Meghana Raj ರಾಯನ್ ರಾಜ್ ಸರ್ಜಾ ಬರ್ತಡೇ; ಪುತ್ರನ ತುಂಟ ಫೋಟೋ ಹಂಚಿಕೊಂಡ ನಟಿ!
ರಾಯನ್ ರಾಜ್ ಸರ್ಜಾಗೆ ಎರಡು ವರ್ಷ. ತುಂಟ ಪುತ್ರನ ಬ್ಲ್ಯಾಕ್ ಆಂಡ್ ವೈಟ್ ಫೋಟೋ ಹಂಚಿಕೊಂಡ ಮೇಘನಾ...
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ನಾಟಿ ಆಂಡ್ ಕ್ಯೂಟ್ ಪುತ್ರ ರಾಯನ್ ರಾಜ್ ಸರ್ಜಾ ಇಂದು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ತುಂಬಾನೇ ಸಿಂಪಲ್ ಆಗಿ ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಬರ್ತಡೇ ವಿಶ್ ಮಾಡಿದ್ದಾರೆ. ರಾಯನ್ ನಾಟಿ ಲುಕ್ಸ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಕಾಮೆಂಟ್ಸ್‌ನಲ್ಲಿ ಪರಭಾಷೆ ಸೆಲೆಬ್ರಿಟಿಗಳು ಕೂಡ ಕಾಮೆಂಟ್ ಮಾಡಿದ್ದಾರೆ.
ಮೇಘನಾ ಪೋಸ್ಟ್:
'ನನ್ನ ಆಶೀರ್ವಾದ! ನಮ್ಮ ಬೇಬಿ ಬಾಯ್‌ಗೆ ಇಂದು 2 ವರ್ಷ' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಚಿರಂಜೀವಿ ಸರ್ಜಾ ಇನ್‌ಸ್ಟಾಗ್ರಾಂ ಖಾತೆನೂ ಟ್ಯಾಗ್ ಮಾಡಿದ್ದಾರೆ. ಸಣ್ಣ ವಿಡಿಯೋ ಹಂಚಿಕೊಂಡಿರುವ ಮೇಘನಾ ಬ್ಲ್ಯಾಕ್ ಆಂಡ್ ವೈಟ್ ಫೋಟೋ ಹಾಕಿದ್ದಾರೆ, ಈ ಫೋಟೋಗಳಲ್ಲಿ ರಾಯನ್ ತುಂಬಾನೇ ನಾಟಿ ನಾಟಿ ಆಗಿ ಪೋಸ್ ಕೊಟ್ಟಿದ್ದಾನೆ.
ಯಾರೇ ಬರಲಿ ಏನೇ ಆಗಲಿ ನಿನಗಾಗಿ ನಗುತ್ತಿರುವೆ; ಚಿರು ಬರ್ತಡೇಗೆ ಮೇಘನಾ ಪೋಸ್ಟ್
ಅಪ್ಪ ಅಪ್ಪ ಅಂತಾನೇ?:
ರಾಯನ್ ಮಾತು ಆರಂಭಿಸಿದಾಗಿನಿಂದಲ್ಲೂ ಹೇಳುವ ಎರಡು ಪದಗಳು ಅಂದ್ರೆ ಒಂದು ಅಪ್ಪ ಮತ್ತೊಂದು ತಾತ. ಚಿರು ಫೋಟೋ ನೋಡಿ ದಿನ ಆರಂಭಿಸುವ ರಾಯನ್ ಒಂದು ವರ್ಷ ಕಳೆದರೂ ಮೇಘನಾಗೆ ಅಮ್ಮ ಎಂದು ಕರೆದಿರಲಿಲ್ಲ ಇದನ್ನು ಜನರಿಗೆ ತೋರಿಸಲು ಎರಡು ಸಲ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು.
