ಸ್ಯಾಂಡಲ್‌ವುಡ್‌ ಸ್ಟಾರ್ ದಂಪತಿ ಪುತ್ರಿ, ಚಿರಂಜೀವಿ ಹೃದಯ ಕದ್ದ ಚೋರಿ, ಜೂನಿಯರ್ ಚಿರುಗೆ ರೋಲ್ ಮಾಡೆಲ್, ಅಭಿಮಾನಿಗಳ ಬೋಲ್ಡ್‌ ಹುಡುಗಿ ಮೇಘನಾ ರಾಜ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ 1 ಮಿಲಿಯನ್ ಫಾಲೋವರ್ಸ್‌ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಮೇಘನಾಗೂ ಮೊದಲೇ ಅಭಿಮಾನಿಗಳು ರಿವೀಲ್ ಮಾಡಿದ್ದಾರೆ.

ತಿಂಗಳ ನಂತರ ಸ್ನೇಹಿತರ ಜೊತೆ ಕಾಣಿಸಿಕೊಂಡ ಮೇಘನಾ ರಾಜ್!

ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್‌ ಕೊಂಚ ಆ್ಯಕ್ಟಿವ್ ಇದ್ದಾರೆ. ಈ ಹಿಂದೆ ಸಿನಿಮಾ ಪ್ರಮೋಷನ್, ಜಾಹೀರಾತು ಹಾಗೂ ಫೋಟೋಶೂಟ್‌ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಪುತ್ರನ ಆಗಮನದ ನಂತರ ಪುತ್ರನದ್ದೇ ಫೋಟೋ ಇರುತ್ತವೆ. ಈಗೀಗ ಧ್ರುವ ಸರ್ಜಾ ಪೊಗರು ಸಿನಿಮಾಗೆ ಸಂಬಂಧ ಪಟ್ಟ ಮಾಹಿತಿಯೂ ಅಪ್ಲೋಡ್ ಮಾಡುತ್ತಿದ್ದಾರೆ. 

ಮೇಘನಾ ರಾಜ್‌ 1 ಮಿಲಿಯನ್ ಅಂದ್ರೆ 10 ಲಕ್ಷ ಫಾಲೋವರ್ಸ್ ಪಡೆದುಕೊಂಡಿರುವ ಕಾರಣ ಅಭಿಮಾನಿಗಳು ವಿಭಿನ್ನ ಶೈಲಿಯಲ್ಲಿ ಫೋಟೋ ಅಪ್ಲೋಡ್ ಮಾಡಿ ಶುಭ ಹಾರೈಸುತ್ತಿದ್ದಾರೆ. ಎಷ್ಟೇ ಕಷ್ಟದ ಪರಿಸ್ಥಿತಿ ಎದುರಾದರೂ ತಮ್ಮ ಪರ ನಿಂತ ಅಭಿಮಾನಿಗಳಿಗೆ ಮೇಘನಾ ಥ್ಯಾಂಕ್ಸ್ ಹೇಳಿದ್ದಾರೆ.

ಮೇಘನಾ ರಾಜ್‌ ಪುತ್ರನಿಗೆ ಸಿಗ್ತು ಮತ್ತೊಂದು ಸ್ಪೆಷಲ್ ಗಿಫ್ಟ್‌: ಜೂನಿಯರ್ C ಫುಲ್ ಖುಷ್! 

ಸುಂದರ್ ರಾಜ್‌ ಮುದ್ದಿನ ಮಗಳು ಮೇಘನಾ ಕಳೆದ ವಾರ ತಂದೆ ಹುಟ್ಟುಹಬ್ಬದಂದು ಭಾವುಕ ಪೋಸ್ಟ್‌ ಬರೆದು ಕೊಂಡಿದ್ದರು. 'ಪ್ರೀತಿಯ ಅಪ್ಪ..ನಿಮ್ಮ ಹುಟ್ಟುಹಬ್ಬದ ದಿನ ನಾನು ಈ ಪ್ರಪಂಚಕ್ಕೆ ಹೇಳಬೇಕು, ನಾನು ಡಿಪೆಂಡ್‌ ಆಗುವುದು ನೀವೊಬ್ಬರ ಮೇಲೆ ಮಾತ್ರ. ನಾನು ಎಂದಿಗೂ ನಿಮ್ಮ ಪುಟ್ಟು ಮುದ್ದು ಮಗಳಾಗಿರುತ್ತೇನೆ,' ಎಂದು ಬರೆದಿದ್ದರು.

ಕಳೆದ ಜೂನ್‌ನಲ್ಲಿ ಪತಿ ಚಿರಂಜೀವಿ ಸರ್ಜಾ ಅಕಾಲಿಕಾ ಮರಣಕ್ಕೆ ತುತ್ತಾದಾಗ ಮೇಘನಾ ಐದು ತಿಂಗಳ ಗರ್ಭಿಣಿಯಾಗಿದ್ದರು. ಇದೀಗ ಮಗನ ಆಗಮನದ ನಂತರ ಸರ್ಜಾ ಕುಟುಂಬದ ಮೊಗದಲ್ಲಿ ನಗು ತುಂಬಿದ್ದು, ಮೇಘನಾ ಸಹ ಮಗನ ಆರೈಕೆಯಲ್ಲಿಯೇ ಫುಲ್ ಬ್ಯುಸಿಯಾಗಿದ್ದಾರೆ.