Asianet Suvarna News Asianet Suvarna News

ಪೂಜಾ ಗಾಂಧಿ ಮದುವೆ; ಕನ್ನಡ ಕಲಿಸಿದ ವಿಜಯ್ ಕೈ ಹಿಡಿಯುತ್ತಿರುವ 'ಮಳೆ ಹುಡುಗಿ'

ವೈವಾಹಿಕ ಜೀವನಕ್ಕೆ ಕಾಲಿಟ ಸಜ್ಜಾದ ಪೂಜಾ ಗಾಂಧಿ. ಕನ್ನಡ ಮೇಷ್ಟ್ರು ಮೇಲೆ ಲವ್ ಲವ್ ಲವ್......
 

Mungaru male pooja gandhi tie knot with friend vijay vcs
Author
First Published Nov 28, 2023, 9:25 AM IST

ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪೂಜಾ ಗಾಂಧಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

'ತಾವೆಲ್ಲರೂ ಕ್ಷೇಮ ಎಂದು ಹಾರೈಸುತ್ತೇವೆ. ಈ ಕಾಗದದ ಬರೆಯುತ್ತಿರುವ ವಿಶೇಷ ಕಾರಣ ಏನೆಂದರೆ. ಶ್ರೀಮತಿ ಜ್ಯೋತಿ ಗಾಂಧಿಯವರು ಜೇಷ್ಠ ಪುತ್ರಿ ಪೂಜಾ ಗಾಂಧಿಯಾ ನಾನು ಮತ್ತು ದಿವಂಗತ ಶ್ರೀಮತಿ ಸೂರ್ಯಮನ್ನಾಜಿ ಘೂರ್ಪಡೆಯವರ ಮಗನಾದ ವಿಜಯ್ ಘೋರ್ಪಡೆ, 29-11-2023ರಂದು 'ಮಂತ್ರ ಮಾಂಗಲ್ಯ' ಮೂಲಕ ಮದುವೆಯಾಗುತ್ತಿದ್ದೇವೆ. ನಮ್ಮ ಹಿತೈಷಿಗಳಾದ ತಾವು ಆಗಮಿಸಿ, ನಮ್ಮ ಆತಿಧ್ಯ ಸ್ವೀಕರಿಸಿ, ಆಶೀರ್ವಾದಿಸಿ, ನಮ್ಮಗಳ ಶ್ರೀಯೋಭಿವೃಧಿ ಕೋರಬೇಕೆಂದು ವಿಜ್ಞಾಪಿಸಿಕೊಳ್ಳುತ್ತೇವೆ' ಎಂದು ಪತ್ರ ಬರೆದಿದ್ದಾರೆ ಪೂಜಾ.

ನಾನು ಎಲ್ಲೂ ಹೋಗಿಲ್ಲ; ಇಷ್ಟು ವರ್ಷ ಕಾಣಿಸದೇ ಇದ್ದಿದ್ದಕ್ಕೆ ಉತ್ತರ ಕೊಟ್ಟ ಪೂಜಾ ಗಾಂಧಿ!

ನವೆಂಬರ್ 29ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿ ಮೂಲಕ ಪೂಜಾ ಗಾಂಧಿ ಮತ್ತು ವಿಜಯ್ ಮದುವೆ ನಡೆಯಲಿದೆ. ಕೇವಲ ಆತ್ಮೀಯ ಕುಟುಂಬಸ್ಥರು ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸರಳ ಆಮಂತ್ರಣ ಪತ್ರಿಕೆ ಎಲ್ಲೆಡೆ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಲಾಜಿಸ್ಟಿಕ್‌ ಕಂಪನಿ ಹೊಂದಿರುವ ವಿಜಯ್ ಮತ್ತು ಪೂಜಾ ಗಾಂಧಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದೇ ವಿಜಯ್ ಎಂದು ಮೂಲಗಳಿಂದ ತಿಳಿದು ಬಂದಿದೆ. 

ಕರ್ನಾಟಕದಲ್ಲಿದ್ದು, ಕನ್ನಡ್ ಗೊತ್ತಿಲ್ಲ ಅನ್ನೋರಿಗೆ ಏನು ಮಾಡ್ಬೇಕು ಹೇಳ್ತಿದ್ದಾರೆ ಪೂಜಾ ಗಾಂಧಿ

2012ರಲ್ಲಿ ಉದ್ಯಮಿ ಆನಂದ್‌ ಗೌಡ ಜೊತೆ ಪೂಜಾ ಗಾಂದಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ಕೂಡ ಆಗಬೇಕಿತ್ತು ಆದರೆ ಕಾರಣಾಂತರಗಳಿಂದ ಆ ಸಂಬಂಧ ಮುರಿದು ಬಿದ್ದಿದ್ದು. ಕೆಲವು ವರ್ಷ ಪೂಜಾ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಆನಂತರ ರಾಜಕೀಯ ಮತ್ತು ಸಿನಿಮಾ ಎಂದು ರೀ-ಎಂಟ್ರಿ ಕೊಟ್ಟು ಈಗ ಕನ್ನಡದಲ್ಲಿ ಪರ್ಫೆಕ್ಟ್‌ ಟೀಚರ್ ಆಗಿದ್ದಾರೆ.

Follow Us:
Download App:
  • android
  • ios