'ಸಾಹೇಬ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್‌ ಆರೋಗ್ಯದಲ್ಲಿ ಬದಲಾವಣೆ ಕಂಡು ಬಂದು, ಇದ್ದಕ್ಕಿದ್ದಂತೆ ತೂಕ ಹೆಚ್ಚಾಗಿತ್ತು. ಸುಮಾರು 25 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನೋರಂಜನ್‌ ಇದೇ ಮೊದಲ ಬಾರಿ ಆಗಿದ್ದೇನು ಎಂಬ ಸತ್ಯವನ್ನು ರಿವೀಲ್ ಮಾಡಿದ್ದಾರೆ.

ರವಿಚಂದ್ರನ್‌ ಪುತ್ರ ಮನುರಂಜನ್ ಸ್ಯಾಂಡಲ್‌ವುಡ್‌ ಎಂಟ್ರಿಗೆ 5 ವರ್ಷ! 

ಇಷ್ಟು ದಿನಗಳ ಕಾಲ ಮನೋರಂಜನ್‌ ಅವರನ್ನು ಯಾರೇ ಭೇಟಿ ಮಾಡಿದರೂ ಮೊದಲು ಅವರ ತೂಕದ ಬಗ್ಗೆ ಮಾತನಾಡುತ್ತಿದ್ದರಂತೆ. ಪಾತ್ರವೊಂದಕ್ಕೆ ಹೀಗೆ ತಯಾರಿ ಮಾಡಿಕೊಂಡಿರುವುದಾಗಿ ಸುಳ್ಳು ಹೇಳುತ್ತಿದ್ದ ಮನೋರಂಜನ್ ಅಸಲಿ ಕಾರಣವನ್ನು ಇದೀಗ ತೆರೆದಿಟ್ಟಿದ್ದಾರೆ. 78 ಕೆಜಿ ತೂಕವಿದ್ದ ಮನೋರಂಜನ್‌ 2018ರಲ್ಲಿ ನರಗಳ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಸುಮಾರು 25ದಿನಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ಅನಿವಾರ್ಯವಾಗಿ ಸ್ಟೆರಾಯ್ಡ್ಸ್ ನೀಡಲಾಗಿತ್ತು. ಈ ಕಾರಣದಿಂದ ತೂಕ ಹೆಚ್ಚಾಗಿತ್ತು ಎಂದು ಹೇಳಿದ್ದಾರೆ. 

ಈಗಲೂ 6 ತಿಂಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ಬರುತ್ತಾರೆ ಮನೋರಂಜನ್‌. ತಮ್ಮ ವಿಲ್‌ಪವರ್‌ನಿಂದ ಇಷ್ಟು ಬೇಗ ಗುಣಮುಖರಾಗಲು ಸಾಧ್ಯವಾಗಿದ್ದು ಎಂದರಂತೆ ಡಾಕ್ಟರ್.  ಈ ವೇಳೆ ತಮ್ಮ ಸಿನಿಮಾ ಕೆರಿಯಲ್‌ ಮುಳುಗಿ ಹೋಗುತ್ತಿರುವುದನ್ನು ಕಂಡು ಮನೋರಂಜನ್‌ ಡಿಪ್ರೆಶನ್‌ಗೆ ಜಾರಿದ್ದರಂತೆ. ಆರೋಗ್ಯದಲ್ಲಿ ಚೇತರಿಸಿಕೊಳ್ಳಲು ತಮ್ಮ ಕುಟುಂಬ ಬೆನ್ನೆಲುಬಾಗಿ ನಿಂತಿದೆ ಎಂದಿದ್ದಾರೆ. 2021ರಲ್ಲಿ ಒಳ್ಳೆ ಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಬೇಕೆಂದು ನಿರ್ಧರಿಸಿರುವ ಮನೋರಂಜನ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ 95ಕೆಜಿಗೆ ತೂಕ ಇಳಿಸಿಕೊಂಡಿದ್ದಾರೆ.

1 ಮಿಲಿಯನ್ ವೀಕ್ಷಣೆ ಪಡೆದ 'ತ್ರಿ ವಿಕ್ರಮ್' ಹಾಡು! 

ಮನೋರಂಜನ್‌ ಆದಷ್ಟು ಬೇಗ ಸಂಪೂರ್ಣವಾಗಿ ಗುಣಮುಖರಾಗಲಿ ಹಾಗೂ ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳಿ ಶುಭವಾಗಲಿ ಎಂದು ಹಾರೈಸೋಣ.