ಸ್ನೇಹಿತರ ಜೊತೆ ಪಾರ್ಕಿನಲ್ಲಿ ಹುಲಾ ಹೂಪ್ ಡ್ಯಾನ್ಸ್ ಮಾಡುತ್ತಿದ್ದ ನಟಿ ಸಂಯುಕ್ತಾ. ಅಸಲಿ ವಿಡಿಯೋ ಬಯಲಾಗುತ್ತಿದ್ದಂತೆ ಸ್ಯಾಂಡಲ್‌ವುಡ್ ನಟಿಯರು ಕೊಟ್ರು ಸಾಥ್...
'ಕಿರಿಕ್ ಪಾರ್ಟಿ' ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ ವಿವಾದವೊಂದಲ್ಲಿ ಸಿಲುಕಿಕೊಂಡಿದ್ದಾರೆ. ಅಶ್ಲೀಲ ಬಟ್ಟೆ ಧರಿಸಿ ಪಾರ್ಕಿನಲ್ಲಿ ಡ್ಯಾನ್ಸ್ ಮಾಡುತ್ತಿದ್ದರು, ಎಂಬ ಆರೋಪವೂ ಕೇಳಿ ಬಂದಿದೆ. ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗಿದೆ. ಸಾಕ್ಷಿ ಸಮೇತವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಯುಕ್ತಾ ಸ್ಪಷ್ಟನೆ ನೀಡಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ಸಿನಿಮಾ ನಟಿಯರು ಸಾಥ್ ಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾ ಸಾಥ್:
ಸ್ಥಳೀಯ ಮಹಿಳೆ ಸಂಯುಕ್ತಾ ವಿರುದ್ಧ ಧ್ವನಿ ಎತ್ತಿದ್ದ ಉದ್ಯಾನವನದ ವಾಚ್‌ಮ್ಯಾನ್ ಪಾರ್ಕ್‌ಗೆ ಬೀಗ ಹಾಕಿದ್ದಾರೆ. ಜನರು ಗುಂಪಾಗಿ ಸೇರಿಕೊಂಡು ದಿಕ್ಕಾರ ಕೂಗಿದ್ದಾರೆ. ತಕ್ಷಣವೇ ಸಂಯುಕ್ತಾ ಇನ್‌ಸ್ಟಾಗ್ರಾಂನಲ್ಲಿ ನಡೆದ ಘಟನೆಯ ಸಂಪೂರ್ಣ ಮಾಹಿತಿಯನ್ನು ಲೈವ್ ಮಾಡಿ ಕವರ್ ಮಾಡಿದ್ದಾರೆ. ಜಗಳ ದೊಡ್ಡದಾಗುತ್ತಿದ್ದಂತೆ ಎಚ್‌ಎಸ್‌ಆರ್ ಠಾಣೆ ಪೊಲೀಸರು ಆಗಮಿಸಿದ್ದಾರೆ. ಇನ್ನು ಮುಂದೆ ಇಂಥ ತಪ್ಪುಗಳು ಆಗಬಾರದೆಂದು ಪೊಲೀಸರು ಯಾವುದೇ ಎಫ್‌ಐಆರ್ ದಾಖಲಿಸದೆ ಕ್ಷಮಿಸಿ ಕಳುಹಿಸಿದ್ದಾರೆ.
ಲೈವ್ ವಿಡಿಯೋ ವೈರಲ್ ಆಗುತ್ತಿದ್ದಂತೆ, ನಟಿ ಸಂಯುಕ್ತಾ ಸ್ಥಳೀಯ ಮಹಿಳೆ ತಮ್ಮ ಗೆಳತಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಮೇಲೆ ಸಂಯುಕ್ತಾ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ ಮಹಿಳೆ ಈ ವಿಡಿಯೋ ನೋಡಿ ಸುಮ್ಮನಾಗಿದ್ದಾರೆ. ಆದರೆ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ತರ್ಲೆ ತಿಮ್ಮ ಎಂದು ಟ್ಟಿಟರ್ ಪೇಜ್ ಬರೆದಿರುವ ಸಾಲುಗಳಿವು. 'ಪ್ರಭಾವಿ ಮಹಿಳೆ ಇಂಥ ಹಲ್ಲೆಗೆ ಒಳಗಾಗಿರುವ ಅಪರೂಪದ ವಿಡಿಯೋ. ಪೊಲೀಸರಿಗೆ ಕಂಟ್ರೋಲ್ ಮಾಡಲು ಆಗಲಿಲ್ಲ. ಆದರೆ ಒಮ್ಮೆ ಯೋಚನೆ ಮಾಡಿದೆ, ಇದೇ ಕೆಲಸವನ್ನು ಕಾಮನ್ ಮ್ಯಾನ್ ಮಾಡಿದ್ದರೆ ಕಂಬಿ ಹಿಂದೆ ಇರುತ್ತಿದ್ದರು,' ಎಂದು ಬರೆದಿದ್ದಾರೆ.

ನಟಿ ಶ್ರದ್ಧಾ ಶ್ರೀನಾಥ್ ಅವರ ಲಾಯರ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಆ ಮಹಿಳೆ ವಿರುದ್ಧ ಹಾಕಬಹುದಾದ ಕೇಸ್ ಬಗ್ಗೆ ತಿಳಿಸಿದ್ದಾರೆ. ನಟಿ ವೈನಿಧಿ ಜಗದೀಶ್, ಅಮೃತಾ ಐಯರ್, ನಿಶ್ವಿಕಾ, ಆರ್‌ಜೆ ಸಿರಿ ಸೇರಿ ಅನೇಕರು ಸಂಯುಕ್ತಾ ಪರ ನಿಂತು ಮಾತನಾಡಿದ್ದಾರೆ. 'ಜಿಮ್ ಬಟ್ಟೆಯನ್ನು ಅಶ್ಲೀಲ ಎಂದು ಹೇಳಿದ್ದು ತಪ್ಪು, ಈಗಿನ ಕಾಲದಲ್ಲೂ ಈ ರೀತಿ ಮಾತನಾಡಿರುವ ಮಹಿಳೆಯನ್ನು ವಿರೋಧಿಸಿದ್ದಾರೆ. ಅಲ್ಲದೇ ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆ ಜೊತೆಯಾಗಿ ನಿಲ್ಲುವುದನ್ನು ಬಿಟ್ಟು, ಈ ರೀತಿ ಪ್ರಶ್ನಿಸುವುದು ಸರಿಯೇ ಎಂದು #StandWithSamyuktha ಎಂಬ ಹ್ಯಾಷ್ ಟ್ಯಾಗ್ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
"
