Love Mocktail ಚಿತ್ರದಲ್ಲಿ ಮಲಯಾಳಂ ನಟಿ, ಕನ್ನಡದ ಮಾತುಗಳನ್ನು ಕೇಳಿ ಫಿದಾ ಆದ ಫ್ಯಾನ್ಸ್!
ಸಹಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಲಯಾಳಂ ನಟಿ. ಕನ್ನಡ ಮಾತನಾಡುವ ಶೈಲಿಗೆ ಅಭಿಮಾನಿಗಳು ಫಿದಾ.
ರಾಜ್ಯಾದ್ಯಂತ ಲವ್ ಮಾಕ್ಟೇಲ್ 2 (Love mocktail 2) ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನವೇ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಪ್ರತಿಯೊಬ್ಬ ಪಾತ್ರದಾರಿಗೂ ಪ್ರಮುಖ್ಯತೆ ನೀಡಲಾಗಿದೆ ಎಂದು ಫಸ್ಟ್ ಡೇ ಫಸ್ಟ್ ಶೋ ನೋಡಿದ ಸಿನಿ ರಸಿಕರು ಹೇಳುತ್ತಿದ್ದಾರೆ. ಅದರಲ್ಲೂ ಸಿಹಿ ಪಾತ್ರದಾರಿ ರೇಚಲ್ ಡೇವಿಡ್ (Rachel David) ಕನ್ನಡ ಮಾತನಾಡಿರುವ ಶೈಲಿ ಎಲ್ಲರ ಗಮನ ಸೆಳೆದಿದೆ.
ಮೂರ್ನಾಲ್ಕು ಮಲಯಾಳಂ (Mollywood) ಸಿನಿಮಾಗಳಲ್ಲಿ ನಟಿಸಿರುವ ರೇಚಲ್ ಡೇವಿಡ್ ಇದೀಗ ಕನ್ನಡದ ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಆರಂಭಿಸುವ ಮುನ್ನ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ ವರ್ಕ್‌ಶಾಪ್ (Milana Nagaraj) ಮಾಡುತ್ತಾರೆ, ಈ ವೇಳೆ ರೇಚಲ್‌ಗೆ ಕನ್ನಡ ಕಲಿಯುಯಲು ಸುಲಭ ಎಂದೆನಿಸುತ್ತದೆ. ಏಕೆಂದರೆ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಮತ್ತು ಮಾಧ್ಯಮ ಸ್ನೇಹಿತರ ಜೊತೆ ಮಾತನಾಡಿದ ರೇಚಲ್ ಕನ್ನಡ ಭಾಷೆ ಬಗ್ಗೆ ಗೌರವ ವ್ಯಕ್ತ ಪಡಿಸಿದ್ದಾರೆ. ಕನ್ನಡ ಗೊತ್ತಿದ್ದು, ಬೇರೆ ಭಾಷೆಗೆ ಕಾಲಿಟ್ಟ ನಂತರ ಕನ್ನಡವೇ ಗೊತ್ತಿಲ್ಲ ಎನ್ನುವ ಹೆಣ್ಣು ಮಕ್ಕಳ ನಡುವೆ ನೀವು ಇರುವುದು ಅಪರೂಪ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
'ಮಾತನಾಡುವ ಮುಂಚೆಯೇ ಹೇಳ್ತೀನಿ ನನ್ನ ಕನ್ನಡದಲ್ಲಿ (Kannada) ಏನಾದರೂ ಗ್ರಾಮರ್ ತಪ್ಪು ಇದ್ದರೆ ಕ್ಷಮಿಸಿ,' ಎಂದು ರೇಚಲ್ ಮಾತು ಶುರು ಮಾಡಿದ್ದಾರೆ. 'ನನಗೆ ಮುಂಚೆ ತುಂಬಾ ಭಯ ಇತ್ತು, ಹೇಗೆ ಕನ್ನಡ ಪ್ರೇಕ್ಷಕರು ನನ್ನನ್ನು ಒಪ್ಪಿಕೊಳ್ಳುತ್ತಾರೆಂದು. ಆದರೆ ನೀವು ಕೊಟ್ಟಿರುವ ಪ್ರೀತಿ ಮತ್ತು ಸಪೋರ್ಟ್ (Love and Support) ನನಗೆ ಪ್ರೋತ್ಸಾಹ ನೀಡಿದೆ.ಅದಕ್ಕೆ ಧನ್ಯವಾದಗಳು. ಈ ಕ್ರೆಡಿಟ್ ಕೃಷ್ಣ ಸರ್ ಮತ್ತು ಮಿಲನಾಗೆ ಸೇರಬೇಕು. ನನ್ನ ನಂಬಿ ಒಳ್ಳೆ ಪಾತ್ರ ಕೊಟ್ಟಿದ್ದಾರೆ ಸಿಹಿ ಅಂತ. ಒಂದು ಮಲಯಾಳಿ ಹುಡುಗಿಯನ್ನು ಕನ್ನಡ ವೀಕ್ಷಕರ ಮುಂದೆ ತಂದಿದ್ದಾರೆ,' ಎಂದು ರೇಚಲ್ ಮಾತನಾಡಿದ್ದಾರೆ.
