ಮಗುವಿಗೆ ಜನ್ಮ ನೀಡುತ್ತಿದ್ದಂತೆ ರೆಸ್ಟ್‌ ಮಾಡದೆ ಚಿತ್ರೀಕರಣದಲ್ಲಿ ಭಾಗಿಯಾದ ನಟಿ ಮಮತಾ ರಾಹುತ್. ಸರ್ಕಾರಿ ಆಸ್ಪತ್ರೆ ಫುಲ್ ಸೂಪರ್ ಎಂದ ನಟಿ..... 

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಮಮತಾ ರಾಹುತ್ ಜುಲೈ 4ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿ ಆದ ಖುಷಿ ವಿಚಾರದಿಂದ ಈವರೆಗೂ ಜೀವನದ ಪ್ರತಿ ಸ್ಪೆಷಲ್ ಕ್ಷಣಗಳನ್ನು ಫಾಲೋವರ್ಸ್‌ ಜೊತೆ ಹಂಚಿಕೊಂಡಿದ್ದಾರೆ. ಈಗ ಸಿನಿಮಾ ಚಿತ್ರೀಕರಣ ಕೂಡ ಆರಂಭಿಸಿದ್ದಾರೆ.

'ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಮಮತಾ ರಾಹುತ್. ಸೋಷಿಯಲ್ ಮೀಡಿಯಾದಲ್ಲಿ ನನ್ನ ಪ್ರೆಗ್ನೆನ್ಸಿ ವಿಡಿಯೋಗಳನ್ನು ನೀವು ನೋಡುತ್ತಾ ಇದ್ದೀರಿ ಇವತ್ತು ನನಗೆ ಡೆಲಿವರಿ ಆಗಿದೆ ನನ್ನ ಮಗು ಜೊತೆ ನನ್ನ ಫ್ಯಾಮಿಲಿ ಜೊತೆ ವಿಡಿಯೋ ನೋಡುತ್ತಿದ್ದೀರ. ನಿನ್ನೆ ಸಂಜೆ ನನಗೆ ನಾರ್ಮಲ್ ಡೆಲಿವರಿ ಆಗಿದೆ ಅದು ಸರ್ಕಾರಿ ಆಸ್ಪತ್ರೆಯಲ್ಲಿ. ಯಾವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೂ ಕಡಿಮೆ ಇಲ್ಲ ನಮ್ಮ ಸರ್ಕಾರಿ ಆಸ್ಪತ್ರೆಗಳು, ತುಂಬಾ ಕ್ಲೀನ್ ಆಗಿದೆ ಅಗತ್ಯ ಇರುವ ಎಲ್ಲಾ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ ವೈದ್ಯರು ಮತ್ತು ಸಿಬ್ಬಂದಿಗಳು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಡಾ ಸವಿತಾ ಮತ್ತು ಅವರ ಟೀಂ ತುಂಬಾ ಕ್ರಿಟಿಕಲ್ ಆಗಿರುವ ಕೇಸ್‌ಗಳನ್ನು ಸುಲಭವಾಗಿ ಹ್ಯಾಂಡಲ್ ಮಾಡಿ ನಾರ್ಮಲ್ ಮಾಡಿಸುತ್ತಾರೆ. ತುಂಬಾ ಟ್ರೈ ಮಾಡಿ ನನಗೆ ನಾರ್ಮಲ್ ಡೆಲಿವರಿ ಮಾಡಿಸಿದರು. ಸರ್ಕಾರಿ ಆಸ್ಪತ್ರೆ ಅಂದ್ರೆ ಜನರ ತಲೆಯಲ್ಲಿ ತಪ್ಪು ಕಲ್ಪನೆ ಇರುತ್ತದೆ ಚೆನ್ನಾಗಿರಲ್ಲ ನೀಟ್ ಆಗಿರಲಿಲ್ಲ ವೈದ್ಯರು ಸರಿಯಾಗಿಲ್ಲ ಆ ರೀತಿ ಏನ್ ಏನೋ ಯೋಚನೆಗಳು ಇರುತ್ತೆ ಆದರೆ ಅದೆಲ್ಲಾ ತಪ್ಪು. ಜನರಲ್ಲಿ ಒಂದು ಮನವಿ ಮಾಡಿಕೊಳ್ಳುವೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒಪ್ಪಿಕೊಂಡು ಬಳಸಿಕೊಳ್ಳಿ ಎಲ್ಲವೂ ಸಂಪೂರ್ಣವಾಗಿ ಫ್ರೀ ನಮ್ಮಿಂದ ಒಂದು ರೂಪಾಯಿ ಕೂಡ ತೆಗೆದುಕೊಂಡಿಲ್ಲ ಒಳ್ಳೆ ರೀತಿಯಲ್ಲಿ ಡೆಲಿವರಿ ಮಾಡಿ ಕಳುಹಿಸುತ್ತಿದ್ದಾರೆ ಹೀಗಾಗಿ ಒಮ್ಮೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ' ಎಂದು ಮಮತಾ ರಾಹುತ್ ಮಾತನಾಡಿದ್ದಾರೆ.

