ಮೇಘನಾ ರಾಜ್ ವಯಸ್ಸೆಷ್ಟು, ಮಾತೃಭಾಷೆ ಯಾವುದು; ಗೂಗಲ್‌ನಲ್ಲಿ ಅಭಿಮಾನಿಗಳು ಹುಡುಕಿರುವ ಪ್ರಶ್ನೆಗೆ ಉತ್ತರ ಕೊಟ್ಟ ನಟಿ

ಮದುವೆ ಫೋಟೋ, ಮಗನ ವಯಸ್ಸು, ಮಲಯಾಳಂ ಸಿನಿಮಾ ಮಾಡಲ್ವಾ? ಹೀಗೆ ಅದೆಷ್ಟೋ ಪ್ರಶ್ನೆಗಳನ್ನು ಫ್ಯಾನ್ಸ್‌ ಗೂಗಲ್‌ನಲ್ಲಿ ಹುಡುಕಿದ್ದಾರೆ...ಅದಕ್ಕೆ ಮೇಘನಾ ಕೊಟ್ಟ ಉತ್ತರವಿದು....

Most google questions about kannada actress Meghana raj sarja vcs

ಸ್ಯಾಂಡಲ್‌ವುಡ್‌ ಮನೆ ಮಗಳು ಮೇಘನಾ ರಾಜ್‌ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಬಗ್ಗೆ ಗೂಗಲ್‌ನಲ್ಲಿ ಅಭಿಮಾನಿಗಳು ಸಾಕಷ್ಟು ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಹುಡುಕಾಟ ನಡೆಸಿದ್ದಾರೆ. ಕೆಲವೊಮ್ಮೆ ಸರಿಯಾದ ಉತ್ತರ ಸಿಕ್ಕಿರುತ್ತದೆ ಇನ್ನೂ ಕೆಲವೊಮ್ಮೆ ಸಿಕ್ಕಿರುವುದಿಲ್ಲ, ಹೀಗಾಗಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮೇಘನಾ ರಾಜ್‌ ಅತಿ ಹೆಚ್ಚು ಹುಡುಕಿರುವ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಮೇಘನಾ ತಮ್ಮ ಮುಂದಿನ ಸಿನಿಮಾದ ಡಬ್ಬಿಂಗ್‌ನ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ಡಬ್ಬಿಂಗ್ ಸ್ಟುಡಿಯೋ 'ಲೂಪ್ ಸ್ಟುಡಿಯೋ'ದಲ್ಲಿ ಮಾಡಿದ್ದಾರೆ. ಡಬ್ಬಿಂಗ್ ಮಾಡಲು ಹೋಗುವ ಧಾರಿಯಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ...

'ನನ್ನ ಬಗ್ಗೆ ಮೋಸ್ಟ್‌ ಗೂಗಲ್ ಮಾಡಿರುವ ಪ್ರಶ್ನೆಗಳಿದೆ. ಡಬ್ಬಿಂಗ್ ಆರಂಭಿಸುವ ಮುನ್ನ ನನ್ನ ದಾರಿಯಲ್ಲಿ ಆದಷ್ಟು ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವೆ. ನೋಡೋಣ ಉತ್ತರ ಕೊಡಲು ಆಗುತ್ತಾ' ಎಂದು ಮೇಘನಾ ವಿಡಿಯೋ ಆರಂಭಿಸಿದ್ದಾರೆ. 

- ಬೆಂಗಳೂರಿನಲ್ಲಿ ಮೇಘನಾ ರಾಜ್ ಎಲ್ಲಿ ನೆಲೆಸಿದ್ದಾರೆ?
ಮೇಘನಾ ಉತ್ತರ: ಅನೇಕರಿಗೆ ಗೊತ್ತಿದೆ. ನಾನು ಜೆಪಿ ನಗರದ 5ನೇ ಫೇಸ್‌ನಲ್ಲಿ ಇರುವುದು.

- ಮೇಘನಾ ರಾಜ್ ವಯಸ್ಸು ಎಷ್ಟು?
ಮೇಘನಾ ಉತ್ತರ:  I am as old as you want me to be. (ನೀವು ಬಯಸಿದಷ್ಟು ವಯಸ್ಸಾಗಿದೆ.)

- ಮೇಘನಾ ರಾಜ್‌ ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತಾರೆ?
ಮೇಘನಾ ಉತ್ತರ: ಮನೆಯಲ್ಲಿ ನಾನು ಕನ್ನಡ ಮಾತನಾಡುವುದು ಏಕೆಂದರೆ ನನ್ನ ಮಾತೃಭಾಷೆ ಕನ್ನಡ.  ಅಪ್ಪ ತಮಿಳಿನವರು ಆದರೆ ಸೆಟಲ್ ಆಗಿರುವುದು ಬೆಂಗಳೂರಿನಲ್ಲಿ ಹೀಗಾಗಿ ನಾವೆಲ್ಲರೂ ಮನೆಯಲ್ಲಿ ಕನ್ನಡ ಮಾತನಾಡುವುದು.

