Asianet Suvarna News Asianet Suvarna News

'ಪೆಡ್ರೋ' ಟೀಸರ್‌ ಬಿಡುಗಡೆ!

ರಿಷಬ್ ಶೆಟ್ಟಿ ಯುಟ್ಯೂಬ್ ಚಾನೆಲ್‌ನಲ್ಲಿ ಪೆಡ್ರೋ ಟೀಸರ್ ಬಿಡುಗಡೆ ಮಾಡಲಾಗಿದೆ. 

Nagesh Hegde Pedro official trailer in Rishab Shetty films youtube channel vcs
Author
Bangalore, First Published Sep 18, 2021, 12:57 PM IST
  • Facebook
  • Twitter
  • Whatsapp

ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ರಿಷಬ್‌ ಶೆಟ್ಟಿ ನಿರ್ಮಾಣದ ‘ಪೆಡ್ರೋ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನಟೇಶ್‌ ಹೆಗಡೆ ನಿರ್ದೇಶನದ ಚಿತ್ರವಿದು. ರಿಷಬ್‌ ಶೆಟ್ಟಿ ಫಿಲಂಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಟೀಸರ್‌ ರಿಲೀಸ್‌ ಆಗಿದೆ. 

ಎನ್‌ಎಫ್‌ಡಿಸಿಯ ಫಿಲ್ಮ್‌ ಬಜಾರ್‌ ವರ್ಕ್‌ ಇನ್‌ ಪ್ರೊಗ್ರೆಸ್‌ ಲ್ಯಾಬ್‌ಗೆ ಆಯ್ಕೆಯಾಗಿದ್ದು, ಫಿಲ್ಮ್ ಬಜಾರ್‌ಗೆ ಆಯ್ಕೆಯಾಗಿರುವ ಐದು ಭಾರತೀಯ ಚಿತ್ರಗಳ ಪೈಕಿ ಪೆಡ್ರೋ ಕೂಡ ಒಂದು.‘ನಮ್ಮ ಪೆಡ್ರೋ ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗಿದೆ. ನಿಮ್ಮ ಪ್ರೀತಿಯ ಬಾಗಿಲು ತೆರೆದು ಬರಮಾಡಿಕೊಳ್ಳಿ,’ ಎಂದು ರಿಷಬ್‌ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ರಕ್ಷಿತ್‌ ಶೆಟ್ಟಿ, ‘ಟೀಸರ್‌ ಕುತೂಹಲ ಹೆಚ್ಚಿಸುವಂತಿದೆ,’ ಎಂದಿದ್ದಾರೆ.

ಫಿಲ್ಮ್ ಬಜಾರ್ ತೆಕ್ಕೆಗೆ ಕನ್ನಡ ಸಿನಿಮಾ ಪೆದ್ರೋ

ಇನ್ನು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ಸಖತ್ ಬ್ಯುಸಿಯಾಗಿರುವ ನಟ ರಿಷಬ್ ಶೆಟ್ಟಿ ನಿರ್ಮಾಣದ ಬಗ್ಗೆ ಜನರಲ್ಲಿ ನಂಬಿಕೆ ಹೆಚ್ಚಿದೆ. ಅವರು ನಟಿಸುವ ಸಿನಿಮಾಗಳೇ ವಿಭಿನ್ನ ಅಂದ್ಮೇಲೆ ನಿರ್ಮಾಣ ಮಾಡಿರುವ ಸಿನಿಮಾ ಇನ್ನೂ ಸೂಪರ್, ಎಂದು ಅಭಿಮಾನಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಹೊಂಬಾಳೆ ಫಿಲಂಮ್ಸ್ ಬಂಡವಾಳ ಹಾಕುತ್ತಿರುವ 'ಕಾಂತಾರ' ಸಿನಿಮಾದಲ್ಲಿ ರಿಷಬ್‌ ಜೊತೆ ಸಪ್ತಮಿ ಗೌಡ ಅಭಿನಯಿಸುತ್ತಿದ್ದಾರೆ.

 

Follow Us:
Download App:
  • android
  • ios