Asianet Suvarna News Asianet Suvarna News

ಮಕ್ಕಳಿಗೆ ಚೀಸ್ ಮಸಾಲಾ ಮ್ಯಾಗಿ ಮಾಡಿಕೊಟ್ಟ ಆನಂದ್; ವಿಡಿಯೋ ವೈರಲ್!

ಮಕ್ಕಳಿಗೆ ಮ್ಯಾಗಿ ಮಾಡಿಕೊಟ್ಟ ಮಾಸ್ಟರ್ ಆನಂದ್. ಪತ್ನಿ ಹಂಚಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್..... 

Master Anand prepares Cheese masala maggi for kids on weekend vcs
Author
First Published Nov 7, 2023, 9:52 AM IST

ಕನ್ನಡ ಚಿತ್ರರಂಗದ ಮಾಸ್ಟರ್ ಬ್ಲಾಸ್ಟರ್ ಆನಂದ್ ಕಿರುತೆರೆ ಶೂಟಿಂಗ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ. ಈ ನಡುವೆ ವೀಕೆಂಡ್‌ನಲ್ಲಿ ಫ್ರೀ ಮಾಡಿಕೊಂಡು ಮಕ್ಕಳಿಗೆಂದು ಮನೆಯಲ್ಲಿ ಅಡುಗೆ ಮಾಡಿದ್ದಾರೆ

'ಕಪಲ್ ಕಿಚನ್ ಕಾರ್ಯಕ್ರಮದಲ್ಲಿ ಏನ್ ಏನೋ ಅಡುಗೆ ಮಾಡುತ್ತೀರಾ ನಮಗೆ ಏನಾದರೂ ಮಾಡಿಕೊಡಬೇಕು ಎಂದು ಹಠ ಮಾಡಿದರು. ಇವತ್ತು ಭಾನುವಾರ ಇಬ್ರು ಫ್ರೀ ಇದ್ರು ಮನೆಯಲ್ಲಿದ್ದಾರೆ ಅದಿಕ್ಕೆ ಕುಕ್ಕಿಂಗ್ ಮಾಡುತ್ತಿದ್ದೀವಿ ಎಂದು ಹೇಳಿ ಮಾಸ್ಟರ್ ಆನಂದ್ ವಿಡಿಯೋ ಆರಂಭಿಸುತ್ತಾರೆ. ಮೊದಲು ಒಂದು ಪ್ಯಾನ್‌ಗೆ ನೀರು ಹಾಕಿ ಆನಂತರ ಎಣ್ಣೆ ಮತ್ತು ಮ್ಯಾಗಿ ಹಾಕಿ ಬೇಯಿಸಿಕೊಳ್ಳುತ್ತಾರೆ. ಇದಾಗುತ್ತಿದ್ದಂತೆ ಮತ್ತೊಂದು ಪ್ಯಾನ್‌ನಲ್ಲಿ ಬೆಣ್ಣೆ, ಈರುಳ್ಳಿ, ದೊಡ್ಡ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಹಾಕಿ ಬಾಡಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಹಾಲು, ಚೀಸ್, ಫ್ರೇಶ್ ಕ್ರೀಮ್, ಚಿಲ್ಲಿ ಫ್ಲೇಕ್ಸ್‌ ಮತ್ತು ಮ್ಯಾಗಿ ಮಸಾಲಾ ಹಾಕಿ ಚೆನ್ನಾಗಿ ಮಿಸ್ಕ್‌ ಮಾಡಿಕೊಳ್ಳಬೇಕು. ಕೊಂಚ ಟೊಮ್ಯಾಟೋ ಕೆಚಪ್‌ ಹಾಕಿದರೆ ನಡೆಯುತ್ತದೆ. ಇದೆಲ್ಲಾ ರೆಡಿ ಆದ ಮೇಲೆ ಮ್ಯಾಗಿಯನ್ನು ಈ ಮಾಡಿಕೊಂಡಿರುವ ಕ್ರೀಮ್ ಪೇಸ್ಟ್‌ ಜೊತೆ ಮಿಸ್ಕ್‌ ಮಾಡಬೇಕು. ಕೊನೆಯಲ್ಲಿ ಚೀಸ್‌ ಇಟ್ಟು 30 ಸೆಕೆಂಡ್‌ಗಳ ಕಾಲ ಪಾತ್ರ ಮುಚ್ಚಬೇಕು. 

ನಕಲಿ ಮಂಜಿನಲ್ಲಿ ಅಣ್ಣಾವ್ರ 'ಪ್ರೇಮ ಕಾಶ್ಮೀರ' ಹಾಡಿಗೆ ಪಬ್ಲಿಕ್‌ನಲ್ಲಿ ಡ್ಯಾನ್ಸ್ ಮಾಡಿದ ಆನಂದ್- ಯಶಸ್ವಿನಿ!

ಚೀಸ್ ಮಸಾಲಾ ಮ್ಯಾಗಿ ಮಾಡಿದ ನಂತರ ಆನಂದ್ ಮಕ್ಕಳ ಜೊತೆ ಎಂಜಾಯ್ ಮಾಡಿಕೊಂಡು ತಿಂದಿದ್ದಾರೆ. 

ಚಿತ್ರನಟ ಮಾಸ್ಟರ್ ಆನಂದ್‌ಗೆ 18.50 ಲಕ್ಷ ವಂಚನೆ: ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ದೂರು

'ಭಾನುವಾರದ ಸ್ಪೆಷಲ್ ಮನೆಯಲ್ಲಿ...ಚೀಸ್ ಮಸಾಲಾ...ನೀವು ಟ್ರೈ ಮಾಡಿ ಹೇಗಿದೆ ಅಂತ ಹೇಳಿ. ನಾವು ಸಖತ್ ಎಂಜಾಯ್ ಮಾಡಿದ್ದೀವಿ. ಇದನ್ನು ಮಾಡಿಕೊಟ್ಟಿದ್ದಕ್ಕೆ ವಂದನೆಗಳು ಅಪ್ಪ ಎನ್ನುತ್ತಾರೆ ಮಕ್ಕಳು' ಎಂದು ಯಶಸ್ವಿನಿ ಅನಂದ್‌ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 

Follow Us:
Download App:
  • android
  • ios