ನಕಲಿ ಮಂಜಿನಲ್ಲಿ ಅಣ್ಣಾವ್ರ 'ಪ್ರೇಮ ಕಾಶ್ಮೀರ' ಹಾಡಿಗೆ ಪಬ್ಲಿಕ್‌ನಲ್ಲಿ ಡ್ಯಾನ್ಸ್ ಮಾಡಿದ ಆನಂದ್- ಯಶಸ್ವಿನಿ!
ಪತ್ನಿ ಜೊತೆ ಜಾಲಿ ಮೂಡ್‌ನಲ್ಲಿ ಮಾಸ್ಟರ್ ಆನಂದ್ ಮತ್ತು ಪತ್ನಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್....
ಕನ್ನಡ ಚಿತ್ರರಂಗ ಮಾಸ್ಟರ್ ಬ್ಲಾಸ್ಟರ್ ಆನಂದ್ ಮತ್ತು ಪತ್ನಿ ಯಶಸ್ವಿನಿ ಸ್ಲೋ ಸಿಟಿಯಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ವಿಡಿಯೋ ಮಾಡಿದ್ದಾರೆ.
'ಹಳೆ ವಿಡಿಯೋ. ಈ ಸಂಗಮ ಹೃದಯಂಗಮ ನಾನಿನ್ನ ಮರೆಯಲಾರೆ' ಎಂದು ಯಶಸ್ವಿನಿ (Yashaswini Master Anand) ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ವರನಟ ಡಾ ರಾಜ್‌ಕುಮಾರ್ ನಟನೆಯ ಶಬ್ದವೇಧಿ ಚಿತ್ರ ಓ ಓ ಓ ಪ್ರೇಮ ಕಾಶ್ಮೀರ ಹಾಡು ಇದಾಗಿದ್ದು. ಕೆ ಎಸ್ ಚಿತ್ರಾ ಮತ್ತು ಹಂಸಲೇಖ ಹಾಡಿದ್ದಾರೆ.
ವಾವ್ ನಿಮ್ಮ ಜೋಡಿ ಸೂಪರ್ ಸಖತ್ ಆಗಿ ಡ್ಯಾನ್ಸ್ ಮಾಡುತ್ತೀರಾ ನೋಡಲು ಖುಷಿಯಾಗುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ನಟನೆ, ನಿರ್ದೇಶನ ಜೊತೆಗೆ ನಿರೂಪಣೆಯಲ್ಲಿ ಬ್ಯುಸಿಯಾಗಿರುವ ಮಾಸ್ಟರ್ ಆನಂದ್ ತಪ್ಪದೆ ಫ್ಯಾಮಿಲಿಗೆ ಟೈಮ್ ಮಾಡಿಕೊಳ್ಳುತ್ತಾರೆ. ಪತ್ನಿ ಮತ್ತು ಪುತ್ರಿ ಕೂಡ ಬಣ್ಣದ ಪ್ರಪಂಚದಲ್ಲಿದ್ದಾರೆ.
ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಯಶಸ್ವಿನಿ ಮತ್ತು ವಂಶಿಕಾ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಅಲ್ಲಿಂದ ಗಿಚ್ಚಿ ಗಿಲಿಗಿಲಿ, ಫ್ಯಾಮಿಲಿ ಗ್ಯಾಂಗ್‌ಸ್ಟಾರ್ ಹಾಗೂ ಅವಾರ್ಡ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.