‘ಲೂಸಿಯಾ’ ಚಿತ್ರದ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ಹೊಸ ಸಾಹಸಕ್ಕೆ ಮೊರೆ ಹೋಗಿದ್ದಾರೆ. ಈಗವರು ಬೆಳ್ಳಿತೆರೆ ಮೇಲೆ ಹೊಸ ರೀತಿಯಲ್ಲೇ ಕಾಣಿಸಿಕೊಳ್ಳಲು ರೆಡಿ ಆಗುತ್ತಿದ್ದಾರೆ. ‘ಯೂಟರ್ನ್‌’ಚಿತ್ರದ ನಂತರ ಪವನ್‌ ಬಿಗ್‌ ಬಜೆಟ್‌ ಚಿತ್ರವೊಂದರ ನಿರ್ದೇಶನಕ್ಕೆ ತಯಾರಿ ನಡೆಸುತ್ತಿದ್ದಾರೆಂದೇ ಸುದ್ದಿ ಆಗಿತ್ತು. ಆದರೆ ಅವರು ‘ಗಾಳಿಪಟ 2’ ಚಿತ್ರದೊಂದಿಗೆ ನಟನೆಯತ್ತ ಯೂಟರ್ನ್‌ ತೆಗೆದುಕೊಂಡಿದ್ದಾರೆ. ಅದರ ನಡುವೆಯೇ ಈಗ ಬಾಕ್ಸಿಂಗ್‌ ಕಲೆಗಳಲ್ಲಿ ಒಂದಾದ ‘ಮುವಾಯ್‌ ಥಾಯ್‌’ ಸಾಹಸ ಕಲೆಯ ತರಬೇತಿ ಪಡೆಯುತ್ತಿರುವುದು ಕುತೂಹಲ ಮೂಡಿಸಿದೆ.

ಪವನ್‌ಗೆ ಫಿದಾ ಆದ ಸಮಂತಾ

ನಿರ್ದೇಶಕ ಪವನ್‌ ಕುಮಾರ್‌ ‘ಮುವಾಯ್‌ ಥಾಯ್‌’ ತರಬೇತಿ ಪಡೆದುಕೊಳ್ಳುತ್ತಿರುವುದರ ಉದ್ದೇಶ ಸದ್ಯಕ್ಕೆ ರಿವೀಲ್‌ ಆಗಿಲ್ಲ. ಆದರೆ ಆ ಸಾಹಸ ಕಲೆಯ ಕಲಿಕೆಗಾಗಿಯೇ ಅವರೀಗ ಥಾಯ್‌ಲ್ಯಾಂಡ್‌ಗೆ ತೆರೆಳಿದ್ದಾರೆ. ಮೂರ್ನಾಲ್ಕು ದಿನಗಳಿಂದ ಅಲ್ಲಿನ ನುರಿತ ಮಾರ್ಷಲ್ಸ್‌ ಆರ್ಟ್ ತರಬೇತು ದಾರರಿಂದ ಕಲಿಕೆಯಲ್ಲಿ ನಿರತರಾಗಿದ್ದಾರೆ. ಕಲಿಕೆಯ ಆ ವಿಡಿಯೋವೊಂದನ್ನು ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಸಿನಿಮಾ ಪ್ರೇಮಿಗಳಿಗೆ ಸರ್ಪೈಸ್ ನೀಡಿರುವ ಅವರು,ಅದು ಕಲಿಕೆಗೆ ಮಾತ್ರ ಅಂತ ಸ್ಪಷ್ಟನೆ ನೀಡಿದ್ದಾರೆ.

 

 

‘ಜೀವನದಲ್ಲಿ ಏನಾದರೂ ಹೊಸತು ಮಾಡಬೇಕೆನ್ನುವ ಆಸೆ ನನ್ನದು. 37ನೇ ವರ್ಷದಲ್ಲಿ ನಾನು ‘ಮುವಾಯ್‌ ಥಾಯ್’ ತರಬೇತಿ ಪಡೆದುಕೊಂಡಿದ್ದೇನೆ. ವಯಸ್ಸು ಎನ್ನುವುದು ಕೇವಲ ಸಂಖ್ಯೆ ಅಷ್ಟೇ’ ಎಂದು ಪೋಸ್ಟ್‌ ಹಾಕಿದ್ದಾರೆ. ಅ. 29ಕ್ಕೆ ಅವರು 37ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡರು. ಈ ವರ್ಷದ ಹುಟ್ಟುಹಬ್ಬಕ್ಕೆ ಮುಯ್‌ ಥಾಯ್‌ ಕಲಿಕೆ ಎನ್ನುವ ವಿಶೇಷತೆಯ ಜತೆಗೆ ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದಿದ್ದಾರೆ.ಸದ್ಯಕ್ಕೆ ಅವರು ಮುಯ್‌ ಥಾಯ್‌ ಕಲಿಯುತ್ತಿರುವುದು ಸಮ್ಮನೆ ಮಾತ್ರ ಎನ್ನುತ್ತಿದ್ದಾರೆ. ಆದರೆ ಅವರೀಗ ಯೋಗರಾಜ್‌ ಭಟ್‌ ನಿರ್ದೇಶನದ ‘ಗಾಳಿಪಟ 2’ನಲ್ಲಿ ಅಭಿನಯಿಸುತ್ತಿದ್ದಾರೆ. ಆ ಪಾತ್ರಕ್ಕಾಗಿಯೇ ಪವನ್‌ ಮುವಾಯ್‌ ಥಾಯ್‌ ಕಲಿತಿರಬಹುದೆನ್ನುವ ಲೆಕ್ಕಚಾರವೂ ಇದೆ.