ನಟ ಪ್ರೇಮ್ 2004ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2005ರಲ್ಲಿ 'ನೆನಪಿರಲಿ' ಚಿತ್ರದಿಂದ ಯಶಸ್ಸು ಗಳಿಸಿ, ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. ರೊಮ್ಯಾಂಟಿಕ್ ಪಾತ್ರಗಳಿಂದ 'ಲವ್ಲಿ ಸ್ಟಾರ್' ಎನಿಸಿಕೊಂಡರು. ಸಿನಿಮಾ ಹುಚ್ಚಿನಿಂದ ಸಾಲ ಮಾಡಿ, ಪುಸ್ತಕ ಮಾರಿ ಚಿತ್ರ ನೋಡುತ್ತಿದ್ದೆ ಎಂದು ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ತಾಳ್ಮೆ, ಯಶಸ್ಸು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುವುದೇ ಜೀವನದ ಪಾಠ ಎಂದಿದ್ದಾರೆ.

ನಟ ಪ್ರೇಮ್​ ಕುಮಾರ್​ ಎಂದರೆ ಬಹುತೇಕ ಮಂದಿಗೆ ತಿಳಿಯಲಿಕ್ಕಿಲ್ಲ. ಆದರೆ ನೆನಪಿರಲಿ ಪ್ರೇಮ್​ ಎಂದರೆ ಸಿನಿ ಪ್ರಿಯರಿಗೆ ಇದು ಮನೆಮಾತಾಗಿರುವ ಹೆಸರು. 2004ರಲ್ಲಿ ಪ್ರಾಣ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿರುವ ಪ್ರೇಮ್ ಅವರಿಗೆ ಹೆಸರು ತಂದುಕೊಟ್ಟದ್ದು ಮರುವರ್ಷ ಅಂದ್ರೆ 2005ರಲ್ಲಿ ಬಿಡುಗಡೆಯಾದ ನೆನಪಿರಲಿ ಚಿತ್ರ. ಅಲ್ಲಿಂದ ಪ್ರೇಮ್​ ಕುಮಾರ್​, ನೆನಪಿರಲಿ ಪ್ರೇಮ್​ ಆದರು. ಈ ಚಿತ್ರಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಅಂದಿನಿಂದ, ಪ್ರೇಮ್‌ಗೆ ರೊಮ್ಯಾಂಟಿಕ್ ಥೀಮ್‌ನ ಚಿತ್ರಗಳನ್ನು ಹೆಚ್ಚಾಗಿ ನೀಡಲಾಯಿತು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರು ಲವ್ಲಿ ಸ್ಟಾರ್ ಎಂಬ ಬಿರುದನ್ನು ಗಳಿಸಿದರು.48 ವರ್ಷದ ನಟ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಕಲರ್ಸ್​ ಕನ್ನಡ ಚಾನೆಲ್​ನ ಬಾಯ್ಸ್​ ವರ್ಸಸ್​ ಗರ್ಲ್ಸ್​ ರಿಯಾಲಿಟಿ ಷೋನಲ್ಲಿ ನಟ ತಮ್ಮ ಸಿನಿಮಾ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

