Asianet Suvarna News Asianet Suvarna News

ಪಸದಾಂಗವ್ನೆ ಸ್ಯಾನೆ... ಮಗಳ ಕಾಟೇರಾ ಹಾಡಿಗೆ ಅಮ್ಮ ಮಾಲಾಶ್ರೀ ಸಕತ್​ ಸ್ಟೆಪ್ಸ್​: ಫ್ಯಾನ್ಸ್​ ಫಿದಾ

ಕಾಟೇರ ಚಿತ್ರದ ಪಸದಾಂಗವ್ನೆ ಸ್ಯಾನೆ ಪಸದಾಂಗವ್ನೆ ಹಾಡಿಗೆ ನಟಿ ಮಾಲಾಶ್ರೀ ಸ್ಟೆಪ್​ ಹಾಕಿದ್ದಾರೆ. ಮಗಳ ಸಿನಿಮಾಕ್ಕೆ ಅಮ್ಮನ ಡ್ಯಾನ್ಸ್​ ಮೋಡಿ ಮಾಡಿದೆ.
 

Malashree steps to Pasadangavne Syane Pasadangavne from the film Katera suc
Author
First Published Dec 10, 2023, 12:23 PM IST

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಅವರ ಪುತ್ರಿ ಆರಾಧನಾ ಅಭಿನಯದ ಕಾಟೇರ ಚಿತ್ರ ಬಿಡುಗಡೆಗೆ ಫ್ಯಾನ್ಸ್​ ಕಾಯುತ್ತಿದ್ದಾರೆ. ಇದೇ ಡಿಸೆಂಬರ್​ ತಿಂಗಳ 29 ರಂದು ಚಿತ್ರ ರಿಲೀಸ್ ಆಗುತ್ತಿದೆ. ಇದಾಗಲೇ ಅಮ್ಮ ಮತ್ತು ಮಗಳು ಮುಂಬೈಗೆ ತೆರಳಿ  ಸಿದ್ಧಿವಿನಾಯಕ ದೇವಾಲಯಕ್ಕೆ ಹೋಗಿ ಚಿತ್ರಕ್ಕೆ ದೊಡ್ಡಮಟ್ಟದ ಸಕ್ಸಸ್ ಸಿಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ ಈ ಚಿತ್ರದ ಪಸದಾಂಗವ್ನೆ ಸ್ಯಾನೆ ಪಸದಾಂಗವ್ನೆ ಹಾಡು ರಿಲೀಸ್​ ಆಗಿತ್ತು. ಪಸದಾಂಗವ್ನೆ ಸ್ಯಾನೆ ಪಸದಾಂಗವ್ವೆ ಹಾಡಿನ ಸಾಹಿತ್ಯ ಮಾತ್ರವಲ್ಲದೆ ಹಿನ್ನೆಲೆ ಮ್ಯೂಸಿಕ್​ಗೂ ಅಭಿಮಾನಿಗಳು ಫಿದಾ ಆಗಿದ್ದು, ಈ ಹಾಡಿಗೆ ಮಾಲಾಶ್ರೀ ಅವರ ಪುತ್ರಿ ಆರಾಧನಾ ಡ್ಯಾನ್ಸ್​ ಮೆಚ್ಚಿಕೊಂಡಿದ್ದಾರೆ. ವಿ. ಹರಿಕೃಷ್ಣನ್‌ ಸಂಗೀತ ಮೋಡಿ ಮಾಡುವಂತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. 

ಕಾಟೇರ ಚಿತ್ರದಲ್ಲಿ ಆರಾಧನಾ ರಾಮ್​ ಅವರಿಗೆ ನಾಯಕನಾಗಿ ನಟ ದರ್ಶನ್‌ ನಟಿಸುತ್ತಿದ್ದಾರೆ. ಕಾಟೇರ ಸಿನಿಮಾ ಮೂಲಕವೇ ನಾಯಕಿ ಆಗಿರೋ ಆರಾಧನಾ ರಾಮ್ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಶೂಟಿಂಗ್ ಟೈಮ್‌ನಲ್ಲಿಯೇ ತಮ್ಮ ಪ್ರತಿಭೆ ಮುಖಾಂತರ ಆರಾಧನಾ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅದೇ ರೀತಿ ಮೊನ್ನೆ ರಿಲೀಸ್ ಆದ ಪಸಂದಾಗವನೆ ಹಾಡಿನ ಮೂಲಕವೂ ಕನ್ನಡಿಗರಿಗೆ ಹೊಸ ಭರವಸೆ ಮೂಡಿಸಿದ್ದಾರೆ. ಕಾಟೇರ ಚಿತ್ರವನ್ನ ರಾಕ್ ಲೈನ್ ವೆಂಕಟೇಶ್‌ ನಿರ್ಮಿಸಿದ್ದಾರೆ.  ತರುಣ್ ಸುಧೀರ್ ಅವರ ನಿರ್ದೇಶನವಿದೆ.  ಈ ಕಥೆ 70ರ ದಶಕದ ಹಿನ್ನೆಲೆಯಲ್ಲಿಯೇ ಇದೆ ಎನ್ನಲಾಗುತ್ತಿದೆ.

