ಪವನ್ ಕುಮಾರ್ ಡೈರೆಕ್ಟ್ ಮಾಡಿರೋ ಸಖತ್ ಹೈಪ್ ಕ್ರಿಯೇಟ್ ಮಾಡಿದ ಸಿನಿಮಾ 'ಲೂಸಿಯಾ'. ಈ ಸಿನಿಮಾ ಬಂದು ಹತ್ತು ವರ್ಷಗಳಾಗಿದೆ. ಈ ಹಿನ್ನೆಲೆಯಲ್ಲಿ ಲೂಸಿಯಾ ಜೋಡಿಯ ಪುನರ್ ಮಿಲನವಾಗಿದೆ. 

'ಲೂಸಿಯಾ' ಸಿನಿಮಾ ರಿಲೀಸ್ ಆಗಿ ಭರ್ಜರಿ ಹತ್ತು ವರ್ಷಗಳಾಗಿವೆ. ಈ ಸಿನಿಮಾ ಬರೋ ಮೊದಲು ನಿರ್ದೇಶಕ ಪವನ್ ಕುಮಾರ್ ಬಗ್ಗೆ ಸ್ಯಾಂಡಲ್‌ವುಡ್‌ಗೆ ಗೊತ್ತಿರಲಿಲ್ಲ. ಮೂಲತಃ ಟೆಕ್ಕಿ ಆಗಿರೋ ಪವನ್ ಕುಮಾರ್ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕಾಲೂರುವ ಎಲ್ಲ ಸಾಧ್ಯತೆಯನ್ನು ಕಂಡುಕೊಂಡರು. ಇವತ್ತಿಗೂ ಪವನ್​ ಕುಮಾರ್​ ಅವರು ಡಿಫರೆಂಟ್ (Diffearent) ​ ಆಗಿ ಗುರುತಿಸಿಕೊಂಡಿದ್ದಾರೆ. ‘ಲೂಸಿಯಾ’ ಸಿನಿಮಾದಲ್ಲಿ ಅವರು ಹೇಳಿದ ಕಥೆ ಸಖತ್​ ಭಿನ್ನವಾಗಿತ್ತು. ನಟ ಸತೀಶ್​ ನೀನಾಸಂ ಅವರಿಗೆ ಈ ಚಿತ್ರದಿಂದ ಜನಪ್ರಿಯತೆ (Popularity) ಹೆಚ್ಚಿತ್ತು. 10 ವರ್ಷಗಳನ್ನು ಪೂರೈಸಿರುವ ಕಾರಣಕ್ಕೆ ಸೆ.6ರಂದು ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಹಾಗೂ ಶೃತಿ ಹರಿಹರನ್ ಜೋಡಿ ಎಲ್ಲರಿಗೂ ಮೋಡಿ ಮಾಡಿತ್ತು. ಲೂಸಿಯಾ ಸಿನಿಮಾದ ಕಾಂಸೆಪ್ಟೇ ವಿಭಿನ್ನವಾಗಿದ್ದು ಉಪೇಂದ್ರ ಅವರ 'ಬುದ್ಧಿವಂತರಿಗೆ ಮಾತ್ರ' ಅನ್ನೋ ಟ್ಯಾಗ್‌ಲೈನ್‌ಗೆ ಪೂರಕವಾಗಿರುವ ಹಾಗೆ ಇತ್ತು.

2013ರ ಸೆ.6ರಂದು ಬಿಡುಗಡೆ ಆದ ಆ ಚಿತ್ರದ ಬಗ್ಗೆ ಸಿನಿಪ್ರಿಯರು ಈಗಲೂ ಮಾತನಾಡುತ್ತಾರೆ. ಈಗ ‘ಲೂಸಿಯಾ’ ಸಿನಿಮಾ 10 ವರ್ಷಗಳನ್ನು ಪೂರೈಸಿದೆ. ಆ ಪ್ರಯುಕ್ತ ಸೆಪ್ಟೆಂಬರ್​ 6ರಂದು ಈ ಚಿತ್ರ ಮತ್ತೆ ರಿಲೀಸ್ (re elease)​ ಆಗುತ್ತಿದೆ. ಅಂದು ದೊಡ್ಡ ಪರದೆಯಲ್ಲಿ ಈ ಸಿನಿಮಾವನ್ನು ಮಿಸ್ (Miss)​ ಮಾಡಿಕೊಂಡವರು ಈಗ ನೋಡಿ ಎಂಜಾಯ್​ ಮಾಡಬಹುದು. ಈ ಸಿನಿಮಾದಲ್ಲಿ ಕನಸು ಮತ್ತು ವಾಸ್ತವದ ಜಗತ್ತನ್ನು ಒಟ್ಟಾಗಿ ತೋರಿಸುವ ಮೂಲಕ ಪವನ್ ಕುಮಾರ್ ಅವರು ಪ್ರೇಕ್ಷಕರ ಮನ ಗೆದ್ದರು. ಈ ಭಿನ್ನವಾದ ಕಥೆಯನ್ನು ಹೇಳಲು ಅವರು ಬಳಸಿದ ವಿಭಿನ್ನ ನಿರೂಪಣಾ ತಂತ್ರವೂ ಸಖತ್ ಹೈಪ್ (Hype) ಕ್ರಿಯೇಟ್ ಮಾಡಿತ್ತು.

