Asianet Suvarna News Asianet Suvarna News

ಬಾಲ್ಯದ ಫೋಟೋ ಹಂಚಿಕೊಂಡ ನಟಿ: ಯಾರೂ ಕಂಡುಹಿಡಿದಿಲ್ಲ, ನಿಮಗಾದರೂ ಗೊತ್ತಾಗುತ್ತಾ ನೋಡಿ

ಬಾಲ್ಯದಲ್ಲಿ ಭರತನಾಟ್ಯವಾಡುತ್ತಿರುವ ಫೋಟೋ ಹಂಚಿಕೊಂಡ ಸ್ಟಾರ್ ನಟಿ. ಎಷ್ಟೇ ಪ್ರಯತ್ನ ಪಟ್ಟರೂ ಕಂಡು ಹಿಡಿಯಲು ಕಷ್ಟ ಪಟ್ಟ ನೆಟ್ಟಿಗರು....

Netizens find it difficult to identify kannada actress Asha Bhat childhood picture vcs
Author
First Published Nov 15, 2022, 10:22 AM IST

ನವೆಂಬರ್ 14 ಮಕ್ಕಳ ದಿನಾಚರಣೆ ಪ್ರಯುಕ್ತ ಕನ್ನಡ ಚಿತ್ರರಂಗದ ನಟ-ನಟಿಯರು ತಮ್ಮ ಬಾಲ್ಯದ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಖಾತೆ ಹಂಚಿಕೊಂಡಿದ್ದಾರೆ.  ಈ ಫೋಟೋಗಳನ್ನು ಅಭಿಮಾನಿಗಳು ಇನ್ನಿತ್ತರ ಖಾತೆಗಳಲ್ಲಿ ಅಪ್ಲೋಡ್ ಮಾಡಿ ಯಾರೆಂದು ಗೆಸ್ ಮಾಡಿ ಎನ್ನುವ ಪ್ರಶ್ನೆ ಕೇಳಿದ್ದರು. ಬಹುತೇಕರನ್ನು ಕಂಡು ಹಿಡಿಯಲಾಗಿತ್ತು ಆದರೆ ಈ ಫೋಟೋ ಮಾತ್ರ ಕೊಂಚ ಗೊಂದಲ ಸೃಷ್ಟಿ ಮಾಡಿತ್ತು. ಹೀಗಾಗಿ ಇವ್ರು ಯಾರು ಅಂತ ನಿಮಗೆ ಗೊತ್ತಾ?..................

ನೀಲಿ- ಕೆಂಪು ಬಣ್ಣದ ಭರತನಾಟ್ಯ ಉಡುಪು ಧರಿಸಿ ದೇಗುಲದಲ್ಲಿ ನೃತ್ಯ ಮಾಡುವಾಗ ಸೆರೆ ಹಿಡಿದ ಫೋಟೋ ಇದಾಗಿದ್ದು ಪುಟ್ಟ ಹುಡುಗಿ ನೋಡಲು ಗೊಂಬೆಯಂತಿದ್ದಾಳೆ. ಮೊದಲು ಹಳೆ ನಟಿ ಇರಬೇಕು ಎಂದು ಗೆಸ್ ಮಾಡಿದ್ದಾರೆ ಆನಂತರ ತಿಳಿಯಿತ್ತು ಇದು ಬೇರೆ ಯಾರೂ ಅಲ್ಲ ನಮ್ಮ ನಿಮ್ಮ ಪ್ರೀತಿಯ ಆಶಾ ಭಟ್ ಎಂದು. ಹೌದು! ರಾಬರ್ಡ್‌ ಚಿತ್ರರಂಗದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾಡೆಲ್  ಆಶಾ ಭಟ್‌ ಫೋಟೋ ಇದು. 

