ಬಹಳಷ್ಟು ಸ್ಟಾರ್ ನಟರ ಜೊತೆ ನಟಿಸಿದ್ದ ಮಾಲಾಶ್ರೀ ನಟ ವಿಷ್ಣುವರ್ಧನ್‌ಗೆ ಯಾಕೆ ಜೋಡಿಯಾಗಲಿಲ್ಲ?

ನಂಜುಂಡಿ ಕಲ್ಯಾಣದ ಬಳಿಕ ನಟಿ ಮಾಲಾಶ್ರೀ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಾಯಕಿ ನಟಿ ಮಾಲಾಶ್ರೀ. ಅದೆಷ್ಟೋ ವೇಳೆ ಅವರು ಡಬ್ಬಲ್ ಕಾಲ್‌ಶೀಟ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

Malashri and Vishnuvardhan lead kannada movie could not come at that time Says Sandalwood directors srb

ಕನ್ನಡದ ಕನಸಿನ ರಾಣಿ ಖ್ಯಾತಿಯ ಮಾಲಾಶ್ರೀ 'ನಭೋ ನಭವಿಷ್ಯತಿ' ಎಂಬಂತೆ ಕನ್ನಡ ಚಿತ್ರರಂಗವನ್ನು ಒಂದು ಕಾಲದಲ್ಲಿ ಆಳಿದವರು. 80-90ರ ದಶಕದಲ್ಲಿ ಮಾಲಾಶ್ರೀ (Malashri)ಕ್ರೇಜ್ ಅದೆಷ್ಟು ಇತ್ತು ಎಂದರೆ ಕನ್ನಡ ಸಿನಿಮಾ ಪ್ರೇಕ್ಷಕರು ಮಾಲಾಶ್ರೀ ಸಿನಿಮಾಗಳಿಗಾಗಿಯೇ ಕಾಯುತ್ತಿದ್ದರು, ನೋಡಿ ಧನ್ಯರಾಗುತ್ತಿದ್ದರು. ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿ ನಟಿಸಿದ ಮೊಟ್ಟ ಮೊದಲ ಸಿನಿಮಾ 'ನಂಜುಂಡಿ ಕಲ್ಯಾಣ'ದಲ್ಲೇ ಮಾಲಾಶ್ರೀ ಮೋಡಿಗೆ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರು ಅಕ್ಷರಶಃ ಫಿದಾ ಆಗಿಬಿಟ್ಟಿದ್ದರು. ಮಾಲಾಶ್ರೀ ಅವರ ಗ್ಲಾಮರಸ್ ಲುಕ್, ನಟನೆ ಹಾಗೂ ಸಂಪ್ರದಾಯಸ್ಥ ಹಳ್ಳಿ ಹುಡುಗಿಯಾಗಿಯೂ ಅವರ ಅಮೋಘ ಅಭಿನಯ ಅವರನ್ನು ಸೈಡ್‌ಗೆ ಸರಿಸಲು ಸಾಧ್ಯವೇ ಇರಲಿಲ್ಲ. 

ನಂಜುಂಡಿ ಕಲ್ಯಾಣದ (Nanjundi Kalyana)ಬಳಿಕ ನಟಿ ಮಾಲಾಶ್ರೀ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಾಯಕಿ ನಟಿ ಮಾಲಾಶ್ರೀ. ಡಬ್ಬಲ್ ಕಾಲ್‌ಶೀಟ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದ ಬಗ್ಗೆ ಅಂದಿನ ನಿರ್ದೇಶಕರು ಬಹಳಷ್ಟು ಬಾರಿ ಹಲವಾರು ಸಂದರ್ಶನಗಳಲ್ಲೂ ಹೇಳಿಕೊಂಡಿದ್ದಾರೆ. ಮಾಲಾಶ್ರೀ 'ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು..' ಎಂಬ ಹಾಡಿಗೆ ಎಂಬತ್ತರ ದಶಕದಲ್ಲೇ ಡಾನ್ಸ್ ಮಾಡಿದ್ದ ರೀತಿಗೆ ಸ್ಯಾಂಡಲ್‌ವುಡ್ ದಂಗಾಗಿ ಹೋಗಿತ್ತು. ಎಂಥ ಪಾತ್ರವನ್ನೂ ಲೀಲಾಜಾಲವಾಗಿ ಅವರು ಅಭಿನಯಿಸುತ್ತಿದ್ದ ರೀತಿಗೆ ನಿರ್ದೇಶಕರೂ ಫಿದಾ ಆಗಿದ್ದರು.

