ನೀವು ಹಾಕಿರುವ ಶ್ರಮಕ್ಕೆ ಬೇರೆ ಯಾರಿಂದಲೂ ಮ್ಯಾಚ್ ಮಾಡಲಾಗದು; ಬಿಗ್ ಬಾಸ್ ಬಿಟ್ಟಿದ್ದಕ್ಕೆ ಸುದೀಪ್ ಪುತ್ರಿ ಬೇಸರದ ಪೋಸ್ಟ್!
ತಂದೆಯ 11 ವರ್ಷದ ಶ್ರಮಕ್ಕೆ ಖುಷಿ ವ್ಯಕ್ತ ಪಡಿಸಿದ ಸಾನ್ವಿ. ಯಾರು ಏನೇ ಹೇಳಲಿ ನೀಮ್ಮ ಎನರ್ಜಿ ಯಾರಿದಲೂ ಮ್ಯಾಚ್ ಮಾಡಲಾಗದು......
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿರುತೆರೆಯಲ್ಲಿ ನಡೆಸಿ ಕೊಡುವ ಏಕೈಕ ಕಾರ್ಯಕ್ರಮ ಅಂದ್ರೆ ಬಿಗ್ ಬಾಸ್. ಸುಮಾರು 11 ಸೀಸನ್‌ಗಳ ಸಾರಥಿ ಆಗಿರುವ ಸುದೀಪ್ ಇದೇ ನನ್ನ ಕೊನೆ ಸೀಸನ್ ಎಂದು ಪೋಸ್ಟ್ ಹಾಕಿದ್ದರು. ಈಗಾಗಲೆ ಸುದೀಪ್ ಇಲ್ಲದೆ ಬಿಗ್ ಬಾಸ್ ನೋಡುವುದಿಲ್ಲ, ಸುದೀಪ್ ಇದ್ದರೆ ಕನ್ನಡ ಬಿಗ್ ಬಾಸ್ ನಡೆಯುತ್ತದೆ ಎಂದು ಹಲವರು ಪೋಸ್ಟ್ ಹಾಕುತ್ತಿದ್ದಾರೆ. ಅಲ್ಲದೆ ಕನ್ನಡ ಪರ ಸಂಘನೆಗಳು ಹೋರಾಟ ಮಾಡಲು ಮುಂದಾಗಿದ್ದಾರೆ. ಮರಾಠ ಮತ್ತು ತಮಿಳು ಮಾಲೀಕರು ನಡೆಸುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕನ್ನಡಿಗರು ಕಷ್ಟ ಅನುಭವಿಸುತ್ತಿರುವುದು ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಸುದೀಪ್ ಮಾಡಿರುವ ಪೋಸ್ಟ್‌ನ ಪುತ್ರಿ ಸಾನ್ವಿ ಶೇರ್ ಮಾಡಿದ್ದಾರೆ.
ಸಾನ್ವಿ ಪೋಸ್ಟ್:
'ನಿಮ್ಮ ಜರ್ನಿ ಬಗ್ಗೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಅಪ್ಪ. ನಿಮ್ಮಂತೆ ನಡೆಸಿಕೊಡಲು ಯಾರಿಗೂ ಸಾಧ್ಯವಿಲ್ಲ. ವೇದಿಕೆಯ ಮೇಲೆ ನಿಮ್ಮನ್ನು ನೋಡುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ,ಆದರೆ ಇಷ್ಟು ವರ್ಷ ನೀವು ಬಿಗ್ ಬಾಸ್ ನಡೆಸಿಕೊಟ್ಟ ರೀತಿ ಬಗ್ಗೆ ನನಗೆ ಖುಷಿ ಇದೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ನೀವು ಹಾಕಿರುವ ಶ್ರಮವನ್ನು ಯಾರಿಂದಲೂ ಮ್ಯಾಚ್ ಮಾಡಲು ಸಾಧ್ಯವಿಲ್ಲ. ಈ ಕಾರ್ಯಕ್ರಮ ಬಗ್ಗೆ ನಿಮಗಿದ್ದ ಕಾಳಜಿ ಮತ್ತು ಪ್ರೀತಿಯನ್ನು ನಾನು ಗೌರವಿಸುತ್ತೀನಿ. ನಿಮ್ಮ ಹೆಮ್ಮಯ ಮಗಳು ನಾನು' ಎಂದು ಸಾನ್ವಿ ಪೋಸ್ಟ್ ಹಾಕಿದ್ದಾರೆ' ಎಂದು ಸಾನ್ವಿ ಬರೆದುಕೊಂಡಿದ್ದಾರೆ.
ಗಮನ ಸೆಳೆಯೋಕೆ ಹಾಸಿಗೆನೇ ಬೇಕಾ?; ಸೆರಗು ಹಾಕಿದ್ರೂ ನಿವೇದಿತಾಗೆ ತಪ್ಪಿಲ್ಲ ನೆಟ್ಟಿಗರ ಕಾಟ!
ಸುದೀಪ್ ಮುಂದಿನ ವರ್ಷದಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಕೈ ಬಿಡುವುದಾಗಿ ಪೋಸ್ಟ್ ಹಾಕುತ್ತಿದ್ದಂತೆ ಬಿಗ್ ಬಾಸ್ ಕೂಡ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಫೋನ್ ಮೂಲಕ ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದು ಯಾವುದೇ ಟಾಸ್ಕ್ ನೀಡಿಲ್ಲ. ಅಲ್ಲದೆ ಮನೆಯಲ್ಲಿ ಯಾವುದೇ ತಪ್ಪುಗಳು ಆಗದಂತೆ ನೋಡಿಕೊಳ್ಳಲು ಕ್ಯಾಪ್ಟನ್ ಶಿಶಿರ್‌ಗೆ ಹೇಳಿದ್ದಾರೆ. ಈ ಬದಲಾವಣೆಗಳನ್ನು ನೋಡಿದರೆ ಸುದೀಪ್ ಪರ ಇಡೀ ಬಿಗ್ ಬಾಸ್ ತಂಡವಿದೆ.
ಸತ್ಯವಾಗಲೂ ಲೀಲಾವತಿ ವಿಚಾರ ಮಾತಾಡಬಾರದು, ರಾಜ್‌ಕುಮಾರ್‌ಗೆ ಜಾಣತನ ಇರಲಿಲ್ಲ: ಬಿ ಗಣಪತಿ ಹೇಳಿಕೆ ವೈರಲ್!
ರೂಪೇಶ್ ರಾಜಣ್ಣ ಟ್ವೀಟ್:
ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ @KicchaSudeep ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ. ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ ಎಂದು ಬರೆದು ಚಕ್ರವರ್ತಿ ಚಂದ್ರಚೂಡ್ ಅವರನ್ನು ಟ್ಯಾಗ್ ಮಾಡಿದ್ದಾರೆ ರೂಪೇಶ್ ರಾಜಣ್ಣ.