ಮನೆ ತುಂಬಿಸಿಕೊಳ್ಳುವ ಶಾಸ್ತ್ರ ದಿನವೇ ರಾತ್ರಿ 2 ಗಂಟೆಗೆ ಪನ್ನಗಾ ಮನೆಯಲ್ಲಿ ಪಾರ್ಟಿಗೆ ಕರೆದರು ಚಿರು: ಮೇಘನಾ ರಾಜ್

ಚಿರು ಒಮ್ಮೆ ಹೇಳಿದ ಕೆಲಸ ಮಾಡಬೇಕು ಅಂದ್ರೆ ಮಾಡಬೇಕು ಅಷ್ಟು ಹಠ ಮಾಡುತ್ತಿದ್ದರು. ಮನೆ ತುಂಬಿಸಿಕೊಳ್ಳಲುವ ದಿನ ಏನಾಯ್ತು ಗೊತ್ತಾ?

Meghana raj Pannagha Prajwal devaraj talks about Chiranjeevi sarja friendship vcs

ಕನ್ನಡ ಚಿತ್ರರಂಗ ಅದ್ಭುತನ ಯುವ ನಟ ಚಿರಂಜೀವಿ ಸರ್ಜಾ ಇನ್ನಿಲ್ಲವಾದರೂ ಪುತ್ರ ರಾಯನ್ ರಾಜ್ ಸರ್ಜಾ ಆ ಚಾರ್ಮ್‌ ಮತ್ತು ಸ್ಥಾನ ತುಂಬಲು ಸಜ್ಜಾಗಿದ್ದಾನೆ. ಚಿಕ್ಕ ವಯಸ್ಸಿಗೆ ತಂದೆ ತಾಯಿಯನ್ನು ಮೀರಿಸುವಷ್ಟು ಜನರ ಪ್ರೀತಿ ಗಿಟ್ಟಿಸಿಕೊಂಡಿದ್ದಾನೆ. ಹಳವು ವರ್ಷಗಳ ಹಿಂದೆ ನಡೆದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ಸ್ನೇಹದ ಬಗ್ಗೆ ಪ್ರಜ್ವಲ್ ದೇವರಾಜ್ ಮತ್ತು ಪನ್ನಗಾ ಮಾತನಾಡಿರುವ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ.

ಮದುವೆ ಸಂಭ್ರಮ ಜೋರು:

'ಮೇಘನಾ ರಾಜ್ ಮತ್ತು ಚಿರಂಜೀವಿಯ ಮೋಸ್ಟ್‌ ರೊಮ್ಯಾಂಟಿಕ್ ಫೋಟೋಗಳನ್ನು ಹೆಚ್ಚಾಗಿ ಕ್ಲಿಕ್ ಮಾಡಿರುವುದು ನಾನೇ. ಚಿರು ಮದುವೆ ವಿಚಾರವನ್ನು ಮನೆಯಲ್ಲಿ ಒಪ್ಪಿಕೊಂಡಿದ್ದಾರೆ ಅರ್ಜುನ್ ಮಾಮ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿಯುತ್ತಿದ್ದಂತೆ ನಮಗೆ ಫುಲ್ ಖುಷಿ. ಮದುವೆ ಡ್ರೆಸ್‌ಯಿಂದ ಹಿಡಿದು ಪ್ರತಿಯೊಂದರ ಫೋಟೋವನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಿದ್ದನ್ನು. ಸುಮಾರು ಒಂದುವರೆ ತಿಂಗಳು ನಾವೆಲ್ಲರೂ ಮನೆ ಬಿಟ್ಟಿ ಚಿರು ಮದುವೆ ತಯಾರಿಯಲ್ಲಿ ಓಡಾಡುತ್ತಿದ್ವಿ. ಚಿರು ಕ್ರಿಶ್ಚಿಯನ್ ಮದುವೆಗೆ ನಾವು ಸ್ನೇಹಿತರು ಒಂದೇ ರೀತಿ ಸೂಟ್ ಹಾಕಿದ್ವಿ. ಬ್ಯಾಚುಲರ್ ಪಾರ್ಟಿ ಮಾಡುವುದು ಎಲ್ಲಿ ಎಂದು ದಿನ ಯೋಚನೆ ಮಾಡುತ್ತಿದ್ವಿ....ಎಲ್ಲಾ ಹೆಣ್ಣು ಮಕ್ಕಳು ಒಟ್ಟಿಗೆ ಬ್ಯಾಚುಲರ್ ಮಾಡಿರುವುದು ಮೇಘನಾ ಜೊತೆನೇ. ಮದುವೆ ಮುಗಿದ ಮೇಲೆ ಆಯ್ತಾ ಮನೆಗೆ ಈಗ ಬನ್ನಿ ಎನ್ನುತ್ತಿದ್ದರು ಮನೆಯವರು' ಎಂದು ಪ್ರಜ್ವಲ್ ದೇವರಾಜ್ ಮಾತನಾಡಿದ್ದಾರೆ.

