ ನೋಡ್ಬೇಕಾ?

ಅಭಿಮಾನಿಗಳನ್ನು ಭೇಟಿ:

37ರ ವಸಂತಕ್ಕೆ ಕಾಲಿಡುತ್ತಿರುವ ಡಾಲಿ ಧನಂಜಯ್ ಈ ವರ್ಷ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಹೊಸಕೆರೆಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತಡೇ ಆಚಿರಿಸಿಕೊಂಡು ಮಜಾ ಮಾಡಲಿದ್ದಾರೆ. ಅಭಿಮಾನಿಗಳ ಮಧ್ಯೆಯೇ ಆಗಮಿಸಿ ಎಲ್ಲರಿಗೂ ಸೆಲ್ಫಿ ಕೊಟ್ಟು ಡಾಲಿ ಸಂಭ್ರಮಿಸಿದ್ದಾರೆ.