ಸಾನ್ಯಾ ಅಯ್ಯರ್ ಕೊರಳಲ್ಲಿ ಪಚ್ಚೆ ನೆಕ್ಲೇಸ್; ಬೆಲೆ ಹೇಳಮ್ಮ 'ಗೌರಿ' ಎಂದ ಹೆಂಗಸರು!

‘ಲೂಸಿಯಾ’ ಸಿನಿಮಾದಲ್ಲಿ ಸತೀಶ್​ ನೀನಾಸಂ ಮತ್ತು ಶ್ರುತಿ ಹರಿಹರನ್​ ಅವರು ಜೋಡಿಯಾಗಿ ನಟಿಸಿದ್ದರು. ಇಬ್ಬರ ಕಾಂಬಿನೇಷನ್​ ಬಹಳ ಚೆನ್ನಾಗಿ ಮೂಡಿಬಂದಿತ್ತು. ಅಚ್ಯುತ್​ ಕುಮಾರ್​, ಬಾಲಾಜಿ ಮನೋಹರ್​ ಮುಂತಾದ ಕಲಾವಿದರು ನಿಭಾಯಿಸಿದ ಪಾತ್ರಗಳು ಕೂಡ ಗಮನ ಸೆಳೆದಿದ್ದವು. ಮಂಡ್ಯ ಸೊಗಡಿನ ಭಾಷೆಯಲ್ಲಿ ಸತೀಶ್​ ನೀನಾಸಂ ಅವರು ಹೇಳಿದ ಡೈಲಾಗ್​ಗಳು ತುಂಬ ಕ್ಯಾಚಿ ಆಗಿದ್ದವು. ಒಟ್ಟಾರೆ ಈ ಸಿನಿಮಾದ ಮೇಕಿಂಗ್​ ಡಿಫರೆಂಟ್​ ಆಗಿತ್ತು. ಕ್ರೌಡ್​ ಫಂಡಿಂಗ್​ ಮೂಲಕ ಈ ಚಿತ್ರ ನಿರ್ಮಾಣ ಆಗಿತ್ತು. ಇದೀಗ ಈ ಸಿನಿಮಾವನ್ನು ಮತ್ತೊಮ್ಮೆ ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಈಗ ಸಿಗುತ್ತಿದೆ. ಅದು ಸಿನಿಪ್ರಿಯರಿಗೆ ಖುಷಿ ನೀಡಿದೆ.

ಅಷ್ಟೇ ಅಲ್ಲ, ಈ ಸಿನಿಮಾದ ಹಾಡುಗಳೂ ಸಖತ್ ಹಿಟ್ ಆದವು. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಖತ್ ಕಿಕ್ ನೀಡಿದರೆ ಈ ಸಿನಿಮಾದ ನೆವದಲ್ಲಿ ಕನ್ನಡಕ್ಕೆ ನವೀನ್ ಸಜ್ಜು ಅವರಂಥಾ ದೇಸಿ ಕಂಠದ ಗಾಯಕ ಸಿಗುವಂತಾಯ್ತು. ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಈ ಗಾಯಕನ ದನಿಗೆ ಮಾರು ಹೋಗಿ ಆತನ ಮನೆ ಹುಡುಕಿಕೊಂಡು ಹೋಗಿ ಆತನನ್ನು ಭೇಟಿ ಮಾಡಿದ್ದು ಒಂದು ಕಥೆಯಾದರೆ, ಆ ಬಳಿಕ ತಪಸ್ಸಿನಂತೆ ಈ ಹುಡುಗನನ್ನು ಫೇಮಸ್ ಸಿಂಗರ್ ಆಗಿ ಬದಲಾಯಿಸಿದ್ದು ಇನ್ನೊಂದು ಕಥೆ. ಈ ಎಲ್ಲ ಶ್ರೇಯಸ್ಸು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರಿಗೆ ಹೋಗುತ್ತೆ.

ಈ ಸಿನಿಮಾಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಸಿನಿಮಾದ ಹೀರೋ ಮತ್ತು ಹೀರೋಯಿನ್ ಪುನರ್‌ ಮಿಲನವಾಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ. 'ಲೂಸಿಯಾ' ಈ ಇಬ್ಬರು ಕಲಾವಿದರ ಲೈಫಲ್ಲೂ ಉತ್ತಮ ಬೆಳವಣಿಗೆ ತಂದುಕೊಟ್ಟ ಸಿನಿಮಾ. ಇದೀಗ ಈ ಸಿನಿಮಾಕ್ಕೆ ಹತ್ತು ವರ್ಷವಾದ ಹಿನ್ನೆಲೆಯಲ್ಲಿ ಪವನ್ ಕುಮಾರ್, ಶ್ರುತಿ ಹರಿಹರನ್ ಮತ್ತು ನೀನಾಸಂ ಸತೀಶ್ ಭೇಟಿ ಮಾಡಿ ಸಿನಿಮಾ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಕೊರಗಜ್ಜನ ಆಧಿಸ್ಥಳದಲ್ಲಿ ನೆಮ್ಮದಿ ಇದೆ: ಮೂರು ತಿಂಗಳಿಗೊಮ್ಮೆ ನಟಿ ರಕ್ಷಿತಾ ಬರ್ತಿರೋದು ಈ ಕಾರಣಕ್ಕೆ!