ಒಂದು ವಿಡಿಯೋದಲ್ಲಿ Hug ಎಂದ ತಕ್ಷಣ ಓಡೋಡಿ ಬಂದು ಮೇಘನಾಳಾನ್ನು ತಬ್ಬಿಕೊಳ್ಳುತ್ತಾನೆ ವಿಡಿಯೋ ಮುಗಿಯುವವರೆಗೂ ಅಪ್ಪ ಅಪ್ಪ ಎಂದು ಜೋರಾಗಿ ಕೂಗುತ್ತಾನೆ. ಮತ್ತೊಂದು ವಿಡಿಯೋದಲ್ಲಿ ಮೇಘನಾ ತಾತ ಅಂದ್ರೆ ರಾಯನ್ ತಾತ ಅನ್ನುತ್ತಾನೆ, ಪಾಪ ಅಂದ್ರೆ ಪಾಪ ಅನ್ನುತ್ತಾನೆ, ಅಪ್ಪ ಅಂದ್ರೆ ಅಪ್ಪ ಅನ್ನುತ್ತಾನೆ..ಕೊನೆಯಲ್ಲಿ ಅಮ್ಮ ಎಂದ ತಕ್ಷಣ ಬಾ....ಎನ್ನುತ್ತಾನೆ.
ಅಂದಹಾಗೆ ರಾಯನ್ ಅಮ್ಮ ಎನ್ನುವುದಕ್ಕಿಂತ ಮೊದಲು ಅಪ್ಪ ಎಂದು ಕರೆಯುತ್ತಾನೆ ಅಂತ ಮೇಘನಾ ಈ ಹಿಂದೆ ಬಹಿರಂಗ ಪಡಿಸಿದ್ದರು. ಮೇಘನಾ ಕಿರುತರೆಯ ಡಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ಮೇಘನಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದರು. ಪತಿ ಚಿರು ನಿಧನದ ಬಳಿಕ ಮೇಘನಾ ಡಾನ್ಸ್ ಶೋ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. 'ಈ ಶೋ ಪ್ರಾರಂಭದಲ್ಲಿ ಮಗ ರಾಯನ್ ಅಪ್ಪ ಅಂತ ಮಾತ್ರ ಕರೆಯುತ್ತಿದ್ದ ಇದೀಗ ಶೋ ಕೊನೆಯ ಹಂತಕ್ಕೆ ಬಂದಿದೆ ಮಗ ಅಮ್ಮ ಎಂದು ಕರೆಯುತ್ತಾನೆ' ಎಂದಿದ್ದರು.
ನಟನೆ ಜತೆಗೆ ನಿರ್ಮಾಣಕ್ಕಿಳಿದ ಮೇಘನಾ ರಾಜ್!
ಮೇಘನಾ ರಾಜ್ ಮದರ್‌ಹುಡ್:
ಮದರ್‌ವುಡ್‌ಗೆ ಎಷ್ಟೇ ತಯಾರಿ ಮಾಡಿಕೊಂಡರೂ ಸಾಲುವುದಿಲ್ಲ. ರಾಯನ್ ಹುಟ್ಟಿದ ಕ್ಷಣದಿಂದ ನನ್ನ ಜೀವನದಲ್ಲಿ ಅನೇಕ ಬದಲಾವಣೆಗಳು ಆಯ್ತು. ನನ್ನ ತಾಯಿತನದ ಜರ್ನಿ ಬೇಗ ಪಾಸ್ ಆಯ್ತು. ನಮ್ಮ ಪ್ರತಿಬಿಂಬವೇ ನಮ್ಮ ಮಕ್ಕಳು. ಮತ್ತು ಈಗ ಇಡೀ ದಿನ ನಾನು ಅವನೊಂದಿಗೆ ಅನೇಕ ಭಾವನೆಗಳ ಮೂಲಕ ಹೋಗುತ್ತೇನೆ ಬೆಳಗ್ಗೆ ಆತ ತುಂಬಾನೇ ತುಂಟ, ಮಧ್ಯಾಹ್ನ ಕ್ರ್ಯಾಂಕಿ ಆಗಿರುತ್ತಿದ್ದ ನಿದ್ರೆಯಿಂದ ಎದ್ದಾಗ ತುಂಬಾನೇ ಕ್ಯೂಟ್ ಆಗಿರುತ್ತಾನೆ. ಆತ ನೆಮ್ಮದಿಯಾಗಿ ಮಲಗಿರುವುದನ್ನು ನೋಡಿ ಮನಸ್ಸಿಗೆ ಖುಷಿಯಾಗುತ್ತದೆ. ಈಗ ಆತನಿಗೆ ಎರಡು ವರ್ಷ ಅವನ ಮುಂಬರುವ ದಿನಗಳನ್ನು ನೋಡಲು ಕಾಯುತ್ತಿರುವೆ.