ನನಗೆ ಸಿನಿಮಾ ಎಂದರೆ ಮೊದಲಿನಿಂದಲೂ ತುಂಬಾ ಹುಚ್ಚು. ಆದರೆ ಸಿನಿಮಾ ನೋಡಲು ಅಷ್ಟೊಂದು ಅನುಕೂಲ ಇರುತ್ತಿರಲಿಲ್ಲ. ಆದ್ದರಿಂದ ಬಡ್ಡಿಗೆ ಸಾಲ ಮಾಡಿ ವರ್ಷಕ್ಕೆ ಏನಿಲ್ಲವೆಂದರೂ 170-180 ಸಿನಿಮಾ ನೋಡುತ್ತಿದ್ದೆ. ಪುಸ್ತಕಗಳನ್ನು ಮಾರಿ ಕೂಡ ಸಿನಿಮಾ ನೋಡಿದ್ದಿದೆ. ಅಷ್ಟು ಪ್ರೀತಿಯಾಗಿತ್ತು. ಕೊನೆಗೆ ಸಿನಿಮಾ ನನ್ನಕೈ ಹಿಡಿದಿದೆ. 100 ರೂಪಾಯಿ ಕೇಳಿದರೆ ಕೋಟಿ ರೂಪಾಯಿ ಕೊಟ್ಟಿದೆ ಎಂದು ಭಾವುಕರಾಗಿದ್ದಾರೆ ಪ್ರೇಮ್​. 'ಜೀವನದಲ್ಲಿ ಕಲಿತಿರುವ ಮೊದಲ ದೊಡ್ಡ ಪಾಠ ತಾಳ್ಮೆ. ನಮಗೆ ಬಂದದ್ದನ್ನು ಒಪ್ಪಿಕೊಳ್ಳಬೇಕು. ರಿಯಾಲಿಟಿಯನ್ನು ಒಪ್ಪಿಕೊಳ್ಳಬೇಕು. ಯಶಸ್ಸಿನಲ್ಲಿ ಹಾರಿ ತೇಲುವುದಕ್ಕೆ ಆಗುವುದಿಲ್ಲ ಸೋಲುಗಳ ಬಗ್ಗೆ ಡಿಪ್ರೆಸ್‌ ಮಾಡಿಕೊಳ್ಳುವುದಕ್ಕೆ ಆಗೋಲ್ಲ. ನಾನು ಸಮಯಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಿದ್ದರೆ ಇಲ್ಲಿವರೆಗೂ ಬರುವುದಕ್ಕೆ ಆಗುತ್ತಿರಲಿಲ್ಲ. ನಾನು ಎಲ್ಲವನ್ನೂ ತುಂಬಾನೇ ಕೂಲ್ ಆಗಿ ಒಪ್ಪಿಕೊಳ್ಳುತ್ತಿರುವೆ. ಹೀಗಾಗಿ ನಾನು ಸಂತೋಷವಾಗಿರುವೆ ಹಾಗೂ ಆರೋಗ್ಯವಾಗಿರುವೆ' ಎಂದು ಪ್ರೇಮ್ ಹೇಳಿದ್ದಾರೆ. 

ಅತ್ಯಾ*ರಿ ಕೈಗೆ ಸಿಕ್ಕ ಕುಂಭಮೇಳದ ಮೊನಾಲಿಸಾ ಬದುಕಾಯ್ತು ಮೂರಾಬಟ್ಟೆ! ಬಿಕ್ಕಿ ಬಿಕ್ಕಿ ಅಳ್ತಿರೋ 'ಸುಂದರಿ'

ಸಾಕಷ್ಟು ಹೆಸರು ತಂದುಕೊಟ್ಟಿರುವ ನೆನಪಿರಲಿ ಚಿತ್ರದ ಕುರಿತು ಮಾತನಾಡಿರುವ ಪ್ರೇಮ್​ ಅವರು, ನನಗೆ ಪ್ರತಿಯೊಂದು ಸಿನಿಮಾನೂ ತುಂಬಾ ಇಷ್ಟವಾಗಿದೆ. ಅದರಲ್ಲಿಯೂ ಎರಡನೆಯ ಚಿತ್ರ ನೆನಪಿರಲಿ (Nenapirali) ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು. ನನ್ನ ಮೊದಲ ಯಶಸ್ಸು ನನ್ನ ಮನಸ್ಸಿನಲ್ಲಿ ವಿಶೇಷ ಸ್ಪೆಷಲ್ ಜಾಗ ಪಡೆದುಕೊಳ್ಳುತ್ತದೆ. ಈ ಸಿನಿಮಾ ನನಗೆ ಅವಾರ್ಡ್‌ ತಂದುಕೊಟ್ಟಿತ್ತು. ನನ್ನ ಹೆಸರಿಗೆ ನೆನಪಿರಲಿ ಸೇರಿಕೊಂಡಿತ್ತು. ಸಿನಿ ವೀಕ್ಷಕರಲ್ಲಿ ನನ್ನ ಬಗ್ಗೆ ಒಂದು ಇಮೇಜ್ ಸೆಟ್ ಮಾಡಿತ್ತು. ರೊಮ್ಯಾನ್ಸ್‌ ಹೊರತು ಪಡಿಸಿ ಬೇರೆ ಕಥೆಗಳನ್ನು ಒಪ್ಪಿಕೊಳ್ಳುವುದಕ್ಕೆ ನೋಡುತ್ತಿರುವೆ. ವಿಭಿನ್ನ ಮತ್ತು ವಿಶಿಷ್ಠ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ. ಇದು ನನ್ನ ಹೊಸ ಜರ್ನಿ ಹೊಸ ಸೀಸನ್ ಆಗುತ್ತದೆ. ನೀವು ಹೊಸ ಪ್ರೇಮ್ ನೋಡಬಹುದು' ಎಂದಿದ್ದಾರೆ ಪ್ರೇಮ್.

