ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರು ಒಟ್ಟಿಗೆ ಊಟ ಮಾಡುತ್ತಿರುವ ಅಪರೂಪದ ಫೋಟೋವನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕೂಡ ಇದ್ದಾರೆ. ಯಾವ ಸಂದರ್ಭದಲ್ಲಿ ತೆಗೆದ ಫೋಟೋ ಎಂಬುದು ತಿಳಿದಿಲ್ಲ.

ಬೆಂಗಳೂರು (ಸೆ.28): ಕನ್ನಡ ಚಿತ್ರರಂಗದ ಧ್ರುವತಾರೆ ವರನಟ ಡಾ ರಾಜ್ ಕುಮಾರ್ ಮತ್ತು ನಟ ಪುನೀತ್ ರಾಜ್‌ ಕುಮಾರ್ ಅವರು ತಮ್ಮ ಮನೆಯಲ್ಲಿ ಊಟ ಮಾಡುತ್ತಿರುವ ಅಪರೂಪದ ಫೋಟೋವನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಹಂಚಿಕೊಂಡಿದ್ದಾರೆ. ಜೊತೆಗೆ ರಾಘವೇಂದ್ರ ರಾಜ್ ಕುಮಾರ್ ಕೂಡ ಇದ್ದು, ಯಾವಾಗ ತೆಗೆದಿರುವ ಫೋಟೋ ಎಂದು ಜಮೀರ್ ಬಹಿರಂಗಪಡಿಸಿಲ್ಲ.

ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್ಐ‌ಟಿ ದಿಢೀರ್ ದಾಳಿ: ಮಹತ್ವದ ದಾಖಲೆ ವಶಕ್ಕೆ

ಫೋಟೋದಲ್ಲಿ ಸ್ವತಃ ಊಟ ಬಡಿಸುತ್ತಿರುವುದು ಕಾಣಿಸುತ್ತಿದೆ. ಚಿಕನ್, ಮಟನ್ , ಕಬಾಬ್, ಮುದ್ದೆ ಸಲಾಡ್‌ಗಳು ಟೇಬಲ್ ತುಂಬಾ ಕಾಣುತ್ತಿದೆ. ಯಾವ ಫಂಕ್ಷನ್, ಸಂದರ್ಭಯಾವುದು ಎಂಬುದನ್ನು ಜಮೀರ್ ಬಹಿರಂಗಪಡಿಸಿಲ್ಲ.

ಹೊಸೂರು ಟಾಟಾ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ, ಬೆಂಕಿ ನಂದಿಸಲು ಹರಸಾಹಸ!

ಕನ್ನಡ ಚಿತ್ರರಂಗದ ಲೆಜೆಂಡ್ಸ್ ದಿವಂಗತ ಡಾ.ರಾಜಕುಮಾರ್ ಜಿ ಮತ್ತು ದಿವಂಗತ ಶ್ರೀ.ಪುನೀತ್ ಕುಮಾರ್ ಅವರೊಂದಿಗೆ ಮರೆಯಲಾಗದ ಕೆಲವು ಸುವರ್ಣ ನೆನಪುಳು ಎಂದು ಎರಡು ಫೋಟೋವನ್ನು ಪೋಸ್ಟ್ ಮಾಡಿ ಕ್ಯಾಪ್ಷನ್ ಬರೆದಿದ್ದಾರೆ. ಇಂದು ಮದ್ಯಾಹ್ನ 12 ಗಂಟೆಗೆ ಪೋಸ್ಟ್ ಮಾಡಿರುವ ಈ ಫೋಟೋ ಇಲ್ಲಿವರೆಗೆ 10 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಆದರೆ ಹಲವು ಮಂದಿ ಕಮೆಂಟ್‌ ಮಾಡಿ ನೀವು ಕನ್ನಡಲ್ಲೇ ಅಡಿಬರಹ ಬರೆಯುತ್ತಿದ್ದರೆ ಒಳ್ಳೆಯದಿತ್ತು ಎಂದು ಕಮೆಂಟ್ ಮಾಡಿದ್ದಾರೆ.

Scroll to load tweet…