ಬೆಂಗಳೂರು(ಜೂ. 08)  ಗಂಡ ಹೆಂಡತಿ ಬಾಂಧವ್ಯವೇ ಹಾಗೆ. ಅಲ್ಲಿ ಪ್ರೀತಿ, ಮುನಿಸು ಎಲ್ಲವೂ ಇರುತ್ತದೆ. ಚೆನ್ನಾಗಿ ಓಡಾಡಿಕೊಂಡಿದ್ದ ಗಂಡ ಮರುದಿನ ಇಲ್ಲ ಎಂದಾರೆ ಆಕೆಯ ಮನಸಿಗೆ ಎಂತ ಆಘಾತ ಆಗಬಹುದು?  ಮೇಘನಾರ ಪರಿಸ್ಥಿತಿ ಮಾತ್ರ ಹೀಗೆ ಇದೆ.
"

ಬರೋಬ್ಬರಿ ಹತ್ತು ವರ್ಷಗಳ ಪ್ರೀತಿ, ಎರಡು ವರ್ಷದ ದಾಂಪತ್ಯ.. ಚಿರಂಜೀವಿ ಮೇಘನಾರ ಬಿಟ್ಟು ಹೊರಟು ಹೋಗಿದ್ದಾರೆ.  ಗರ್ಭಿಣಿಯಾಗಿರುವ ಮೇಘನಾರ ನೋವು ಮತ್ತೊಂದು ಪಟ್ಟು ಹೆಚ್ಚಿಗೆ ಇದೆ. ಇಂಥ ಜೀವವನ್ನು ಸಂತೈಸುವ ಸ್ಥಿತಿ ಯಾರಿಗೂ ಬಾರದಿರಲಿ. 

ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ ಚಿರನಿದ್ರೆಗೆ ಜಾರಿದ್ದಾರೆ. ಕನಕಪುರ ರಸ್ತೆಯ ಫಾರ್ಮ್ ಹೌಸ್ ನಲ್ಲಿ ಮಲಗಿದ್ದಾರೆ.  ಈ ಅಂತಿಮ ವಿಧಿ ವಿಧಾನದ ದೃಶ್ಯಗಳನ್ನು ನೋಡಿತ್ತಿದ್ದರೆ ನಮಗೆ ಗೊತ್ತಿಲಲ್ಲದೇ ಕಣ್ಣಿರು ಬರುತ್ತದೆ.. ಅಂತಹುದರಲ್ಲಿ ಆರೈಕೆಯ ಗಂಡನ ಕಳೆದುಕೊಂಡ ಮೇಘನಾರ ಸ್ಥಿತಿ

ಪಾರ್ಥಿವ ಶರೀರವನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮೇಘನಾರ ಕಂಡಾಗ ನಮ್ಮ ಕಣ್ಣಂಚಲ್ಲೂ ನೀರು . ಜತೆಯಾಗಿದ್ದ ಗೆಳೆಯ, ಇನಿಯ, ಸಂಗಾತಿ, ಬಾಳ ಪಯಣಿಗ ಇನ್ನಿಲ್ಲ. ಅರಗಿಸಿಕೊಳ್ಳುವುದು ಕಷ್ಟವೇ. ಹೊಟ್ಟೆಯಲ್ಲಿ ಲೋಕ ನೋಡಬೇಕಾದ ಮಗುವಿದೆ.

ಸಹೋದರ, ತಂದೆ-ತಾಯಿ, ಅತ್ತೆ-ಮಾವ ಎಲ್ಲರೂ ಸಮಾನ ನೋವು ಉಣ್ಣುತ್ತಿರುವವರೇ, ಮೇಘನಾರ ಪಾಲು ಎಲ್ಲದಕ್ಕಿಂತ ಜಾಸ್ತಿ. ಇಂಥ ಸಂಕಷ್ಟ ಕಾಲವನ್ನು ಎದುರಿಸುವ ಧೀಶಕ್ತಿ ಮೇಘನಾರಿಗೆ ಬರಲಿ.