Asianet Suvarna News Asianet Suvarna News

ನೆನಪಿರಲಿ ಪ್ರೇಮ್: ದರ್ಶನ್ ಮಾತು ಕೊಟ್ರೆ ಉಳಿಸಿಕೊಳ್ತಾರೆ.., ಅವ್ರನ್ನ ಖರೀದಿ ಮಾಡೋದಕ್ಕೆ ಪ್ರೀತಿಯಿಂದ ಮಾತ್ರ ಸಾಧ್ಯ..!!

"ಟಗರು ಪಲ್ಯಾ ಸಿನಿಮಾದಲ್ಲಿ ನಾಯಕಿ ಆಗೋದಕ್ಕೆ ಯೋಗ್ಯತೆ ಇದ್ರೆ ಮಾತ್ರ ಅವಕಾಶ ಕೊಡು ಅಂತ ಡಾಲಿಗೆ ಹೇಳಿದೆ. ಮಗಳು ನಾಯಕಿ ಆಗ್ತಾಳೆ ಅಂದಾಗ ಭಯ ಆಯ್ತು. ಈಗ ಅವಳು ನಟಿಸಿದ್ಧನ್ನ ನೋಡಿ ತುಂಬಾ ಖುಷಿ ಆಯ್ತು.. ನಟನೆಯಲ್ಲಿ ನನ್ನ ಮಗಳು ಸೈಕಲ್ ಹೊಡೆಯದೇ ಇರಲಿ ಅಂತ ಹರಕೆ‌ ಹೊತ್ತಿದ್ದೆ, ಅದು ಈಡೇರಿದೆ" ಎಂದಿದ್ದಾರೆ ನೆನಪಿರಲಿ ಪ್ರೇಮ್.

Nenapirali Prem talks about Darshan in Tagaru Palya Tariler Launch srb
Author
First Published Oct 19, 2023, 5:04 PM IST

ಡಾಲಿ ಧನಂಜಯ್ ನಿರ್ಮಾಣದ 'ಟಗರು ಪಲ್ಯ'  ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ  ನಡೆಯಿತು. ನಟ ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯಾ ಕಾರ್ಯಕ್ರಮಕ್ಕೆ  ಡಾಲಿ ಧನಂಜಯ್, ನೆನಪಿರಲಿ ಪ್ರೇಮ್, ತಾರಾ ಅನುರಾಧಾ, ನೀನಾಸಂ ಸತೀಶ್, ರಂಗಾಯಣ ರಘು, ನಾಗಭೂಷಣ್ ಸೇರಿದಂತೆ ಅಲ್ಲಿ ಇಡೀ 'ಟಗರು ಪಲ್ಯ' ಚಿತ್ರತಂಡ ಭಾಗಿಯಾಗಿತ್ತು.

ನಟ ಧನಂಜಯ್ ಹೇಳಿದ್ದು "ದೀಪಾವಳಿ ಹಬ್ಬಕ್ಕೆ ನೀವು ಊರಿಗೆ ಹೋಗೋದು ಬೇಡ ಅಂದುಕೊಂಡ್ರೆ ಟಗರು ಪಲ್ಯಾ ಸಿನಿಮಾ ನೋಡಿ ಪಕ್ಕಾ ಊರಿಗೆ ಹೋಗ್ತೀರಾ. ಎಲ್ಲಾ ಸಂಬಂಧ ನೆ‌ನಪಿಸೋ ಸಿನಿಮಾ ಟಗರು ಪಲ್ಯಾ. ನಮ್ಮ ಸೂರ್ಯಕಾಂತಿ ಅಮೃತಾ ಮಹಾಲಕ್ಷ್ಮಿ ಆಗಿ ಬೆಳಗುತ್ತಾಳೆ. ನಟ ನಾಗಭೂಷಣ್ ಇನ್ನೂ ಹೀರೋ ಆಗಿ ನಟಿಸ್ತಾರೆ. ನಮ್ಮನ್ನ ಆಶೀರ್ವದಿಸೋಕೆ ಇವತ್ತು ಒಬ್ರು ಅಣ್ಣ ಬಂದಿದ್ದಾರೆ, ಅವ್ರು ದರ್ಶನ್ ಸರ್.. ಯಾವಾಗ್ಲು ನನ್ನ ಬೆನ್ನು‌ ತಟ್ಟಿ ಮುಂದೆ ಕಳುಹಿಸಿದ್ರು.. ನಮ್ಮ ತಂಡಕ್ಕೆ ದೊಡ್ಡ ಶಕ್ತಿ ತರ ಇದ್ದಿದ್ದು ನೆನಪಿರಲಿ ಪ್ರೇಮ್ . ನಾನು ನಟ ಆಗಿ ತುಂಬಾ ತಪ್ಪು ಮಾಡಿದ್ದೀನಿ. ಒಳ್ಳೆ ಪಾತ್ರಗಳನ್ನೇ ಆಯ್ಕೆ ಮಾಡಿದ್ದೇನೆ. ಆದ್ರೆ ನಿರ್ಮಾಪಕ ಅಗಿ ಒಳ್ಳೆ ಕೆಲಸ ಮಾಡ್ತೇನೆ. ಒಳ್ಳೆ ಸಿನಿಮಾ ನಿರ್ಮಾಣ ಮಾಡುತ್ತೇನೆ.." ಎಂದಿದ್ದಾರೆ ಡಾಲಿ ಧನಂಜಯ್. 

