ನಿಮ್ಗೊತ್ತಾ..? ಮಂಗಳವಾರ ರಜಾದಿನ ಕತೆ ಹೊಳೆದದ್ದು ಕಟ್ಟಿಂಗ್ ಶಾಪ್‌ನಲ್ಲಿ
ಮಂಗಳವಾರ ರಜಾದಿನ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಚಂದನಾ ಆಚಾರ್, ಲಾಸ್ಯ ನಾಗರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ನಿಮ್ಮ ಹಿನ್ನಲೆ ಏನು?
ಬೆಂಗಳೂರಿನಲ್ಲೇ ಹುಟ್ಟಿ ಬೆಳದವನು. ಮ‘್ಯಮ ವರ್ಗದ ಕುಟುಂಬ ನಮ್ಮದು. ಅಪ್ಪ ಚಾಲಕ. ಚಿಕ್ಕಂದಿನಿಂದಲೂ ಸಿನಿಮಾಗಳ ಕಡೆಗೆ ಇದ್ದ ಆಕರ್ಷಣೆ, ಕನಸು ಇಲ್ಲಿಯವರೆಗೂ ಕರೆದುಕೊಂಡು ಬಂತು.
ನಿರ್ದೇಶನಕ್ಕಿಳಿಯುವ ಮುನ್ನ ಏನೆಲ್ಲ ಮಾಡಿಕೊಂಡಿದ್ರಿ?
ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷ. ಒಂದಿಷ್ಟು ಸಿನಿಮಾಗಳಿಗೆ ರೈಟರ್, ಅಸೋಸಿಯೇಟ್ ಆಗಿ ಕೆಲಸ ಮಾಡುವ ಜತೆಗೆ ಡೈಲಾಗ್ ಕೂಡ ಬರೆದಿದ್ದೇನೆ. ಯೋಗರಾಜ್ ‘ಟ್ ತಂಡದಲ್ಲಿ ಕೆಲಸ ಮಾಡುತ್ತ ಸಿನಿಮಾ ಪಾಠಗಳನ್ನು ಕಲಿತಿರುವೆ.
ನಿರ್ದೇಶನವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?
ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ. ನಿರ್ದೇಶಕನಾಗಬೇಕು ಎನ್ನುವ ನನ್ನ ಆಸೆಗೆ ಅವರೇ ಸ್ಫೂರ್ತಿ. ಜತೆಗೆ ಒಂಚೂರು ಬರವಣಿಗೆ ಇತ್ತು. ಡ್ರಾಮಾಗಳನ್ನು ಮಾಡಿಸುತ್ತಿದ್ದೆ. ಇದರಿಂದ ಸಹಜವಾಗಿ ನನಗೆ ನಿರ್ದೇಶನದ ಕಡೆ ಹೆಚ್ಚು ಒಲವು ಮೂಡಿತು.
ಚಿತ್ರಮಂದಿರಕ್ಕಿದ್ದ ನಿರ್ಬಂಧ ಕ್ಯಾನ್ಸಲ್: ಹೊಸ ಗೈಡ್‌ಲೈನ್ಸ್ ಹೀಗಿವೆ
ಮಂಗಳವಾರ ರಜಾದಿನ ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದೀರಿ?
ಸಂಬಂ‘ಗಳು ಬೆಲೆ, ಮೌಲ್ಯಗಳ ಮಹತ್ವ ಹೇಳುತ್ತಿದ್ದೇನೆ. ಹಾಗಂತ ಬೋ‘ನೆ ರೀತಿ ಇರಲ್ಲ. ಎಲ್ಲವನ್ನೂ ಮನರಂಜನೆಯ ‘ಾಟಿಯಲ್ಲೇ ಹೇಳಿದ್ದೇನೆ. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ.
ಈ ಕತೆ ಹೊಳೆದಿದ್ದು ಹೇಗೆ, ಅದಕ್ಕೆ ಟೈಟಲ್ ಯಾವ ರೀತಿ ಸೂಕ್ತ?
ಕಟ್ಟಿಂಗ್ ಶಾಪ್‌ನಲ್ಲಿ. ನನಗೆ ಕಟ್ಟಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಸುದೀಪ್ ಅವರಿಗೆ ಹೇರ್ ವಿನ್ಯಾಸ ಮಾಡಬೇಕು ಎಂಬುದು ಬಹು ದೊಡ್ಡ ಕನಸು. ಆತನ ಕನಸೇ ಚಿತ್ರದ ಅಡಿಪಾಯ. ಇನ್ನೂ ಟೈಟಲ್ ಹುಟ್ಟಿಕೊಳ್ಳದ ಕಾರಣ ನನ್ನ ತಾಯಿ ಪದ್ಮಾ ಅವರು ಒಂದು ದಿನ ನಾನು ಕಟ್ಟಿಂಗ್ ಮಾಡಿಕೊಳ್ಳಲು ಹೋಗಿ ಬರುತ್ತೇನೆ ಎಂದಾಗ ‘ಇವತ್ತು ಮಂಗಳವಾರ ರಜಾದಿನ’ ಎಂದರು. ಅದೇ ನನ್ನ ತಲೆಯಲ್ಲಿ ಉಳಿದುಕೊಂಡು ಈಗ ಸಿನಿಮಾ ಹೆಸರಾಗಿದೆ.
ನಿಮ್ಮ ಈ ಚಿತ್ರಕ್ಕೆ ಕಲಾವಿದರು ಹೇಗೆ ಸೂಕ್ತ?
ಬೇರೆ ಬೇರೆಯವರಿಗೆ ಈ ಕತೆ ಹೇಳಿದ್ದು ನಿಜ. ಆದರೆ, ಅವರಿಗಾಗಿ ಕಾಯಲು ಆಗುತ್ತಿರಲಿಲ್ಲ. ನಾವೇ ಸಾಲ ಮಾಡಿ ಸಿನಿಮಾ ಮಾಡುವ ಪರಿಸ್ಥಿತಿಯಲ್ಲಿ ಕಾಯುವುದು ಸೂಕ್ತ ಅಲ್ಲ ಎನಿಸಿದಾಗ ಚಂದನ್ ಆಚಾರ್ ನೆನಪಾಗಿ ಅವರಿಗೆ ಕತೆ ಹೇಳಿದೆ. ಇಷ್ಟವಾಗಿ ಒಪ್ಪಿದರು. ಲಾಸ್ಯ ನಾಗರಾಜ್ ಟಾಮ್ ಪಾತ್ರ ಮಾಡಿದ್ದಾರೆ.