ನಟಿ ರಚಿತಾ ರಾಮ್ ಹಾಗೂ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ ಚಿತ್ರಕ್ಕೆ ‘ಲವ್ ಮಿ ಆರ್ ಹೇಟ್ ಮಿ’ ಎನ್ನುವ ಹೆಸರು ಇಟ್ಟಿದ್ದಾರೆ.  

ದೀಪಕ್ ಗಂಗಾಧರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಡಿಂಪಲ್ ಕ್ವೀನ್ ಹಾಗೂ ಕೃಷ್ಣ ಜತೆಯಾಗುತ್ತಿದ್ದು, ಇದೊಂದು ರೊಮ್ಯಾಂಟಿಕ್ ಡ್ರಾಮಾ ಕತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಾ ರಾಜ್‌ಕುಮಾರ್ ಅವರ ‘ಶಂಕರ್ ಗುರು’ ಚಿತ್ರದಲ್ಲಿ ಬರುವ ಲವ್ ಮೀ ಆರ್ ಹೇಟ್ ಮೀ ಹಾಡಿನ ಮೂಲಕ ಕತೆಯ ಸಾಲನ್ನು ತೆಗೆದುಕೊಂಡು ದೀಪಕ್ ಗಂಗಾಧರ್ ಈ ಸಿನಿಮಾ ಮಾಡುತ್ತಿದ್ದಾರೆ. ಕ್ಲಾಸಿಕ್ ಪ್ರೇಮ ಕತೆಯನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದು, ಆ ಕಾರಣಕ್ಕೆ ಹಳೆಯ ಚಿತ್ರದ ಹಾಡಿನ ಸಾಲನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ.

ನಟಿ ಮಿಲನಾ ನಾಗರಾಜ್‌ ಕುಟುಂಬಕ್ಕೆ ಹೊಸ ಅತಿಥಿ ಆಗಮನ! 

ಶ್ರೀಧರ್ ವಿ ಸಂಭ್ರಮ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಕೆ ಎಂ ಪ್ರಕಾಶ್ ಚಿತ್ರದ ಸಂಕಲನ ಕೆಲಸ ಮಾಡಲಿದ್ದಾರೆ.

View post on Instagram