ಗೃಹಪ್ರವೇಶ : ಹಾಳಾದ ಧಾರಾವಾಹಿಗಳು ನೆಮ್ಮದಿ ಇಲ್ಲ, ಇಂಥವೆಲ್ಲ ನೋಡಿ ಬಿಪಿ ಶುಗರ್ ಬರುತ್ತೆ..!

ನೆನಪಿರಲಿ ಪ್ರೇಮ್ ಹೇಳಿಕೆ.."ದರ್ಶನ್ ಖರೀದಿ ಮಾಡೋದಕ್ಕೆ ಪ್ರೀತಿಯಿಂದ ಮಾತ್ರ ಸಾಧ್ಯ. ಮಾತು ಕೊಟ್ರೆ ದರ್ಶನ್ ಉಳಿಸಿಕೊಳ್ತಾರೆ, ಅವರ ಬಳಿ ಇರೋದು ಎರಡೇ ಉತ್ತರ. ಎಸ್ ಅಥವ ನೋ ಅಷ್ಟೆ. ಟಗರು ಪಲ್ಯಾ ಸಿನಿಮಾದಲ್ಲಿ ನಾಯಕಿ ಆಗೋದಕ್ಕೆ ಯೋಗ್ಯತೆ ಇದ್ರೆ ಮಾತ್ರ ಅವಕಾಶ ಕೊಡು ಅಂತ ಡಾಲಿಗೆ ಹೇಳಿದೆ. ಮಗಳು ನಾಯಕಿ ಆಗ್ತಾಳೆ ಅಂದಾಗ ಭಯ ಆಯ್ತು. ಈಗ ಅವಳು ನಟಿಸಿದ್ಧನ್ನ ನೋಡಿ ತುಂಬಾ ಖುಷಿ ಆಯ್ತು.. ನಟನೆಯಲ್ಲಿ ನನ್ನ ಮಗಳು ಸೈಕಲ್ ಹೊಡೆಯದೇ ಇರಲಿ ಅಂತ ಹರಕೆ‌ ಹೊತ್ತಿದ್ದೆ, ಅದು ಈಡೇರಿದೆ" ಎಂದಿದ್ದಾರೆ. 

ನವಶಕ್ತಿ ನವರಾತ್ರಿ: ಅನಾಥ ಕಂದನಿಗೆ ಜಗನ್ಮಾತೆಯೇ ತಾಯಿ, ದುಷ್ಟರ ಪಾಲಿಗೆ ಅವಳೇ ಚಂಡಿ - ಚಾಮುಂಡಿ!!

ಇನ್ನು ನಟ ದರ್ಶನ್ "ಅಮೃತಾಗೆ ಹಾರ್ಟ್ ಲಿ ವೆಲ್ ಕಮ್.. ನಮ್ಮದು ಚಿಕ್ಕ ಚೊಕ್ಕ‌ ಚಿತ್ರರಂಗ ಇಲ್ಲಿ ಎಲ್ಲವೂ ಚನ್ನಾಗಿದೆ. ಹೀರೋಗಳು ಏನ್ ಮಾಡ್ತೀರಾ ಅಂತ ಕೇಳ್ತಾರೆ. ನಾವು ನಿರ್ಮಾಣ ಮಾಡ್ತೀವಿ ಈಗ ಡಾಲಿ ಇದ್ದಾರೆ. ಬಡವರ ಮಕ್ಕಳು ದೊಡ್ಡವರಾಗಲೇ ಬೇಕು, ಹಠದಿಂದ ಬೆಳೆಯೋದಿದೆ, ಚಲದಿಂದ ಬೆಳೆಯೋದಿದೆ, ಚಲದಿಂದ ಬೆಳಿಯಬೇಕು. ನಾಗಭೂಷಣ್ 'ಇಕ್ಕಟ್' ಸಿನಿಮಾ ನೋಡಿದ್ದೀನಿ, ನಾಗಭೂಷಣ್ ತುಂಬಾ ಚನ್ನಾಗಿ ನಟಿಸ್ತಾರೆ. 
ಡಾಲಿ ಪಿಕ್ಚರ್ಸ್ ನಲ್ಲಿ ನನಗೂ ಒಂದು ಸಿನಿಮಾ ಮಾಡೋಕೆ ಅವಕಾಶ ಕೊಡಿ.." ಎಂದು ಕೇಳಿ ದರ್ಶನ್ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. 

Follow Us:
Download App:
  • android
  • ios