ಕನ್ನಡಿ ಮುಂದೆ ನಿಂತು ಅಳುತ್ತಿದ್ದೆ, ಸೂಸೈಡ್ ಯೋಚನೆ ಬರುತ್ತಿತ್ತು: ಡಾರ್ಲಿಂಗ್ ಕೃಷ್ಣ'ನಾನು ಮಲಯಾಳಿ. ಹುಟ್ಟಿದ್ದು ಬೆಳೆದ್ದು ಬೆಂಗಳೂರಿನಲ್ಲಿ (Bengaluru). ಮಲಯಾಳಂನಲ್ಲಿ ನಾನು ನಾಲ್ಕು ಸಿನಿಮಾ ಮಾಡಿರುವೆ. ಲಾಕ್‌ಡೌನ್ (Covid19 lockdown) ಸಮಯದಲ್ಲಿ ನನಗೆ ಒಂದು ಫೋನ್ ಬಂತು. ಈ ತರ ಒಂದು ಕ್ಯಾರೆಕ್ಟರ್ ಇದೆ, ಆಡಿಷನ್ ಕೊಡ್ತೀರಾ ಎಂದು. ಎಲ್ಲಾ ಆದ್ಮೇಲೆ ನನ್ನ ಒಪ್ಪಿಗೆ ಆಗಿದ್ದು. ನಾನು 16 ವರ್ಷವಿದ್ದಾಗ ಮಾಡೆಲಿಂಗ್ ಜರ್ನಿ ಆರಂಭಿಸಿದ್ದು. ವರ್ಷ ಕಳೆಯುತ್ತಿದ್ದಂತೆ, ನಾನು ಆ್ಯಕ್ಟಿಂಗ್ ಕಲಿತುಕೊಂಡೆ. ಅಮೇಲೆ ನನಗೆ ಇಷ್ಟ ಆಗಿ, ಈ ಜರ್ನಿ ಶುರು ಮಾಡಿದೆ,' ಎಂದು ರೇಚಲ್ ಹೇಳಿದ್ದಾರೆ.
ಮುಗಿಯದ ಪ್ರೇಮದ ಮುಂದುವರಿದ ಪ್ರಯಾಣ; Love Mocktail 2 ಕೃಷ್ಣ ಸಂದರ್ಶನ'ಸಿನಿಮಾದಲ್ಲಿ ನನ್ನ ಕ್ಯಾರೆಕ್ಟರ್ ಸಿಹಿ (Sihi) ಅಂತ. ನಾನು ಜಾಸ್ತಿ ಹೇಳಿದ್ರೆ ನಮ್ಮ ನಿರ್ದೇಶಕರು ಬೈತಾರೆ. ಹುಡುಗಿ ಪ್ರೀತಿ ನೋಡುವ ರೀತಿ ಅವರು ಯೋಚಿಸುವ ರೀತಿಯನ್ನು ಅದ್ಭುತವಾಗಿ ತೋರಿಸಿದ್ದಾರೆ,' ಎಂದು ರೇಚಲ್ ಸಿನಿಮಾ ಬಗ್ಗೆ ಸಣ್ಣ ಸುಳಿವು ನೀಡಿದ್ದಾರೆ.