ಫಳಪಳ ಹೊಳೆಯುವ ಮೇಘನಾ ರಾಜ್; ಏನನ್ನು ಬಳಸಿ ಮೇಕಪ್ ಮಾಡಿಕೊಳ್ಳುತ್ತಾರೆ ನೋಡಿ!
ಮೇಘನಾ ರಾಜ್ ಮೇಕಪ್ ಮಾಡ್ತಾರೋ ಇಲ್ವೋ ಅನ್ನೋ ಡೌಟ್ ಹಲವರಿಗೆ ಇದೆ. ಅಷ್ಟು ಸಿಂಪಲ್, ಕ್ಯೂಟ್ ಅವರ ಮೇಕೋವರ್. ಅದ್ಹೇಗೆ ಮೇಕಪ್ ಹಚ್ಕೊಂಡ್ರೂ ನ್ಯಾಚುರಲ್ಲಾಗಿ ಕಾಣ್ತಾರೆ ಅನ್ನೋ ಪ್ರಶ್ನೆ ಮೇಘನಾ ಕೊಟ್ಟ ಉತ್ತರ ಇಲ್ಲಿದೆ.
ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ನಿಧನದ ನಂತರ ಒಂದಿಷ್ಟು ಕಾಲ ಹೊರ ಪ್ರಪಂಚದ ದೂರಾಗಿ ತಾನಾಯ್ತು, ತನ್ನ ಪಾಡಾಯ್ತು ಅನ್ನೋ ಹಾಗಿದ್ರು. ಪತಿ ಅಗಲುವ ವೇಳೆಗೆ ಐದು ತಿಂಗಳ ಗರ್ಭಿಣಿಯಾಗಿದ್ದ ಮೇಘನಾ ಆ ಬಳಿಕ ಮುದ್ದು ಮಗು ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದ್ದು, ಆ ಮಗುವಿನ ಆರೈಕೆಯಲ್ಲೇ ಒಂದಿಷ್ಟು ಸಮಯ ಕಳೆದದ್ದು ಎಲ್ಲ ಆಯ್ತು. ಇದೀಗ ದುಃಖದಿಂದ ಮೈ ಕೊಡವಿಕೊಂಡು ಮೇಲೆದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಅಷ್ಟೇ ಅಲ್ಲ, ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಯಾಂಡಲ್‌ವುಡ್‌ಗೆ ಕಂ ಬ್ಯಾಕ್ ಮಾಡಿದ್ದಾರೆ. ಅವರ ಹೊಸ ಸಿನಿಮಾ ತತ್ಸಮ ತದ್ಭವ. ಮೇಘನಾ ಹಾಗೂ ಚಿರು ಆತ್ಮೀಯ ಗೆಳೆಯ ಪನ್ನಗಭರಣ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.
ಈಗ ಮೇಘನಾ ಚೆಂದಕ್ಕಿಂತ ಚೆಂದ ಕಾಣೋದಕ್ಕೆ ಶುರುವಾಗಿದ್ದಾರೆ. ಅದಕ್ಕೆ ಏನು ಕಾರಣ ಅಂತ ಅವರ ಫ್ಯಾನ್ಸ್ ಕೇಳೋದಕ್ಕೆ ಶುರು ಮಾಡಿದ್ದಾರೆ. ಅದಕ್ಕೆ ಮೇಘನಾ ಉತ್ತರ ಕೊಟ್ಟಿದ್ದಾರೆ.
ಮೊದಲು ಐಸ್‌ಕ್ಯೂಬ್‌ಅನ್ನು ಮುಖಕ್ಕೆ ಹಚ್ಚಬೇಕು. ಅಂದರೆ ಮಸಾಜ್ ಮಾಡದೇ ಮೃದುವಾಗಿ ಐಸ್‌ಕ್ಯೂಬ್‌ನ ಮುಖದ ಮೇಲೆ ಮೃದುವಾಗಿ ತಿಕ್ಕಿದರೆ ಸಾಕು. ಆಗ ಮುಖ ಫ್ರೆಶ್ ಆಗಿ ಮೇಕಪ್‌ಗೆ ರೆಡಿ ಆಗುತ್ತೆ. ಬೇಸ್ ಆಗಿ ಮೇಘನಾ ಪ್ರೈಮರ್ ಬಳಸೋದಿಲ್ಲ. ಅದರ ಬದಲು ಮಾಯಿಶ್ಚರೈಸರ್ ಮತ್ತು ಸನ್‌ಸ್ಕ್ರೀನ್‌ನ ಮಿಕ್ಸ್ ಮಾಡಿ ಮುಖಕ್ಕೆ, ಕತ್ತಿಗೆ ಭಾಗಕ್ಕೆ ಹಚ್ಚೋದು ಮೇಘನಾ ಮಾಡ್ಕೊಂಡು ಬಂದಿರೋ ರೂಢಿ. ಹೀಗೆ ಹಚ್ಚುವಾಗ ಕತ್ತಿನ ಭಾಗವನ್ನು ಖಂಡಿತಾ ಮರೀಬೇಡಿ, ಮಾಯಿಶ್ಚರೈಸರ್ ಕತ್ತು ಮುಂಭಾಗ ಎಲ್ಲ ಹಚ್ಚೋದು ಬಹಳ ಮುಖ್ಯ. ಇದರ ಮೇಲೆ ಸನ್‌ಸ್ಕ್ರೀನ್ ಬಳಸುತ್ತಾರೆ.