ನಾಗರಹಾವು ಬಳಿಕ ನಟ ವಿಷ್ಣುವರ್ಧನ್‌ಗೆ ಪುಟ್ಟಣ್ಣ ಕಣಗಾಲ್ ಮತ್ತೊಂದು ಸಿನಿಮಾ ಯಾಕೆ ಮಾಡಲಿಲ್ಲ?

ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಶಶಿಕುಮಾರ್, ಸುನಿಲ್, ರವಿಚಂದ್ರನ್, ದೇವರಾಜ್ ಸೇರಿದಂತೆ ಅಂದಿನ ಬಹುತೇಕ ಎಲ್ಲ ಸ್ಟಾರ್ ನಟರುಗಳೊಂದಿಗೂ ಮಾಲಾಶ್ರೀ ಅಭಿನಯಿಸಿದ್ದಾರೆ. ಆದರೆ, ಅಂದಿನ ಕಾಲದಲ್ಲಿ ಸೂಪರ್ ಸ್ಟಾರ್ ಆಗಿದ್ದ ನಟ ವಿಷ್ಣುವರ್ಧನ್ (Vishnuvardhan) ಅವರೊಂದಿಗೆ ಮಾತ್ರ ಯಾಕೆ ಮಾಲಾಶ್ರೀ ನಟಿಸಲಿಲ್ಲ? ಈ ಬಗ್ಗೆ ಹಲವರು ಇಂದಿಗೂ ಚರ್ಚೆ ಮಾಡುತ್ತಾರೆ. ಮಾಲಾಶ್ರೀ-ವಿಷ್ಣುವರ್ಧನ್ ಜೋಡಿಯ ಸಿನಿಮಾ ನೋಡಲು ಕನ್ನಡ ಸಿನಿರಸಿಕರು ತುದಿಗಾಲಲ್ಲಿ ಮಹದಾಸೆಯಿಂದ ಕಾಯುತ್ತಿದ್ದರು. ಆದರೆ, ಅದು ಯಾವತ್ತೂ ಈಡೇರಲೇ ಇಲ್ಲ. ಈ ಬಗ್ಗೆ ಕೆಲವು ನಿರ್ದೇಶಕರಿಂದ ಉತ್ತರ ಸಿಕ್ಕಿದೆ. ಕನ್ನಡದಲ್ಲಿ ಅಂದು ಚಾಲ್ತಿಯಲ್ಲಿದ್ದ ಬಹಳಷ್ಟು ಹಿರಿ-ಕಿರಿಯ ನಿರ್ದೇಶಕರು ಆ ಬಗ್ಗೆ ಮಾತನಾಡಿದ್ದಾರೆ. 

ಏಳುಬೀಳುಗಳ ನಡುವೆಯೂ ಗಟ್ಟಿ ಬದುಕು ಕಟ್ಟಿಕೊಂಡ ಜಯಮಾಲಾ ಅದೆಂಥ ಸಮಸ್ಯೆಗೆ ಸಿಲುಕಿದ್ದರು?