Netizens find it difficult to identify kannada actress Asha Bhat childhood picture vcs

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಆಶಾ ಭಟ್ ಬಾಲ್ಯದಿಂದ ಪಟ್ಟೆತರ ಚಟುವಟಿಕೆ ಹೆಚ್ಚಿಗೆ ತೊಡಗಿಸಿಕೊಂಡಿದ್ದರು. ಸಂಗೀತ, ನೃತ್ಯ, ನಾಟಕ, ಎನ್‌ಸಿಸಿ ಹೀಗೆ ಓದಿನ ಜೊತೆಗೆ ಸಖತ್ ಆಕ್ಟಿವ್ ಆಗಿದ್ದರು. ರಾಬರ್ಟ್‌ ನಂತರ ಯಾವ ಕನ್ನಡ ಸಿನಿಮಾನೂ ಒಪ್ಪಿಕೊಂಡಿರಲಿಲ್ಲ ಈ ನಡುವೆ ಹಿಂದಿ ವೆಬ್‌ ಸೀರಿಸ್‌ ಮತ್ತು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.  ಭದ್ರಾವತಿಯ ಬೆಡಗಿ, ಮಿಸ್‌ ಸುಪ್ರಾ ಇಂಟರ್‌ನ್ಯಾಶನಲ್‌ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಆಶಾ ಭಟ್‌ ಜಂಗ್ಲೀ ಚಿತ್ರಕ್ಕೆ ನಾಯಕಿಯಾಗಿದ್ದರು. 

ಕನ್ನಡತಿ ಹುಡುಗಿ ಆಶಾ ಮೂಲತಃ ಭದ್ರಾವತಿಯವರು. ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಇಂಜಿನಿಯರಿಂಗ್‌ ವಿದ್ಯಾರ್ಥಿನಿ. ಓದುತ್ತಿರುವಾಗಲೇ ಒದಗಿಬಂದದ್ದು ಮಿಸ್‌ ಸುಪ್ರಾ ಅಡಿಷನ್‌. ಸಣ್ಣ ಆತಂಕದಲ್ಲೇ ಭಾಗವಹಿಸಿದ ಈ ನೀಳ ಸುಂದರಿ ಮುಂದೆ ಸೌಂದರ್ಯ ಸ್ಪರ್ಧೆಯ ಒಂದೊಂದೇ ಮೆಟ್ಟಿಲುಗಳನ್ನು ಏರಿದರು. 2014ರಲ್ಲಿ ಪೋಲೆಂಡ್‌ನಲ್ಲಿ ನಡೆದ ‘ಮಿಸ್‌ ಸುಪ್ರಾ ಇಂಟರ್‌ನ್ಯಾಶನಲ್‌’ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದರು. ಈ ಸ್ಪರ್ಧೆಯಲ್ಲಿ ಭುವನ ಸುಂದರಿ ಕಿರೀಟ ಧರಿಸಿ ವಿಶ್ವದ ಗಮನ ಸೆಳೆದರು. ಈ ಗೌರವಕ್ಕೆ ಪಾತ್ರವಾದ ಮೊದಲ ಭಾರತೀಯ ನಾರಿ ಆಶಾ.

ರಾಬರ್ಟ್ ಚೆಲುವೆ ಆಶಾ ಭಟ್ ಹಾಟ್ ಫೋಟೋ ಶೂಟ್ ವೈರಲ್

ಸಿನಿಮಾಗೆ ಬಂದಿದ್ದು ಆಕಸ್ಮಿಕವೇ?

