ಮಗನ ಗ್ರಾಜುಯೇಷನ್‌ನಲ್ಲಿ ಭಾಗಿಯಾದ ನಟಿ ಮಾಲಾಶ್ರೀ; ಹೀಗೆ ನಗುತ್ತೀರಿ ಎಂದ ನೆಟ್ಟಿಗರು
ಆರ್ಯನ್ ಗ್ರಾಜುಯೇಷನ್ ಡೇ ಪೋಟೋ ಹಂಚಿಕೊಂಡ ನಟಿ ಮಾಲಾಶ್ರೀ. ಕಾಮೆಂಟ್‌ನಲ್ಲಿ ಶುಭ ಕೋರಿದ ಅಭಿಮಾನಿಗಳು....

ಕನ್ನಡ ಚಿತ್ರರಂಗದ ಕನಸಿನ ರಾಣಿ, ಲೇಡಿ ರೆಬೆಲ್ ಸ್ಟಾರ್ ಮಾಲಾಶ್ರೀ ಪುತ್ರ ಆರ್ಯನ್ ಹೈ ಸ್ಕೂಲ್ ಗ್ರಾಜುಯೇಟ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ಫೋಟೋ ಹಂಚಿಕೊಂಡಿದ್ದಾರೆ.
'ನನ್ನ ಮಗನ ಹೈ ಸ್ಕೂಲ್ ಗ್ರಾಜುಯೇಷನ್ ದಿನ ಒಳ್ಳೆಯದಾಗಲಿ ಮಗನೇ. ನಮ್ಮ ಹೆಮ್ಮೆಯ ಕ್ಷಣ. ಲವ್ ಯು' ಎಂದು ಮಾಲಾಶ್ರೀ ಬರೆದುಕೊಂಡಿದ್ದಾರೆ.
'ಧನ್ಯವಾದಗಳು ಮೇಡಂ ನಿಮ್ಮ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಿ ಬೆಳೆಯಲಿ ಆ ಭಗವಂತನು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುವಂತೆ ಅನುಗ್ರಹಿಸಲಿ ದೇವರ ಆಶೀರ್ವಾದ ಹಾಗೂ ಅನುಗ್ರಹ ಸದಾ ಕಾಲ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಲಭಿಸಲಿ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಪುತ್ರ ಆರ್ಯನ್ ಓದುತ್ತಿರುವುದು ಎಲ್ಲಿ? ಗ್ರಾಜುಯೇಷನ್ ಎಲ್ಲಿ ನಡೆಯಿತ್ತು ಎಂಬುದರ ಬಗ್ಗೆ ಮಾಹಿತಿ ಇಲ್. ಆದರೆ ಮಾಲಾಶ್ರೀ ಸಂತೋಷ ನೋಡಿ ನೆಟ್ಟಿಗರು ಖುಷಿಯಾಗಿದ್ದಾರೆ.
ಮಾಲಾಶ್ರೀ ಪುತ್ರಿ ರಾಧನಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಸಿನಿಮಾಗೆ ನಾನ್ ಸ್ಟಾಪ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಭರ್ಜರಿ ಓಪನಿಂಗ್ ಸಿಗಲಿದೆ ಎನ್ನಬಹುದು.