'ಮಾಲಾಶ್ರೀ ಹಾಗೂ ವಿಷ್ಣುವರ್ಧನ್ ಇಬ್ಬರೂ ಆ ಕಾಲದಲ್ಲಿ ಸೂಪರ್ ಸ್ಟಾರ್‌ಗಳೇ ಆಗಿದ್ದರು. ಪುರುಷ ನಟರಾಗಿ ವಿಷ್ಣುವರ್ಧನ್‌ಗೆ ಸಹಜವಾಗಿಯೇ ಅವರಿಗೆ ಹೊಂದುವಂತ ಪಾತ್ರವನ್ನೇ ಸೃಷ್ಟಿಸಲಾಗುತ್ತಿತ್ತು. ಆದರೆ, ಅಂದು ಮಾಲಾಶ್ರೀ ಅವರು ಲೇಡಿ ಸೂಪರ್‌ ಸ್ಟಾರ್ ಆಗಿದ್ದರು. ಅವರೂ ಸಹ ಪುರುಷ ನಟರಿಗೆ ಸರಿಸಮಾನವಾಗಿಯೇ ಸ್ಟಾರ್‌ಡಮ್ ಹೊಂದಿದ್ದರು. ನಟ ವಿಷ್ಣುವರ್ಧನ್ ಎದುರು ನಾಯಕಿಯಾಗಿ ಮಾತ್ರವೇ ಮಾಲಾಶ್ರೀ ಪಾತ್ರ ಸೃಷ್ಟಿಸಲು ಸಾಧ್ಯವಿರಲಿಲ್ಲ. ಎರಡೂ ಪಾತ್ರಗಳಿಗೂ ಚಿತ್ರದಲ್ಲಿ ಸರಿಸಮಾನ ತೂಕ ಇರಿಸಿಕೊಳ್ಳಬೇಕಿತ್ತು. ಅಂಥ ಕಥೆಯ ಪ್ರಯೋಗಕ್ಕೆ ಮುಂದಾಗಲು ನಿರ್ಮಾಪಕರು ಹೆದರುತ್ತಿದ್ದರು. 

ನಟಿ-ನಿರ್ಮಾಪಕಿ ಆಗುವ ಮೊದಲು 'ಸ್ಯಾಂಡಲ್‌ವುಡ್ ಸ್ವೀಟಿ' ರಾಧಿಕಾ ಲೈಫ್‌ನಲ್ಲಿ ಏನೇನೆಲ್ಲಾ ಆಗಿತ್ತು?

ಮಾಲಾಶ್ರೀ ಎಂಥ ಪಾತ್ರಕ್ಕಾದರೂ ಜೀವ ತುಂಬಿ ನಟಿಸುತ್ತಿದ್ದ ನಟಿ. 'ತವರುಮನೆ ಉಡುಗೊರೆ, ಸಿಂಧೂರ ತಿಲಕ, ಬೆಳ್ಳಿ ಮೋಡಗಳು, ಹೃದಯ ಹಾಡಿತು ಹಾಗೂ ರಾಮಾಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಾಲಾಶ್ರೀ ರೆಬೆಲ್ ಫೀಲ್ ಬಿಟ್ಟು ಎಮೋಶನಲ್ ಆಗಿಯೇ ಕಾಣಿಸಿಕೊಂಡಿದ್ದರು. ಆದರೆ ಅವೆಲ್ಲಾ ಪಾತ್ರಗಳಲ್ಲಿ ಮಾಲಾಶ್ರೀ ರೋಲ್‌ಗೇ ಹೆಚ್ಚು ಪ್ರಾತಿನಿಧ್ಯವಿತ್ತು. ಆದರೆ, ಸೂಪರ್‌ ಸ್ಟಾರ್ ಆಗಿದ್ದ ನಟ ವಿಷ್ಣುವರ್ಧನ್ ಎದುರು ಮಾಲಾಶ್ರೀ ಪಾತ್ರವನ್ನು ವಿಜೃಂಭಿಸಲು ಅಸಾಧ್ಯವಾಗಿತ್ತು. ಅಷ್ಟಕ್ಕೂ ಮಾಲಾಶ್ರೀ ಕಾಲ್‌ಶೀಟ್ ಹಾಗೂ ವಿಷ್ಣುವರ್ಧನ್ ಕಾಲ್‌ಶೀಟ್‌ಗಳನ್ನು ಒಟ್ಟಿಗೇ ಹೊಂದಿಸುವುದು ತುಂಬಾ ಕಷ್ಟವಾಗಿತ್ತು' ಎಂದಿದ್ದಾರೆ ಹಲವು ನಿರ್ದೇಶಕರು. 

Latest Videos
Follow Us:
Download App:
  • android
  • ios