ಫಿಲ್ಮ್ ಬಜಾರ್ ತೆಕ್ಕೆಗೆ ಕನ್ನಡ ಸಿನಿಮಾ ಪೆದ್ರೋ
ರಿಷಬ್ ಶೆಟ್ಟಿ ನಿರ್ಮಾಣದ, ನಟೇಶ್ ಹೆಗಡೆ ನಿರ್ದೇಶಿಸಿದ ಕನ್ನಡ ಚಿತ್ರ ಪೆದ್ರೋ, ಎನ್‌ಎಫ್‌ಡಿಸಿಯ ಫಿಲ್ಮ್ ಬಜಾರ್ ವರ್ಕ್ ಇನ್ ಪ್ರಾಗ್ರೆಸ್ ಲ್ಯಾಬ್‌ಗೆ ಆಯ್ಕೆಯಾಗಿದೆ. ಫಿಲ್ಮ್ ಬಜಾರ್‌ಗೆ ಆಯ್ಕೆಯಾಗಿರುವ ಐದು ಭಾರತೀಯ ಚಿತ್ರಗಳ ಪೈಕಿ ಪೆದ್ರೋ ಕೂಡ ಒಂದು.
ರಿಷಬ್ ಶೆಟ್ಟಿ ನಿರ್ಮಾಣದ, ನಟೇಶ್ ಹೆಗಡೆ ನಿರ್ದೇಶಿಸಿದ ಕನ್ನಡ ಚಿತ್ರ ಪೆದ್ರೋ, ಎನ್‌ಎಫ್‌ಡಿಸಿಯ ಫಿಲ್ಮ್ ಬಜಾರ್ ವರ್ಕ್ ಇನ್ ಪ್ರಾಗ್ರೆಸ್ ಲ್ಯಾಬ್‌ಗೆ ಆಯ್ಕೆಯಾಗಿದೆ. ಫಿಲ್ಮ್ ಬಜಾರ್‌ಗೆ ಆಯ್ಕೆಯಾಗಿರುವ ಐದು ಭಾರತೀಯ ಚಿತ್ರಗಳ ಪೈಕಿ ಪೆದ್ರೋ ಕೂಡ ಒಂದು.
ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿರುವ ಕಥಾ ಚಿತ್ರಗಳಿಗೆ ಫಿಲ್ಮ್‌ಬಜಾರ್ ಡಬ್ಲ್ಯುಐಪಿ ಅವಕಾಶ ನೀಡುತ್ತಾ ಬಂದಿದೆ. ಎಡಿಟಿಂಗ್ ಸ್ಟುಡಿಯೋದಲ್ಲಿ ನಿರ್ಮಾಣದ ಕೊನೆಯ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಸಿನಿಮಾಗಳನ್ನು ವರ್ಕ್‌ಇನ್ ಪ್ರಾಗ್ರೆಸ್ ಲ್ಯಾಬ್ ವಿಭಾಗಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ನಂತರ ಆ ಸಿನಿಮಾದ ಬಿಡುಗಡೆಯ ಹೊಣೆಯನ್ನು ಎನ್‌ಎಫ್‌ಡಿಸಿ ಹೊತ್ತುಕೊಳ್ಳುತ್ತದೆ. ಆ ಸಿನಿಮಾ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೂ ಪ್ರವೇಶ ಪಡೆಯುತ್ತದೆ.
ಚೆನ್ನಾಗಿ ಆಡಿಯೂ ದುನಿಯಾ ರಶ್ಮಿ ಬಿಗ್ ಬಾಸ್ ನಿಂದ ಔಟ್ ಆಗಿದ್ಯಾಕೆ?
ಈ ಹಿಂದೆ ತಿಥಿ ಚಿತ್ರ ಈ ಮನ್ನಣೆಗೆ ಪಾತ್ರವಾಗಿತ್ತು. ಪಿಂಕಿ ಎಲ್ಲಿ ಚಿತ್ರಕ್ಕೆ ಶಿಫಾರಸು: ‘ರೈಲ್ವೆ ಚಿಲ್ಡ್ರನ್’ ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು ಅವರ ‘ಪಿಂಕಿ ಎಲ್ಲಿ ?’ ಚಿತ್ರವೀಗ ರಾಷ್ಟ್ರೀಯ ಚಲನಚಿತ್ರ ಅಭಿವೃದ್ದಿ ನಿಗಮದ ಫಿಲ್ಮ್ ಬಜಾರ್ ಶಿಫಾರಸ್ಸು ಪಟ್ಟಿಗೆ ಸೇರಿದೆ. ಪಿಂಕಿ ಹೆಸರಿನ ಓರ್ವ ಬಾಲಕಿ ಕಾಣೆಯಾದ ಘಟನೆಯ ಸುತ್ತ ಸಾಗುವ ಕತೆ. ಚಿತ್ರದ ವಿತರಣೆ, ಚಲನ ಚಿತ್ರೋತ್ಸವಗಳಿಗೆ ಕಳುಹಿಸಲು ಫಿಲ್ಮ್ ಬಜಾರ್ ಶಿಫಾರಸ್ಸು ಅನುಕೂಲವಾಗಲಿದೆ. ಈ ಕಾರಣಕ್ಕೆ ನಮ್ಮ ಚಿತ್ರವನ್ನು ಪರಿಗಣಿಸಿರುವುದು ಖುಷಿ ತಂದಿದೆ.
ಬಂಡವಾಳ ಹೂಡಿ ಸಿನಿಮಾ ಮಾಡುವಾಗ, ವಾಪಸ್ಸು ಹಣ ಪಡೆದುಕೊಳ್ಳುವುದು ಹೇಗೆ ಎನ್ನುವ ಆತಂಕ ಇರುತ್ತೆ. ಆದರೆ ಈಗ ಸಿನಿಮಾ ಮಾರುಕಟ್ಟೆ ಸುಲಭ ಆಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಪೃಥ್ವಿ ಕೊಣನೂರು.