ಅಮೃತಾ ರಾಮಮೂರ್ತಿ-ರಾಘವೇಂದ್ರ ಕಿರುತೆರೆ ದಂಪತಿ ಡ್ಯಾನ್ಸ್​ ವೈರಲ್​: ವ್ಹಾರೆವ್ಹಾ ಎಂದ ಫ್ಯಾನ್ಸ್​

ಮುಂಬೈನಿಂದ ವಾಪಸಾಗುತ್ತಿದ್ದಂತೆಯೇ, ಮಾಲಾಶ್ರೀ ಅವರು ಪಸದಾಂಗವ್ನೆ ಸ್ಯಾನೆ ಪಸದಾಂಗವ್ವೆ ಹಾಡಿಗೆ ನಿಂತಲ್ಲಿಯೇ  ಒಂದೆರಡು ಸ್ಟೆಪ್​ ಹಾಕಿದ್ದಾರೆ. ಇದರ ರೀಲ್ಸ್​ ವೈರಲ್​ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾದ ಈ ರೀಲ್ಸ್​ ಅನ್ನು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ. ನೀವು ಸಕತ್​ ಪಸಂದ್ ಆಗಿ ಕಾಣಿಸುತ್ತಿದ್ದೀರಿ ಎನ್ನುತ್ತಿದ್ದಾರೆ. 

ಈ ಹಾಡಿಗೆ ಆರಾಧನಾ ಅವರು ಮಾಡಿದ ಡ್ಯಾನ್ಸ್​ ವಿಡಿಯೋ ರಿಲೀಸ್​ ಆದಾಗಲೂ ಫ್ಯಾನ್ಸ್​ ಥಹರೇವಾರಿ ಕಮೆಂಟ್​ ಮಾಡಿದ್ದರು. ತಾಯಿಯನ್ನು ಮೀರಿಸುವ ಟ್ಯಾಲೆಂಟ್‌, ಆರಾಧನಾಗೆ ಶುಭವಾಗಲಿ ಎಂದು ಹಲವರು ಶುಭ ಕೋರಿದ್ದರು.  ಹಾಡು ಪೂರ್ತಿ ಆರಾಧನಾ ತುಂಬಾ ಚೆನ್ನಾಗಿ ಕಾಣ್ತಾರೆ. ಡ್ಯಾನ್ಸ್‌ ಮೂವ್ಸ್‌, ಎಕ್ಸ್‌ಪ್ರೆಷನ್ಸ್‌ ಎಲ್ಲಾ ಮಾಲಾಶ್ರೀ ಮೇಡಮ್ ನೆನಪಿಸ್ತಾರೆ. ಒಳ್ಳೆ ಹೀರೋಯಿನ್ ಆಗೋ ಎಲ್ಲಾ ಲಕ್ಷಣ ಇದೆ. ದರ್ಶನ್​ ಅವರಿಗೆ  ಒಳ್ಳೆ ಜೋಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಮಾಲಾಶ್ರೀ ಅವರ ಸ್ಟೆಪ್​ಗೂ ಫ್ಯಾನ್ಸ್​ ಫಿದಾ ಆಗಿದ್ದಾರೆ. 

ಪ್ರವಾಹಕ್ಕೆ ಸಿಲುಕಿದ ರಜನೀಕಾಂತ್​ ಮನೆ! ನೀರು ನುಗ್ಗಿ ಅವಾಂತರ- ವೈರಲ್​ ವಿಡಿಯೋಗೆ ಫ್ಯಾನ್ಸ್​ ಶಾಕ್​
 

Follow Us:
Download App:
  • android
  • ios