ಹಸು ಮೇಯಿಸಿ, ಎಲೆ ಕಟ್ಟಿ ನನ್ನನ್ನು ಗಾಯಕಿ ಮಾಡಿದ್ದು ಅಮ್ಮ, ಗಂಡ ನನ್ನ ಶಕ್ತಿ; ವೇದಿಕೆ ಮೇಲೆ ಕಣ್ಣೀರಿಟ್ಟ ಡಾ. ಅನಂತಲಕ್ಷ್ಮಿ

ಮದುವೆ ದಿನವೇ ಪಾರ್ಟಿ:

ಮೇ 2ರಂದು ರಿಸೆಪ್ಶನ್ ಆದ ಮೇಲೆ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಇತ್ತು. ಮನೆ ತುಂಬಿಸಿಕೊಂಡು ಅರ್ಧಗಂಟೆ ಆದ ಮೇಲೆ ಚಿರು ಬಂದು ಬೇಬಿ ಪನ್ನಗಾ ಮನೆಯಲ್ಲಿ ಪಾರ್ಟಿ ಇದೆ ಹೋಗೋಣಾ ಅಂತಿದ್ದಾರೆ ಚಿರು. ಮದುವೆಯಾಗಿ ಇವಾಗ ಮನೆಗೆ ಬಂದಿದ್ದೀನಿ ಎಲ್ಲಿ ಹೋಗೋದು? ಈ ರೀತಿ ಆಗುತ್ತೆ ಅಂತ ನನ್ನ ಅಮ್ಮಂಗೆ ಗೊತ್ತು ಹೀಗಾಗಿ ಇವತ್ತು ಮದುವೆಯಾಗಿ ಮನೆಗೆ ಹೋಗಿದ್ದೀರಿ ಎಲ್ಲೂ ಹೋಗಬಾರದು ಅಂತ ಹೇಳಿದ್ದರು. ಮನೆ ತುಂಬಿಸಿಕೊಂಡ ಶಾಸ್ತ್ರಿ ಮುಗಿಯುತ್ತಿದ್ದಂತೆ ಬೆಳಗ್ಗೆ 2 ಗಂಟೆಗೆ ಪನ್ನಗಾ ಮನೆಯಲ್ಲಿ ಇದ್ದೀವಿ. ಮೇ 3 ನನ್ನ ಬರ್ತಡೇ ಇದ್ದ ಕಾರಣ ಅಲ್ಲಿ ನನಗೆ ಸರ್ಪ್ರೈಸ್ ಕೊಟ್ಟರು. ಹೋಗೋಣ ಎಂದು ಚಿರು ತುಂಬಾ ಒತ್ತಾಯ ಮಾಡುತ್ತಿದ್ದರು..ಅಯ್ಯೋ ಮದುವೆ ದಿನನೂ ನೀನು ನಿನ್ನ ಫ್ರೆಂಡ್ಸ್‌ ಬಿಡೋಕೆ ಆಗಲ್ಲ ಅಂತ ಹೋಗಿದೆ ಆದರೆ ಅಲ್ಲಿ ನನ್ನ ಬರ್ತಡೇಗೆ ಸರ್ಪ್ರೈಸ್ ಮಾಡಿದ್ದರು ಎಂದು ಮೇಘನಾ ರಾಜ್ ಹೇಳಿದ್ದಾರೆ.

ನೀವು ಹಾಕಿರುವ ಶ್ರಮಕ್ಕೆ ಬೇರೆ ಯಾರಿಂದಲೂ ಮ್ಯಾಚ್ ಮಾಡಲಾಗದು; ಬಿಗ್ ಬಾಸ್ ಬಿಟ್ಟಿದ್ದಕ್ಕೆ ಸುದೀಪ್ ಪುತ್ರಿ ಬೇಸರದ ಪೋಸ್ಟ್!

ನಿಶ್ಚಿತಾರ್ಥ ಹೀಗಿತ್ತು:

ನಿಶ್ಚಿತಾರ್ಥದ ದಿನ ರೂಮಿಗೆ ಬಂದು ಮಗಾ ನನ್ನ ಲವ್ ಸ್ಟೋರಿ ಬಗ್ಗೆ ಯಾರಿಗೆ ಚೆನ್ನಾಗಿ ಗೊತ್ತು ಎಂದು ಕೇಳಿದೆ. ಅದಿಕ್ಕೆ ಪ್ರಜ್ವಲ್ ದೇವರಾಜ್ ಮತ್ತು ಪನ್ನಗಾಭರಣಂಗೆ ಅಲ್ವಾ? ಕರೆಕ್ಟ್‌ ತಾನೇ ಹಾಗಿದ್ರೆ ನೀವಿಬ್ಬರು ನಮ್ಮ ಮನೆಯಲ್ಲಿ ಎಮ್‌ಸಿ ಆಗಬೇಕು ಎಂದು ಹೇಳಿದ. ಏನೋ ಮಾಡಿ ಏನೋ ಮಾಡಿ ಎಂದು ಹೋಗಿಬಿಟ್ಟ ಆದರೆ ನಾವು ಹೇಗೋ ಮ್ಯಾನೇಜ್ ಮಾಡಿ ಮುಗಿಸಿದ್ವಿ. ಅಲ್ಲಿ ಅವರಿಬ್ಬರ ಲವ್ ಸ್ಟೋರಿ ಬಗ್ಗೆ ಮಾತನಾಡಿ ಆನಂತರ ಮತ್ತೆ ಪ್ರಪೋಸ್ ಮಾಡಿಸಲಾಗಿತ್ತು ಎಂದಿದ್ದಾರೆ ಪನ್ನಗಾ. 

Latest Videos
Follow Us:
Download App:
  • android
  • ios