ಎದೆ ಗೀಟು ಕಾಣದ ಹಾಗೆ ಡ್ರೆಸ್‌ ಹಾಕಮ್ಮ; ಬಿಗ್ ಬಾಸ್ ಭೂಮಿ ಶೆಟ್ಟಿ ವಿರುದ್ಧ ನೆಟ್ಟಿಗರು ಗರಂ

'ಮಗುವಿಗೆ ಜನ್ಮ ನೀಡಿದ ದಿನವೇ ಮಮತಾ ರಾಹುತ್ ತಾರಿಣಿ ಸಿನಿಮಾ ಚಿತ್ರೀಕರಣಲ್ಲಿ ಭಾಗಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಮಗು ಹುಟ್ಟಿದ ದಿನವೇ ಮೊದಲ ಶಾಟ್ ತೆಗೆದಿದ್ದಾರೆ ಮೇಕಪ್ ಇಲ್ಲದೆ ಮಮತಾ ರಾಹುತ್ ಮತ್ತು ಒಂದು ದಿನದ ಮಗು ಕಾಣಿಸಿಕೊಂಡಿದೆ. 'ಡೆಲಿವರಿ ನಂತರ ನನ್ನ ಮೊದಲ ಫೋಟೋಗಳಿದು. ತಾರಿಣಿ ಸಿನಿಮಾ ಚಿತ್ರೀಕರಣ ನಡೆಯುತ್ತಿಇದೆ. ನನ್ನ ಮಗನ ಮೊದಲ ಕನ್ನಡ ಪ್ರೊಡಕ್ಷನ್ ಇದಾಗಿರುವ ಕಾರಣ ನಿಮ್ಮ ಸಪೋರ್ಟ್‌ ಅಗತ್ಯವಿದೆ' ಎಂದು ಮಮತಾ ರಾಹುತ್ ಬರೆದುಕೊಂಡಿದ್ದರು' ಎಂದು ಮಮತಾ ಹೇಳಿದ್ದಾರೆ.

'ನನ್ನ ಮಗು ಜೊತೆ ಚಿತ್ರೀಕರಣ ಮಾಡುತ್ತೀದ್ದೀವಿ ಇಂದು ಕೊನೆ ದಿನದ ಚಿತ್ರೀಕರಣ. ಈಗಷ್ಟೆ ಹುಟ್ಟಿರುವ ಮಗುವಿನ ಜೊತೆ ಚಿತ್ರೀಕರಣವಿದು ನಮ್ಮ ಮೊದಲ ಕನ್ನಡ ಪ್ರೊಡಕ್ಷನ್ ತಾರಿಣಿ. ನಿಮ್ಮ ಸಪೋರ್ಟ್‌ ನನ್ನ ಮಗನ ಮೇಲೆ ಇರಲಿ' ಎಂದು ಶೂಟಿಂಗ್ ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ. 

ರಸ್ತೆಯಲ್ಲಿ ಮುಗ್ಗರಿಸಿ ಬಿದ್ದ ಕಿರುತೆರೆ ನಟಿ ಸುಮತಿ; ಮೂಗು ಪುಡಿಪುಡಿ, ಆಪರೇಷನ್‌ ನಂತರ ಲಕ್ಷಣನೇ ಇಲ್ಲ ಎಂದು ಕಣ್ಣೀರು!

ಕಳೆದ ವಾರ ಮಮತಾ ರಾಹುತ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸುಮಾರು ಒಂದು ವಾರಗಳ ಕಾಲ ಪ್ರತಿ ದಿನ ಬಸರಿಗಳ ಬಯಕೆ ಈಡೇರಿಸಿದ್ದಾರೆ. ಅಗ ಮಮತಾ ರಾಹುತ್ ಕಾಜು ಬ್ಲಾಸ್ಟ್‌ ರುಚಿ ನೋಡಿದರು. ಕಾರ್ಯಕ್ರಮ ಮುಗಿನ ಕೊನೆಯಲ್ಲಿ ಮಡಲು ತುಂಬುವ ಶಾಸ್ತ್ರ ಮಾಡಿದ್ದಾರೆ ಆಗ ಮಮತಾ ರಾಹುತ್ ಅವರಿಗೆ ಸೀರೆ, ಬಳೆ ಮತ್ತು ಹೂ ಕೊಟ್ಟಿದ್ದಾರೆ. 'ನನಗೆ ಹೆಣ್ಣು ಮಗು ಹುಟ್ಟಬೇಕು ಅನ್ನೋ ಆಸೆ ತುಂಬಾ ಇದೆ' ಎಂದು ಹೇಳಿಕೊಂಡಿದ್ದರು.