ಸಂಬಂಧಗಳಿಗೆ ಬೆಲೆ ಕೊಡಿ, ಕುಟುಂಬದಲ್ಲಿ ಜಗಳ ಬೇಡ; ಮನವಿ ಮಾಡಿಕೊಂಡ ಧ್ರುವ ಸರ್ಜಾ
ಇಷ್ಟು ಬೇಸಿಕ್ ಆದ್ಮೇಲೆ ಎಲ್ರೂ ಫೌಂಡೇಶನ್ ಹಚ್ತಾರೆ, ಆದರೆ ಮೇಘನಾ ಮೊದಲು ಕಣ್ಣಿನ ಮೇಕಪ್ ಮಾಡ್ತಾರೆ. ಮೊದಲು ಐಶ್ಯಾಡೋಸ್ ಹಚ್ಕೊಳ್ತಾರೆ. ರೆಡಿಶ್ ಬ್ರೌನ್ ಮತ್ತು ಚಾಕೊಲೇಟ್ ಬ್ರೌನ್ ಕಲರ್ ಮಿಕ್ಸ್ ಮಾಡಿ ಐಶ್ಯಾಡೋ ಹಚ್ಕೊಳ್ತಾರೆ. ಇದು ನ್ಯಾಚುರಲ್ ಆಗಿರುತ್ತೆ ಅನ್ನೋದು ಅವರ ಅಭಿಪ್ರಾಯ. ಮೇಲೆ ಹಚ್ಚಿರೋ ಐಶ್ಯಾಡೋ ಸ್ವಲ್ಪ ಕಣ್ಣಿನ ಕೆಳಗೂ ಮೇಘನಾ ಹಚ್ತಾರೆ.
ಕನ್ಸೀಲರ್ ಹಾಕೋದಿಲ್ಲ. ನೇರ ಫೌಂಡೇಶನ್‌ನಿಂದ ಮುಖ ಕವರ್ ಮಾಡ್ತಾರೆ. ಇದನ್ನ ಲೈಟ್ ಆಗಿ ಮಾಯಿಶ್ಚರೈಸರ್‌ನಂತೆ ಹಚ್ತಾರೆ. ಇನ್ನೊಂದು ಅಂದರೆ ಮೇಘನಾ ಐಲೈನರ್(Eye liner) ಬಳಸಲ್ಲ. ಬದಲಿಗೆ ಒಂದು ಬ್ರಶ್‌ನಿಂದ ಕಪ್ಪು ಐಶ್ಯಾಡೋ ಬಳಸಿ ಕಣ್ಣು ರೆಪ್ಪೆ ಹೈಲೈಟ್ ಆಗೋ ಹಾಗೆ ಮಾಡ್ತಾರೆ. ಮೇಘನಾಗೆ ಕಾಜಲ್ ಅಂದರೆ ಬಹಳ ಇಷ್ಟ. ಹೀಗಾಗಿ ಚೆಂದಕೆ ಕಾಜಲ್ ಹಚ್ಕೊಳ್ತಾರೆ. ಬ್ಲಾಕ್ ಮತ್ತು ಡಾರ್ಕ್ ಬ್ರೌನ್ ಕಲರ್‌ನಿಂದ ಐಬ್ರೋಸ್(Eyebrows) ನಡುವಿನ ಗ್ಯಾಪನ್ನಷ್ಟೇ ಫಿಲ್ ಮಾಡ್ತಾರೆ.
ಆ ನಂತರ ಗಲ್ಲದ ಕೆಳಭಾಗವನ್ನು ಲೈಟ್ ಆಗಿ ಬ್ರೌನ್ ಬಣ್ಣದಿಂದ ಕವರ್(Cover) ಮಾಡ್ತಾರೆ. ಕೊನೆಯಲ್ಲಿ ಹೈಲೈಟ್ ಹಚ್ಕೊಳ್ತಾರೆ. ಗಲ್ಲದ ಮೇಲೆ ಕೊಂಚ ಹೈಲೈಟ್ ಹಚ್ಕೊಳ್ತಾರೆ. ಬಹಳ ಲೈಟ್ ಶೇಡ್‌ನ ಲಿಪ್‌ಸ್ಟಿಕ್ ನಿಂದ ತುಟಿ ಕವರ್ ಮಾಡ್ತಾರೆ. ಇಷ್ಟೆಲ್ಲ ಮಾಡಿದ್ಮೇಲೆ ಮಸ್ಕರ ಮಿಸ್ ಮಾಡೋಹಂಗೇ ಇಲ್ಲ. ಕೊನೆಯಲ್ಲಿ ಕಣ್ಣು ರೆಪ್ಪೆಗೆ ಮಸ್ಕರ ಹಚ್ಕೊಳ್ತಾರೆ. ಕೊನೆಯಲ್ಲಿ ಲ್ಯಾಶ್ ಕರ್ಲ್ ಮಾಡ್ತಾರೆ. ಲಾಸ್ಟ್‌ನಲ್ಲಿ ಮೇಕಪ್(Makeup) ಫಿಕ್ಸ್ ಸ್ಪ್ರೇ ಬಳಸಿದ್ರೆ ಮೇಕಪ್ ಅಲ್ಲಾಡಲ್ಲ, ದಿನದ ಕೊನೇಲಿ ನಾವೇ ತೆಗೆಯೋವರೆಗೂ ಹಾಗೆ ಇರುತ್ತೆ ಅನ್ನೋದು ಮೇಘನಾ ಅನುಭವದ ಮಾತು.
ನಿಧಿ ಸುಬ್ಬಯ್ಯ ಹಾಟ್ ಲುಕ್; ಬಟ್ಟೆ ತಗೋಳಕ್ಕೆ ದುಡ್ಡಿಲ್ವಾ ತಾಯಿ ಎಂದು ಕಾಲೆಳೆದ ನೆಟ್ಟಿಗರು