ಕೊನೆಗೂ ಮೇಘನಾ ರಾಜ್‌ ದುಬಾರಿ ಬ್ಯಾಗ್ ರಿವೀಲ್; ಮಗನ ವಸ್ತುಗಳಿಲ್ಲ ಎಂದು ಕಾಲೆಳೆದ ನೆಟ್ಟಿಗರು

- ಮೇಘನಾ ರಾಜ್ ಪುತ್ರ ವಯಸ್ಸು ಎಷ್ಟು?
ಮೇಘನಾ ಉತ್ತರ: ನನ್ನ ಮಗನ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ. ಕೆಲವು ದಿನಗಳ ಹಿಂದೆ ರಾಯನ್ ಎರಡನೇ ವರ್ಷದ ಹುಟ್ಟುಹಬ್ಬ...ಈಗ ಅವನಿಗೆ 2 ವರ್ಷ.

-  ಮಲಯಾಳಂ ಚಿತ್ರರಂಗಕ್ಕೆ ಮೇಘನಾ ರಾಜ್ ಕಮ್ ಬ್ಯಾಕ್ ಮಾಡ್ತಾರಾ?
ಮೇಘನಾ ಉತ್ತರ: ಮಲಯಾಳಂ ಸಿನಿಮಾಗಳನ್ನು ಮತ್ತೆ ಮಾಡಬೇಕು ಅನ್ನೋ ಆಸೆ ನನಗೆ ತುಂಬಾನೇ. ನಾನು ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದರೂ ಒಂದು ಮಟ್ಟಕ್ಕೆ ಹೆಸರು ತಂದುಕೊಟ್ಟಿದ್ದು ಮಲಯಾಳಂ ಇಂಡಸ್ಟ್ರಿ. ( ಮಲಯಾಳಂನಲ್ಲಿ ಎರಡು ಸಾಲುಗಳನ್ನು ಹೇಳಿದ್ದಾರೆ)

- ಮೇಘನಾ ರಾಜ್ ಮಗನ ಹೆಸರು ಏನು?
ಮೇಘನಾ ಉತ್ತರ: ನನ್ನ ಮಗನ ಹೆಸರು ಏನೆಂದು ಹೇಳುವುದೇ ಬೇಡ. ನಿಮಗೆ ಗೊತ್ತಿದೆ...ಅತ ಪ್ರಿನ್ಸ್‌...ಅವನೇ ರಾಯನ್ ರಾಜ್ ಸರ್ಜಾ...

- ಮೇಘನಾ ರಾಜ್ ಡಯಟ್‌ ಏನು?
ಮೇಘನಾ ಉತ್ತರ: ಸದ್ಯಕ್ಕೆ ನನ್ನನ್ನು ನೋಡಿ ಯಾರೂ ಡಯಟ್ ಬಗ್ಗೆ ಮಾತನಾಡಬಾರದು. ಆದರೆ ಎಲ್ಲಾ ನಾರ್ಮಲ್‌ ಊಟನೇ ನಾನು ತಿನ್ನುವುದು. 

ಟ್ರೋಲಿಗರಿಗೆ ಯೂಟ್ಯೂಬ್‌ ವಿಡಿಯೋ ಮೂಲಕ ಖಡಕ್ ಉತ್ತರ ಕೊಟ್ಟ ಮೇಘನಾ ರಾಜ್

- ಮೇಘನಾ ರಾಜ್ ಮದುವೆ ಫೋಟೋಗಳು?
ಮೇಘನಾ ಉತ್ತರ: ನನ್ನ ಮದುವೆ ಫೋಟೋಗಳನ್ನು ಈಗ ತೋರಿಸಲು ಆಗುವುದಿಲ್ಲ. ನೀವು ಗೂಗಲ್ ಮಾಡಿದರೆ ಫೋಟೊಗಳು ಬರುತ್ತದೆ...

- ಮೇಘನಾ ರಾಜ್ ನಟಿಸಿರುವ ಒಟ್ಟು ಸಿನಿಮಾಗಳು ಎಷ್ಟು?
ಮೇಘನಾ ಉತ್ತರ: 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವೆ. ಆದರೆ ನಾನು ಕೌಂಟ್ ಮಾಡಿಲ್ಲ

- ಮೇಘನಾ ರಾಜ್ ಮೊದಲ ಸಿನಿಮಾ?
ಮೇಘನಾ ಉತ್ತರ: ನನ್ನ ಮೊದಲ ಸಿನಿಮಾ ಬಂದು ತಮಿಳು ಸಿನಿಮಾ ಕೃಷ್ಣ ಲೀಲೆ ಎಂದು. ಅದು ಮೊದಲು ರಿಲೀಸ್ ಆದ ಸಿನಿಮಾ ಅಲ್ಲ ಆದರೆ ಮೊದಲು ಶೂಟ್ ಮಾಡಿದ ಸಿನಿಮಾ ಅದು. 

 

Latest Videos
Follow Us:
Download App:
  • android
  • ios