ರಿಯಾಲಿಟಿ ಶೋನಿಂದ ಬಂದವರಿಗೆ ಯಾರೂ ಬಂಡವಾಳ ಹಾಕಲ್ಲ, ಹೀರೋ ಆಗೋದು ಕಷ್ಟ: ಮಡೆನೂರು ಮನು
ಕಿರುತೆರೆಯಿಂದ ಬೆಳ್ಳಿ ತೆರೆ ಪಾದಾರ್ಪಣೆ ಮಾಡಿದ ಮನು. ಕಷ್ಟ ಪಟ್ಟು ಇಷ್ಟ ಪಟ್ಟು ಒಂದೂವರೆ ವರ್ಷಗಳ ಕಾಲ ಪಾತ್ರಕ್ಕೆ ಕಸರತ್ತು ಮಾಡಿರುವ ಹಾಸ್ಯ ಕಲಾವಿದ......
ಜೀ ಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಸೀಸನ್ 2ರ ವಿಜೇತನಾಗಿ ಮಿಂಚಿದ ಮಡೆನೂರು ಮನು ಇದೀಗ ಬೆಳ್ಳಿ ಪರದೆಗೂ ಕಾಲಿಟ್ಟಿದ್ದಾರೆ. ಈಗಾಗಲೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ಮನು ಈಗ ಪ್ರಮುಖ ನಾಯಕನಾಗಿ 'ಕುಲದಲ್ಲಿ ಕೀಳ್ಯಾವುದೋ' ಚಿತ್ರದಲ್ಲಿ ಮಿಂಚುತ್ತಿದ್ದಾರೆ. ಸಂತೋಷ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಮನುಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು 'ರಾಮಾಚಾರಿ' ಸೀರಿಯಲ್ ನಟಿ ಮೌನ ಗುಡ್ಡೆಮನೆ.
'ರಿಯಾಲಿಟಿ ಶೋಯಿಂದ ಬಂದು ಹೀರೋ ಆಗಬೇಕು ಅಂದ್ರೆ ತುಂಬಾ ಕಷ್ಟ. ಚಿತ್ರರಂಗದ ಈಗಿನ ಪರಿಸ್ಥಿತಿಯಲ್ಲಿ ಹೊಸಬ್ಬರ ಮೇಲೆ ಬಂಡವಾಳ ಹಾಕುವುದು ಇನ್ನೂ ಕಷ್ಟ. ಚಿತ್ರರಂಗಕ್ಕೆ ಒಳ್ಳೆ ಕೊಡುಗೆ ಕೊಡಬೇಕು ಎಂದು ಸಂತೋಷ್ ಸರ್ ನನ್ನ ಮೇಲೆ ಬಂಡವಾಳ ಹಾಕಿರುವುದು ನಿಜಕ್ಕೂ ಇದು ದೊಡ್ಡ ಖುಷಿ. ಇದುವರೆಗೂ ನಾನು ಸಿನಿಮಾ ಮಾಡಿಕೊಂಡು ಬಂದಿದ್ದೀನಿ ಆಗ ಸ್ಟಾರ್ ಕಾಸ್ಟ್ ಮತ್ತು ಬಜೆಟ್ ತುಂಬಾ ಕಡಿಮೆ ಇತ್ತು ಆದರೆ ಈ ಚಿತ್ರಕ್ಕೆ ಸುಮಾರು ಒಂದೂವರೆ ವರ್ಷಗಳ ಕಾಲ ರೆಡಿಯಾಗಲು ಫೈಟ್ ಕಲಿತು ಜಿಮ್ ಮಾಡಿದ್ದೀನಿ ಹಾಗೂ ಡ್ಯಾನ್ಸ್ ಕಲಿತಿದ್ದೀನಿ. ಸಖತ್ ದಪ್ಪ ಆಗಿದ್ದೆ ಅದಕ್ಕೆ ಹೊಟ್ಟೆ ಮತ್ತು ಮುಖವನ್ನು ಕರಗಿಸಿದ್ದೀನಿ...ನಮಗೆ ಗಾಡ್ ಫಾದರ್ ಆಗಿ ನಿಂತಿರುವುದು ಯೋಗರಾಜ್ ಭಟ್ರು' ಎಂದು ಪ್ರೆಸ್‌ಮೀಟ್‌ನಲ್ಲಿ ಮಡೆನೂರು ಮನು ಮಾತನಾಡಿದ್ದಾರೆ.
ಮಧ್ಯರಾತ್ರಿ ಹಾಸಿಗೆಯಲ್ಲಿ ಮಲಗಿದ್ದ ದೆವ್ವ ನೋಡಿ ಬೆಚ್ಚಿಬಿದ್ದ ಸೀರುಂಡೆ ರಘು; ಘಟನೆ ಕೇಳಿ ಎಲ್ಲರಿಗೂ ಢವಢವ
'ರಾಜ್ಯದಲ್ಲಿ ಮಳೆ ಬಂದು ಏನ್ ಏನೋ ಆಯ್ತು ಆದರೆ ನಮ್ಮ ತಂಡದಲ್ಲಿ ಇದುವರೆಗೂ ಪ್ಯಾಕಪ್ ಅನ್ನೋ ಪದವನ್ನು ಬಳಸಿಲ್ಲ. ಶೆಡ್ಯೂಲ್ ಪ್ಲ್ಯಾನ್ ಮಾಡಿದ ಹಾಗೆ ಅಂದಿನ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೀವಿ. ಹೊಸಬರಿಗೆ ಸ್ಟಾರ್ ಕಾಸ್ಟ್ ಕೊಡುವುದು ತುಂಬಾ ಕಡಿಮೆ ಆದರೆ ನನಗೆ ಸೀನಿಯರ್ ಕಲಾವಿದರನ್ನು ಜೊತೆ ಕೊಟ್ಟಿದ್ದಾರೆ' ಎಂದು ಮನು ಹೇಳಿದ್ದಾರೆ.
ನಿಮ್ಮ ಕನಸಿನಲ್ಲಿ ಹಾವು ಬರ್ತಿದ್ಯಾ? ಹಾಗಿದ್ರೆ ಈ ಸೂಚನೆಗಳನ್ನು ನಿರ್ಲಕ್ಷಿಸಬೇಡಿ