ಭಾರತೀಯ ಹುಡುಗಿ ತನ್ನ ಸ್ನೇಹಿತೆಯರೊಂದಿಗೆ ಯಾವುದಾದರೂ ಪ್ಲಾನ್ ಮಾಡೋ ಮೊದಲು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಸ್ಯಕರವಾದ ಸಂಗತಿಯನ್ನು ಹಂಚಿಕೊಂಡಿದ್ದಾರೆ ಮೇಘನಾ ರಾಜ್.

ಶನಿವಾರ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫನ್ನಿ ಮೆಮ್ಸ್ ಶೇರ್ ಮಾಡಿದ್ದಾರೆ ನಟಿ. ತನ್ನ ಕ್ಯಾಪ್ಶನ್‌ನಲ್ಲಿ ಮೇಘನಾ ಇದು ತನಗೂ ಆಗುತ್ತದೆ ಎಂದು ಬರೆದಿದ್ದಾರೆ. ಅದರಲ್ಲಿ ತನ್ನ ಅತ್ಯುತ್ತಮ ಸ್ನೇಹಿತರೊಬ್ಬರನ್ನು ಟ್ಯಾಗ್ ಮಾಡಿದ್ದಾರೆ. ಮೇಘನಾ ರಾಜ್ ಐದು ತಿಂಗಳ ಮಗನಿಗೆ ತಾಯಿ.

ತನಗಿಂತ 17 ವರ್ಷ ಹಿರಿಯ ನಟನನ್ನು ಪ್ರೀತಿಸಿ ಮದುವೆಯಾದ ಯುವರತ್ನ ಹಿರೋಯಿನ್

ಮೇಘನಾ ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಮಗನ ಫೋಟೋ, ಸ್ನೇಹಿತರ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ಪುಟ್ಟ ಮಗನೊಂದಿಗೆ ಸಮಯ ಕಳೆಯುತ್ತಿರುವ ಮೇಘನಾ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್. ನಟಿಯ ಆತ್ಮೀಯರು ಮೇಘನಾ ಮನೆಗೆ ಬಂದು ಮಾತನಾಡಿಸಿಕೊಂಡು ಹೋಗುತ್ತಿರುತ್ತಾರೆ.