ಸ್ಯಾಂಡಲ್‌ವುಡ್‌ನ ಖ್ಯಾತ ನಟಿ, ಕನಸಿನ ರಾಣಿ ಮಾಲಾಶ್ರೀ ಶಾರ್ಟ್ಸ್‌ನಲ್ಲಿ ಮಿಂಚಿದ್ದಾರೆ. ಮಾಲಾಶ್ರೀ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

ಕನ್ನಡ ಸಿನಿಮಾರಂಗದ ಕನಸಿನ ರಾಣಿ ಮಾಲಾಶ್ರೀ ವಯಸ್ಸು 49 ಆದರೂ ಕೂಡ ಇಂದಿಗೂ ಮಾಲಾಶ್ರೀ ಚಿತ್ರರಂಗದಲ್ಲಿ ತಮ್ಮ ಬೇಡಿಕೆಯನ್ನು ಇಟ್ಟುಕೊಂಡಿದ್ದಾರೆ. ತಮ್ಮ ನಂತರ ಮಗಳನ್ನು ಕೂಡ ಇಂಡಸ್ಟ್ರಿಗೆ ಪರಿಚಯಿಸಿರುವ ಮಾಲಾಶ್ರೀ ಇತ್ತೀಚಿಗಷ್ಟೇ ಶಾರ್ಟ್ ಡ್ರೆಸ್ ಹಾಕಿ ತಮ್ಮ ಮಗಳಿಗೆ ಟಕ್ಕರ್ ಕೊಟ್ಟಿದ್ದಾರೆ.

ಕನಸಿನ ರಾಣಿ ಮಾಲಾಶ್ರೀ ಅವರಿಗೆ ಅವರದ್ದೇ ಆದ ಫ್ಯಾನ್ಸ್ ಬಳಗವಿದೆ. ಮಾಲಾಶ್ರೀಯ ಅಂದ ಚಂದಕ್ಕೆ ಸಾವಿರಾರು ಅಭಿಮಾನಿಗಳು ಫಿದಾ ಆಗಿದ್ದರು. ತಮ್ಮ ಸಿನಿಮಾ ಕರಿಯರ್ ನಲ್ಲಿ ಮಾಲಾಶ್ರೀ ಲವ್ ಸ್ಟೋರಿ ಜೊತೆಗೆ ಆಕ್ಷನ್ ಕ್ವೀನಾಗಿಯೂ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಈಗಲೂ ಮಾಲಾಶ್ರೀ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಇಂದಿಗೂ ಕೂಡ ಬ್ಯಾಕ್ ಟು ಬ್ಯಾಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಾಲಾಶ್ರೀ ಸ್ಟೈಲ್ ನಲ್ಲಿ ದಿನದಿಂದ ದಿನಕ್ಕೆ ಅಪ್ಡೇಟ್ ಆಗಿದ್ದಾರೆ..

ಆಗಾಗ ಮುಂಬೈ ಗೆ ಭೇಟಿ ನೀಡುವ ಮಾಲಾಶ್ರೀ ಇತ್ತೀಚಿಗಷ್ಟೇ ಶಾಪಿಂಗ್ ಮಾಲ್ ಒಂದರಲ್ಲಿ ಕೋ ಆರ್ಡರ್ ಡ್ರೆಸ್ ಹಾಕಿ ಕನ್ನಡಿ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಮಾಲಾಶ್ರೀಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳು ಮಾಲಾಶ್ರೀ ಅವರ ಹೊಸ ಲುಕ್ಕಿಗೆ ಖುಷಿ ವ್ಯಕ್ತಪಡಿಸಿದ್ದಾರೆ.

ನಾಯಕಿಯಾಗಿ ಮಿಂಚಲು ಸಜ್ಜಾದ ರಾಧನಾ ರಾಮ್

ಪತಿ ರಾಮು ನಿರ್ಮಾಣದಲ್ಲಿ ಗುರುತಿಸಿಕೊಂಡಿರುವ ನಟಿ ಮಾಲಾಶ್ರೀ ನಿರ್ದೇಶನ ಹಾಗೂ ಅಭಿನಯದಲ್ಲಿ ಗುರುತಿಸಿಕೊಂಡಿದ್ದರು. ತಮ್ಮ ನೆಕ್ಸ್ಟ್ ಜನರೇಶನ್ ಕೂಡ ಚಿತ್ರರಂಗದಲ್ಲಿ ಇರಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಮಗಳಾದ ರಾಧನಾ ರಾಮ್ ಅವರನ್ನು ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯಿಸಿದ್ದಾರೆ. ಸದ್ಯ ರಿವಿಲ್ ಆಗಿರೋ ಲುಕ್ಕಿಗೆ ಕನ್ನಡ ಸಿನಿಮಾ ಅಭಿಮಾನಿಗಳು ಫಿದಾ ಆಗಿದ್ದಾರೆ.

View post on Instagram


ಮಗನ ಗ್ರಾಜುಯೇಷನ್‌ನಲ್ಲಿ ಭಾಗಿಯಾದ ನಟಿ ಮಾಲಾಶ್ರೀ; ಹೀಗೆ ನಗುತ್ತೀರಿ ಎಂದ ನೆಟ್ಟಿಗರು

ಮಗಳಿಗಿಂತ ಕಮ್ಮಿ ಇಲ್ಲ ಮಾಲಾಶ್ರೀ

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ನಟಿ ಮಾಲಾಶ್ರೀ ಅವರ ವಯಸ್ಸು 49 ಆಗಿದೆ. ಆದರೆ ಇಂದಿಗೂ ಕೂಡ ತಮ್ಮ ಚಾರ್ಮ್ ಹಾಗೂ ಲುಕ್ ಅನ್ನ ಕಳೆದುಕೊಂಡಿಲ್ಲ ಮಗಳಿಗೆ ಟಕ್ಕರ್ ಕೊಡುವಂತೆ ತಮ್ಮ ಸ್ಟೈಲನ್ನು ರೂಡಿಸಿಕೊಂಡಿದ್ದಾರೆ. ಕನಸಿನ ರಾಣಿ ಇತ್ತೀಚಿಗೆ ಆಕ್ಷನ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರಡ ಹಾಗಾಗಿ ಅದಕ್ಕೆ ತಕ್ಕದಾದಂತ ಹೇರ್ ಕಟ್ ಫಿಸಿಕ್ ಮೇಂಟೈನ್ ಮಾಡುತ್ತಿದ್ದಾರೆ ಸದ್ಯ ಮಾಲಾಶ್ರೀ ಅವ್ರ ಹೊಸ ಫೋಟೋಗಳನ್ನು ನೋಡಿರುವ ಅಭಿಮಾನಿಗಳು ಮಗಳಿಗೆ ಕಾಂಪಿಟೇಶನ್ ಕೊಡ್ತಿದ್ದಾರೆ ಕನಸಿನ ರಾಣಿ ಅಂತಿದ್ದಾರೆ