Asianet Suvarna News

ತಮಿಳಲ್ಲಿ ಮಾತಾಡಿ ಎಂದು ಮೋದಿ ಕಾಲೆಳೆದು ಟೀಕೆಗೊಳಗಾದ ಖುಷ್ಬು; ಬೇಕಿತ್ತಾ ಇವೆಲ್ಲಾ?

ಪ್ರಧಾನಿ ನರೇಂದ್ರ ಮೋದಿಯನ್ನು  ಟೀಕಿಸಿದ ಬಹುಭಾಷಾ ನಟಿ ಹಾಗೂ ರಾಜಕಾರಣಿ  ಖುಷ್ಬೂ ಅವರಿಗೆ  'ಜೋಕರ್‌' ಎಂದು ಮತ್ತೊಬ್ಬ ಖ್ಯಾತ ನಟಿ ಟಾಂಗ್ ನೀಡಿದ್ದಾರೆ.
 

netizens criticize kannada actress Kushboo for trolling pm narendra modi
Author
Bangalore, First Published May 17, 2020, 2:21 PM IST
  • Facebook
  • Twitter
  • Whatsapp

'ಯುಗಪುರುಷ'ನ ಹೃದಯ ಕದ್ದ 'ರಣಧೀರ'ನ ರಾಣಿ ಖುಷ್ಬೂ ಇತ್ತೀಚಿಗೆ ಪ್ರಧಾನಿ ನರೇದ್ರ ಮೋದಿ ವಿರುದ್ಧ ನೀಡಿರುವ ಹೇಳಿಕೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ನಟಿಯಾಗಿ, ನಿರ್ಮಾಪಕಿಯಾಗಿ ಹಾಗೂ ನಿರೂಪಕಿಯಾಗಿರುವ ಖುಷ್ಬೂ ರಾಜಕಾರಣಿ ಆಗಿ ಸಂದರ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.  ತನ್ನ ರಾಜಕೀಯ ಸಿದ್ಧಾಂತಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿ ಅನೇಕ ಬಾರಿ ಟೀಕೆಗೆ ಒಳಗಾಗಿದ್ದಾರೆ.

ಮೋದಿ ಭಾಷಣಕ್ಕೆ ಟಾಂಗ್ :

ತಮ್ಮ ಸಿದ್ಧಾಂತಕ್ಕಿಂತಲ್ಲೂ ಅಭಿನಯಕ್ಕೆ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಖುಷ್ಬೂ ಮೇ 12ರಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ. 

ಪ್ರಚಾರ ವೇಳೆ ಕಿರಿಕ್‌ ಮಾಡಿದ ವ್ಯಕ್ತಿಗೆ ಖುಷ್ಬೂ ಕಪಾಳಮೋಕ್ಷ!

'ಅಬ್ಬಾ!! ಕೊನೆಗೂ ಒಂದು ಪ್ಯಾಕೇಜ್. ಜಿಡಿಪಿ ಶೇ.10ರಷ್ಟು ತೆರಿಗೆಗಳು ಹಾಗೂ ಮತ್ತಷ್ಟು ತೆರಿಗೆಗಳು ಎದುರಿಸುವ ಸುದೀರ್ಘ ಹಾದಿಗೆ ಸಿದ್ಧರಾಗಿ. ಭವಿಷ್ಯದಲ್ಲಿ ಇನ್ನೂ ಇದೆ ಕಾದು ನೋಡಿ' ಎಂದು 20 ಲಕ್ಷ ಕೋಟಿ ಪರಿಹಾರ ಪ್ಯಾಕೇಜನ್ನು ಲೇವಡಿ ಮಾಡಿದ್ದಾರೆ.

 

ತಮಿಳು ಭಾಷೆಯಲ್ಲಿ ಡಿಮ್ಯಾಂಡ್:

ಟ್ಟಿಟರ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಖುಷ್ಬೂ ಹೆಚ್ಚಾಗಿ ಇಂಗ್ಲೀಷ್‌ನಲ್ಲಿ ಟ್ಟೀಟ್‌ ಮಾಡುವ ಕಾರಣ ನೆಟ್ಟಿಗರು ತಮಿಳಿನಲ್ಲಿ ಮಾಡಿ ಎಂದು ಡಿಮ್ಯಾಂಡ್‌ ಮಾಡುತ್ತಲೇ ಇದ್ದರು. ಅವರ ಆಕ್ರೋಶ ನೋಡಿದರೇ  'ಮತ್ತೆ ಒಂದೇ  ಒಂದು ಅನುಮಾನವಿದೆ. ನಾನು ತಮಿಳಿನಲ್ಲಿ ಏಕೆ ಬರೆಯುವುದಿಲ್ಲ ಎಂದು ಹಲವರು ಕೇಳುತ್ತಾರೆ. ಜನರೇ  ಇದು ಅಂತಾರಾಷ್ಟ್ರೀಯ ಸಾಮಾಜಿಕ ವೇದಿಕೆ.  ನಾನು ಅದೆಲ್ಲವನ್ನು ತಮಿಳಿನಲ್ಲಿ ಟ್ಟೀಟ್‌ ಮಾಡಬೇಕೆಂದಾದರೆ ಪ್ರಧಾನಿಯೂ  ಕೂಡ ತಮಿಳಿನಲ್ಲಿ ಮಾತ್ರವೇ ಮಾತನಾಡಬೇಕು.  ತಮಿಳು ಅತ್ಯಂತ ಹಳೆಯ ಭಾಷೆ ಹಿಂದೆ ಯಾಕೆ? ' ಎಂದು ಬರೆದುಕೊಂಡಿದ್ದರು.

ಮೋದಿ ಪ್ಯಾಕೇಜ್‌ ಘೋಷಣೆ  ಬಗ್ಗೆ ಮಾತನಾಡಿದಕ್ಕೆ ತಲೆ ಹೆಚ್ಚಾಗಿ ಕೆಡಿಸಿಕೊಳ್ಳದ ಜನರು ಭಾಷೆ ಬಗ್ಗೆ ಬಂದ ಕಾಮೆಂಟ್‌ ನೋಡಿ ಕಿಡಿಕಾಡಿದ್ದಾರೆ.  ಅಷ್ಟೇ ಅಲ್ಲದೆ ಖುಷ್ಬೂ ಮಾತನಾಡುವ ರೀತಿಗೆ ಬಿಗ್ ಬಾಸ್ ಸ್ಪರ್ಧಿ ಕಮ್ ನಟಿ ಗಾಯಿತ್ರಿ ಲೇವಡಿ ಮಾಡಿದ್ದಾರೆ. 'ಜೋಕರ್' ಎಂದು ಕರೆದು ಹಾಸ್ಯ ಮಾಡಿದ್ದಾರೆ.

 

Follow Us:
Download App:
  • android
  • ios