ಕನ್ನಡ ಪ್ರಭ ಸಂದರ್ಶನದಲ್ಲಿ ಮಾತನಾಡಿರುವ ಆಶಾ ಭಟ್‌ ಸಿನಿಮಾಗೆ ಬಂದಿದ್ದು ಆಕಸ್ಮಿಕವಲ್ಲ ಆಸೆ ಇತ್ತು ಅದಕ್ಕಾಗಿಯೇ ಪ್ರತಿದಿನ ಆಡಿಷನ್‌ಗೆ ಹೋಗುತ್ತಿದ್ದೆ. ಇದರ ಮಧ್ಯದಲ್ಲಿ ಮ್ಯೂಸಿಕ್, ಮಾರ್ಷಲ್ ಆರ್ಟ್ಸ್‌, ಡ್ಯಾನ್ಸ್‌, ಮಾಡೆಲಿಂಗ್, ಫ್ಯಾಷನ್ ಶೋಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೆ. ಹಾಗಿದ್ದಾಲೇ ಜಂಗ್ಲಿ ಆನಂತರ ರಾಬರ್ಟ್‌ ಆಫರ್‌ ಬಂತು ಎಂದಿದ್ದಾರೆ. ಚಿತ್ರರಂಗದಲ್ಲಿ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಹಾಗಾಗಿ ಮುಂದೆಯೂ ಒಳ್ಳೆಯ ಚಿತ್ರ, ತಂಡ, ಪಾತ್ರಗಳ ನಿರೀಕ್ಷೆಯಲ್ಲಿ ಇದ್ದೇನೆ. ಕನ್ನಡದಲ್ಲಿ ಸಿಗುವ ಯಾವುದೇ ಒಳ್ಳೆಯ ಅವಕಾಶವನ್ನು ನಾಣು ಮಿಸ್ ಮಾಡಿಕೊಳ್ಳುವುದಿಲ್ಲ ನನ್ನ ಪ್ರಕಾರ ಸ್ಟೋರಿ ಇಸ್‌ ದಿ ಕಿಂಗ್. ಅದರೊಂದಿಗೆ ಒಳ್ಳೆಯ ತಂಡ ಸಿಕ್ಕಿದರೆ ಅದರ ಮಜಾನೇ ಬೇರೆ ಎಂದಿದ್ದರು.

ಆಶಾ ಜೀರೋ ಸೈಜ್ ನಟಿ: 

ಸಖತ್‌ ಫಿಟ್ ಆಂಡ್ ಫೈನ್ ಆಗಿರುವ ಆಶಾ ಭಟ್‌ ಪ್ರತಿ ದಿನವೂ ವರ್ಕೌಟ್ ಮಾಡುತ್ತಾರಂತೆ. ಊಟ, ತಿಂಡಿ ಹೇಗೆ ನಾವು ಮಿಸ್ ಮಾಡುವುದಿಲ್ಲ ಹಾಗೆ ವರ್ಕೌಟ್‌ಅನ್ನೂ ಕೂಡ ಮಿಸ್ ಮಾಡಲ್ಲ ಅಂತ ಹೇಳುತ್ತಾರೆ. ಮಾರ್ಷೆಲ್ ಆರ್ಟ್‌, ಬಾಕ್ಸಿಂಗ್ ಮತ್ತು ಫ್ರೀ ಹ್ಯಾಂಡ್‌ ಎಕ್ಸರ್‌ಸೈಸ್ ತುಂಬಾನೇ ಇಷ್ಟವಂತೆ. ವಾರಕ್ಕೆರಡು ಬಾರಿ ವೈಟ್ ಟ್ರೈನಿಂಗ್ ಮಾಡುತ್ತಾರೆ.  'ಶೂಟಿಂಗ್ ಇದ್ದಾರೆ ರೂಮ್‌ನಲ್ಲೇ ವರ್ಕೌಟ್ ಮಾಡುತ್ತೀನಿ ವಿನಃ ತಪ್ಪಿಸೋ ಪ್ರಶ್ನೆಯೇ ಇಲ್ಲ. ಹೀಗಾಗಿ ನನ್ನ ಮೆಟಬಾಲಿಸಂ ಚೆನ್ನಾಗಿದೆ. ಏನೇ ತಿಂದರೂ ಜೀರ್ಣ ಮಾಡ್ಕೊಳ್ತೀನಿ. ಹಾಗಾಗಿ ಡಯಟ್ ಮಾಡುವುದಿಲ್ಲ' ಎಂದು ಹೇಳಿದ್ದಾರೆ.

Follow Us:
Download App:
  • android
  • ios