ಬೆಂಗಳೂರು/ ಕನಕಪುರ(ಜೂ. 08) ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ(39) ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ.

"

ಬೆಂಗಳೂರು ದಕ್ಷಿಣದ ನೆಲಗುಳಿ ಫಾರ್ಮ್ ಹೌಸ್ ನಲ್ಲಿ ಚಿರು ಶಾಶ್ವತ ನಿದ್ರೆಗೆ ಜಾರಿದ್ದಾರೆ.  ಚಿರು ತಂದೆ ಅಂತಿಮ ವಿಧಿ ವಿಧಾನ ಪೂರೈಸಿದ್ದಾರೆ.  ವಾಯುಪುತ್ರನ ಅಂತಿಮ ದರ್ಶನಕ್ಕೆ ಅಭಿಮಾನಿಗಳ ದಂಡು ಹರಿದು ಬಂದಿತ್ತು. ಅಂತಿಮ ದರ್ಶನ ಪಡೆದ ಅಭಿಮಾನಿಗಳು ಕಣ್ಣೀರಾದರು.

"

ಅರ್ಜುನ್ ಸರ್ಜಾ, ಸಹೋದರ ಧ್ರುವ ಸರ್ಜಾ, ಪ್ರಮಿಳಾ ಜೋಷಾಯ್, ಹಿರಿಯ ನಟ ಸುಂದರ್ ರಾಜ್ ದುಖಃತಪ್ತರಾಗಿದ್ದರು. ಪತ್ನಿ ಮೇಘನಾ ರಾಜ್ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಮಾತ್ರ ಘೋರ.

ಚಿರಂಜೀವಿ ಸರ್ಜಾ ಸಿನಿಪಯಣ

22 ಕ್ಕೂ ಅಧಿಕ ಚಿತ್ರಗಳಲ್ಲಿನಾಯಕರಾಗಿ ಕಾಣಿಸಿಕೊಂಡಿದ್ದ ಚಿರು ಆರೋಗ್ಯವಾಗಿ ಓಡಾಡಿಕೊಂಡಿದ್ದವರು. ಹೃದಯಾಘಾತ ಅವರನ್ನು ಕನ್ನಡ ನಾಡಿನಿಂದ ದೂರ ಮಾಡಿತು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಬದುಕಿನ ಪಯಣ ಮುಗಿಸಿದ ಚಿರಂಜೀವಿಗೆ ನಮ್ಮಿಂದಲೂ ನಮನ. 

 

"