ಅಂದಹಾಗೆ ಪ್ರೇಮ್​ ಅವರು ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಜೊತೆ ಜೊತೆಯಲಿ (2006), ಪಲ್ಲಕ್ಕಿ (2007), ಗುಣವಂತ (2007), ಸವಿ ಸವಿ ನೆನಪು (2010) , ಚಾರ್ಮಿನಾರ್ (2013) ಇದು ಪ್ರೇಮ್ ಅವರ ಗಮನಾರ್ಹ ಚಿತ್ರಗಳು. ಚೌಕ (2017) ಮತ್ತು ಪ್ರೇಮಂ ಪೂಜ್ಯಂ (2021) ಸಕತ್​ ಹೆಸರು ತಂದುಕೊಟ್ಟಿದೆ. ಅವರದ್ದೇ ಹೆಸರಿನ ಪ್ರೇಮ್​, ಪ್ರೇಮ್​ ಅವರ 25ನೇ ಚಿತ್ರವಾಗಿದೆ. ಈ ಕುರಿತು ಪ್ರೇಮ್​ ಈ ಹಿಂದೆ ಮಾತನಾಡಿದ್ದರು. 'ನನ್ನ 25ನೇ ಸಿನಿಮಾ ತುಂಬಾನೇ ಸ್ಪೆಷಲ್ ಕಾರಣ ಟೈಟಲ್‌ನಲ್ಲಿ ನನ್ನ ಹೆಸರಿತ್ತು. ಸಿನಿಮಾ ಅದ್ಭುತ ಪ್ರದರ್ಶನ ಕಂಡಿತ್ತು ಈಗ ಅದರದ್ದೇ ಎರಡನೇ ಭಾಗ ಮಾಡಲಾಗುತ್ತಿದೆ. ಅದು ಮತ್ತೊಂದು ಸಾಧನೆ. ಎರಡನೇ ಭಾಗ ಶುರು ಮಾಡುವ ಮುನ್ನ ನಾನು ಬೇರೆ ಸಿನಿಮಾ ಕೆಲಸಗಳನ್ನು ಮುಗಿಸಬೇಕು' ಎಂದು ಪ್ರೇಮ್ ಹೇಳಿದ್ದರು. ಇನ್ನು ಇವರ ಕೌಟುಂಬಿಕ ಸ್ಟೋರಿ ಕೂಡ ಇಂಟರೆಸ್ಟಿಂಗ್​ ಆಗಿದೆ. ಡಾ ರಾಜ್‌ಕುಮಾರ್ ಅಪಹರಣದ ಘಟನೆ ಆದ ಎರಡನೆಯ ದಿನ ಪ್ರೇಮ್, ಜ್ಯೋತಿ ಅವರ ಮದುವೆ ನಡೆದಿತ್ತು. ಆಗ ಕರ್ನಾಟಕ ಬಂದ್ ಕೂಡ ಆಗಿತ್ತು. ಇವರ ಲವ್​ಗೆ ಯಾರೂ ಒಪ್ಪದ ಕಾರಣ ಅವರು ಓಡಿ ಹೋಗಿ ಮದುವೆ ಆಗಿದ್ದರು. ವಾಹನವೂ ಇಲ್ಲದ ಕಾರಣ ಆಂಬುಲೆನ್ಸ್‌ನಲ್ಲಿ ಈ ಜೋಡಿ ಓಡಿ ಹೋಗಿತ್ತು.

ಕನ್ನಡದಲ್ಲಿಯೇ ಅಪ್ಪು ಇಂಟರ್​ವ್ಯೂ ಮಾಡಿದ್ದ ರಶ್ಮಿಕಾ: ಅಪರೂಪದ ಕುತೂಹಲದ ವಿಡಿಯೋ ವೈರಲ್​